yuzvendra chahal and dhanashree verma: 4 ವರ್ಷಗಳ ಹಿಂದೆ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವಿವಾಹವಾದರು. 3 ವರ್ಷಕ್ಕೂ ಹೆಚ್ಚು ಕಾಲ ಸುಖವಾಗಿದ್ದಾಗ ಈ ಜೋಡಿ ದಿಢೀರ್ ವಿಚ್ಚೇಧನಕ್ಕೆ ಕಾರಣವೇನು ತಿಳಿದಿಲ್ಲ.
ಭಾರತ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಇದನ್ನು ಓದಿ:ಹಾನಿಗೊಳಗಾದ ಚಾರ್ಜರ್ ವೈರ್ಗೆ ನೀವು ಟೇಪ್ ಸುತ್ತಿ ಬಳಸುತ್ತೀರಾ? ಮೊದಲು ನಿಲ್ಲಿಸಿ!
ಇನ್ಸ್ಟಾಗ್ರಾಮ್ನಲ್ಲಿ ಚಹಾಲ್ ಮತ್ತು ಧನಶ್ರೀ ಪರಸ್ಪರ ಅನ್ಫಾಲೋ ಮಾಡಿದಾಗ ಈ ಸುದ್ದಿ ಚರ್ಚೆಗೆ ಆಸ್ಪದ ನೀಡಿತು. ಅಂತೆಯೇ ಚಾಹಲ್ ಧನಶ್ರೀ ಜೊತೆಗಿನ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ,ಧನಶ್ರೀ ಚಾಹಲ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ ಫಾಲೋ ಮಾಡಿದ್ದರೂ, ಅವರ ಫೋಟೋಗಳನ್ನು ಡಿಲೀಟ್ ಮಾಡಿಲ್ಲ. ಇದರಿಂದ ಗೊಂದಲಕ್ಕೊಳಗಾದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇವರ ನಡುವೆ ಏನಾಯಿತು ಎನ್ನುವಂತಾಗಿದೆ.
ಇತ್ತೀಚೆಗಷ್ಟೇ ಖಾಸಗಿ ಸುದ್ದಿ ಸಂಸ್ಥೆಯೊಂದು ಭಾರತ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ನಡುವಿನ ವಿಚ್ಛೇದನ ಅಂತಿಮ ಎಂದು ವರದಿ ಮಾಡಿದೆ. ಇನ್ನೂ ಅಧಿಕೃತವಾಗಿ ಘೋಷಣೆ ಮಾತ್ರ ಮಾಡಿಲ್ಲ ಎಂದು ಹೇಳಿದೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಚಹಾಲ್ ಮತ್ತು ಧನಶ್ರೀ ಕಡೆಯಿಂದ ಇದುವರೆಗೆ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. 2020 ರ ಡಿಸೆಂಬರ್ 11 ರಂದು ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವಿವಾಹವಾದರು. 3 ವರ್ಷಕ್ಕೂ ಹೆಚ್ಚು ಕಾಲ ಇಬ್ಬರೂ ಸುಖವಾಗಿದ್ದಾಗ ಈ ದಿಢೀರ್ ಮನಸ್ತಾಪಕ್ಕೆ ಕಾರಣವೇನು ಎಂಬುದು ತಿಳಿದಿಲ್ಲ.
ಇಬ್ಬರ ನಡುವಿನ ವಿಚ್ಛೇದನದ ವದಂತಿಗಳು ಬಹಳ ಸಮಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಅವರ ಅಗಲಿಕೆಗೆ ಕಾರಣ ಇನ್ನೂ ಬಹಿರಂಗವಾಗಿಲ್ಲ.
ಧನಶ್ರೀ ವರ್ಮಾ ಅವರು ಯುಜ್ವೇಂದ್ರ ಚಹಾಲ್ ಅವರೊಂದಿಗಿನ ಪ್ರೇಮಕಥೆಯನ್ನು ಝಲಕ್ ತಿಗ್ಲಾ ಜಾ 11 ಎಂಬ ಟಿವಿ ಶೋನಲ್ಲಿ ಬಹಿರಂಗಪಡಿಸಿದರು. ಕರೋನಾ ಲಾಕ್ಡೌನ್ ಸಮಯದಲ್ಲಿ ನೃತ್ಯ ಕಲಿಯಲು ಚಹಾಲ್ ಅವರನ್ನು ಸಂಪರ್ಕಿಸಿದರು ಮತ್ತು ನಂತರ ಧನಶ್ರೀ ಅವರಿಗೆ ನೃತ್ಯ ಕಲಿಸಲು ಒಪ್ಪಿಕೊಂಡರು ಎಂದು ಅವರು ಹೇಳಿದರು. ತರುವಾಯ, ಇಬ್ಬರೂ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದರು ಮತ್ತು ಡಿಸೆಂಬರ್ 2020 ರಲ್ಲಿ ವಿವಾಹವಾದರು.
ವರ್ಷದ ಹಿಂದೆ ಬ್ರೇಕ್ ಅಪ್?
2023 ರಲ್ಲಿ, ಯುಜ್ವೇಂದ್ರ ಚಹಾಲ್ ತಮ್ಮ ಸಾಮಾಜಿಕ ಮಾಧ್ಯಮ ಪುಟವಾದ Instagram ನಲ್ಲಿ ಒಂದು ಸ್ಟೋರಿ ಹಾಕಿಕೊಂಡಿದ್ದರು. ಆಗ ಧನಶ್ರೀ ತಮ್ಮ ಹೆಸರಿನ ಹಿಂದೆ ಇದ್ದ ಚಹಾಲ್ ಎಂಬ ಮನೆತನದ ಹೆಸರನ್ನು ಕೈಬಿಟ್ಟು ಧನಶ್ರೀ ವರ್ಮಾ ಎಂದು ಬದಲಾಯಿಸಿದ್ದಾರೆ. ಅದರ ನಂತರ, ಅವರ ವಿಚ್ಛೇದನದ ಬಗ್ಗೆ ವದಂತಿಗಳು ಬಲಗೊಳ್ಳಲು ಪ್ರಾರಂಭಿಸಿದವು.
ಅತ್ಯುತ್ತಮ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಸದ್ಯ ಭಾರತ ತಂಡದಿಂದ ಹೊರಗಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಆದರೆ, ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಅವರು ಜನವರಿ 2023 ರಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ODI ಮತ್ತು ಆಗಸ್ಟ್ 2023 ರಲ್ಲಿ ಅವರ ಕೊನೆಯ T20I ಅನ್ನು ಆಡಿದರು. ಮುಂಬರುವ ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಇದಕ್ಕೂ ಮುನ್ನ ತಂಡ ಚಹಾಲ್ ಗೆ ರೂ. 18 ಕೋಟಿ ಬಿಡ್ ಮಾಡಿದೆ.ಇದನ್ನು ಓದಿ: ಶೀಘ್ರದಲ್ಲೇ ಬರಲಿದೆ ವಾಟಾಪ್ಸ್ ಹೊಸ ಫೀಚರ್! ಫೋಟೋ ಹುಡುಕಾಟಕ್ಕೆ ಬೀಳಲಿದೆ ಕಡಿವಾಣ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ