ಕೆಲವರಿಗೆ ಜೀವನದಲ್ಲಿ ದುಡ್ಡೇ ಎಲ್ಲಾ ಆಗಿರುತ್ತದೆ. ಇನ್ನು ಕೆಲವರು ಜೀವನ ನಡೆಸುವುದಕ್ಕೆ ದುಡ್ಡು ಇದ್ದರೆ ಸಾಕು ಎನ್ನುವ ಭಾವ ಹೊಂದಿರುತ್ತಾರೆ.
ಬೆಂಗಳೂರು : ರಾಶಿಗನುಗುಣವಾಗಿ ನೋಡಿದರೆ ಕೆಲವು ರಾಶಿಯವರು ಹಣ ಕೂಡಿಡುವುದರಲ್ಲಿ ಎತ್ತಿದ ಕೈ. ಕೈಯ್ಯಲ್ಲಿ ಎಷ್ಟೇ ಸಣ್ಣ ಮೊತ್ತದ ಹಣವಿರಲಿ ಅದರಲ್ಲಿಯೂ ಉಳಿತಾಯ ಮಾಡುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೆಲವರ ಜೀವನದ ಮೂಲ ಉದ್ದೇಶವೇ ಹಣ ಸಂಪತ್ತು ಸಂಪಾದಿಸುವುದು. ಇದಕ್ಕಾಗಿ ಪೈಸೆ ಪೈಸೆ ಲೆಕ್ಕ ಹಾಕಿ ಬದುಕು ನಡೆಸುತ್ತಾರೆ. ಒಂದೊಂದು ಪೈಸೆ ಖರ್ಚು ಮಾಡಬೇಕಾದರೂ ಕೂಡಾ ಬಹಳ ಯೋಚನೆ ಮಾಡುತ್ತಾರೆ.
ರಾಶಿಗನುಗುಣವಾಗಿ ನೋಡಿದರೆ ಕೆಲವು ರಾಶಿಯವರು ಹಣ ಕೂಡಿಡುವುದರಲ್ಲಿ ಎತ್ತಿದ ಕೈ. ಕೈಯ್ಯಲ್ಲಿ ಎಷ್ಟೇ ಸಣ್ಣ ಮೊತ್ತದ ಹಣವಿರಲಿ ಅದರಲ್ಲಿಯೂ ಉಳಿತಾಯ ಮಾಡುತ್ತಾರೆ.
ಈ ರಾಶಿಯವರು ಯಾರಿಗೂ ಹೇಳದೆ ಅಪಾರ ಪ್ರಮಾಣದ ಹಣ ಕೂಡಿಡುತ್ತಾರೆ. ಒಂದು ರೀತಿಯಲ್ಲಿ ಇವರು ಮಿನಿ ಬ್ಯಾಂಕ್ ಇದ್ದ ಹಾಗೆ. ಇವರ ಬಳಿ ಎಷ್ಟು ಹಣ ಇರಬಹುದು ಎನ್ನುವುದನ್ನು ಊಹಿಸುವುದೂ ಕಷ್ಟ.
ವೃಷಭ ರಾಶಿ: ಈ ರಾಶಿಯವರು ಜೀವನದಲ್ಲಿ ಆರ್ಥಿಕ ಯಶಸ್ಸನ್ನು ಸಾಧಿಸಲು ಮತ್ತು ತಮ್ಮ ಸಂಪತ್ತನ್ನು ಹೆಚ್ಚಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಾ ಇರುತ್ತಾರೆ. ಇವರು ಸರಳ ಸ್ವಭಾವದವರು. ಅತಿ ಬುದ್ದಿವಂತಿಕೆಯಿಂದ ಹಣವನ್ನು ನಿರ್ವಹಿಸುತ್ತಾರೆ. ಹಣ ಕೂಡಿ ಇಡುವುದರಲ್ಲಿಯೂ ನಿಪುಣರು.
ಮಕರ ರಾಶಿ : ಹಣದ ವಿಷಯದಲ್ಲಿ ಮಕರ ರಾಶಿಯವರು ಕೂಡಾ ಬಹಳ ಬುದ್ಧಿವಂತರು. ಅನಗತ್ಯ ಖರ್ಚುಗಳಿಂದ ಹಿಂದೆ ಸರಿಯುತ್ತಾರೆ. ದೀರ್ಘಾವಧಿಯ ಹಣಕಾಸು ಯೋಜನೆಗಳನ್ನು ಮಾಡುತ್ತಾರೆ.ತಾಳ್ಮೆ ಮತ್ತು ಸಮರ್ಪಣೆಯಿಂದಾಗಿ ಆರ್ಥಿಕ ಯಶಸ್ಸನ್ನು ಸಾಧಿಸುತ್ತಾರೆ.
ಕನ್ಯಾ ರಾಶಿ : ಕನ್ಯಾ ರಾಶಿಯ ಜನರು ಚಿಂತನಶೀಲವಾಗಿ ಮತ್ತು ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಣಕಾಸಿನ ವಿಷಯಗಳಲ್ಲಿ ಅವರ ಈ ಗುಣ ಸಹಾಯಕ್ಕೆ ಬರುತ್ತದೆ. ಈ ಮೂಲಕ ಅವರು ಸಾಕಷ್ಟು ಹಣವನ್ನು ಉಳಿಸುತ್ತಾರೆ.
ವೃಶ್ಚಿಕ ರಾಶಿ : ಹಣದ ವಿಷಯದಲ್ಲಿ ತುಂಬಾ ದೃಢನಿಶ್ಚಯ ಹೊಂದಿರುವವರು. ಆರ್ಥಿಕ ಯಶಸ್ಸನ್ನು ಸಾಧಿಸಲು ಸ್ವಲ್ಪ ಅಪಾಯವನ್ನು ತೆಗೆದುಕೊಳ್ಳಲು ಕೂಡಾ ಅವರು ಹೆದರುವುದಿಲ್ಲ. ಉತ್ತಮ ತಂತ್ರಗಳೊಂದಿಗೆ ಹಣವನ್ನು ನಿರ್ವಹಿಸುತ್ತಾರೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.