ಟೀಂ ಇಂಡಿಯಾ ತಂಡದಲ್ಲಿ ಆರ್‌ ಅಶ್ವಿನ್‌ ಸ್ಥಾನಕ್ಕೆ ಆಯ್ಕೆಯಾದ ತನುಷ್‌ ಕೋಟ್ಯಾನ್‌ ಯಾರು..?

Ravichandran Ashwin: ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ಬೌಲಿಂಗ್‌ ಕಾರಣದಿಂದ  ಕಳೆದ 12 ವರ್ಷಗಳಿಂದ  ಭಾರತ ತಂಡ ತವರಿನಲ್ಲಿ ಟೆಸ್ಟ್ ಕ್ರಿಕೆಟ್‌ ಸರಣಿಯಲ್ಲಿ ಗೆಲುವು ಸಾಧಿಸುತ್ತಾ ಬರುತ್ತಿದೆ. ತಮ್ಮ ಸ್ಪಿನ್‌ ಬೌಲಿಂಗ್‌ನಿಂದ ಈ ಇಬ್ಬರು ಎದುರಾಳಿಗಳ ಬೆವರಿಳಿಸಿದ್ದಾರೆ.

Written by - Zee Kannada News Desk | Last Updated : Dec 25, 2024, 08:03 AM IST
  • ಜಡೇಜಾ ಇದೀಗ ಏಕಾಂಗಿಯಾಗಿ ಎದುರಾಳಿಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ.
  • 26 ವರ್ಷದ ತನುಷ್ ಕೋಟ್ಯಾನ್ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
  • ತನುಷ್ ಕೋಟ್ಯಾನ್ ಎರಡು ಶತಕ ಮತ್ತು 13 ಅರ್ಧ ಶತಕಗಳೊಂದಿಗೆ 1525 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾ ತಂಡದಲ್ಲಿ ಆರ್‌ ಅಶ್ವಿನ್‌ ಸ್ಥಾನಕ್ಕೆ ಆಯ್ಕೆಯಾದ ತನುಷ್‌ ಕೋಟ್ಯಾನ್‌ ಯಾರು..?  title=

Ravichandran Ashwin: ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ಬೌಲಿಂಗ್‌ ಕಾರಣದಿಂದ  ಕಳೆದ 12 ವರ್ಷಗಳಿಂದ  ಭಾರತ ತಂಡ ತವರಿನಲ್ಲಿ ಟೆಸ್ಟ್ ಕ್ರಿಕೆಟ್‌ ಸರಣಿಯಲ್ಲಿ ಗೆಲುವು ಸಾಧಿಸುತ್ತಾ ಬರುತ್ತಿದೆ. ತಮ್ಮ ಸ್ಪಿನ್‌ ಬೌಲಿಂಗ್‌ನಿಂದ ಈ ಇಬ್ಬರು ಎದುರಾಳಿಗಳ ಬೆವರಿಳಿಸಿದ್ದಾರೆ. ಆದರೆ, ಇದೀಗ ಅಶ್ವಿನ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದರೊಂದಿಗೆ ಜಡೇಜಾ ಇದೀಗ ಏಕಾಂಗಿಯಾಗಿ ಎದುರಾಳಿಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದರ ಬೆನ್ನಲ್ಲೆ ಅಶ್ವಿನ್ ಸ್ಥಾನಕ್ಕೆ ಯಾರು ಸೂಕ್ತರು ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದ್ದು,ಈ ಸ್ಥಾನಕ್ಕೆ ಯುವ ಆಟಗಾರರೊಬ್ಬರು ಎಂಟ್ರಿ ಕೊಟ್ಟಿದ್ದರು. 

ರವೀಂದ್ರ ಜಡೇಜಾ ಜೊತೆಗೆ ವಾಷಿಂಗ್ಟನ್ ಸುಂದರ್ ಈಗಾಗಲೇ ತಂಡದಲ್ಲಿದ್ದರೆ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಆದರೆ ಬಿಸಿಸಿಐ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಬದಲಿಗೆ ಯುವ ಸ್ಪಿನ್ನರ್ ತನುಷ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಿದೆ. 26 ವರ್ಷದ ತನುಷ್ ಕೋಟ್ಯಾನ್ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮಹಾರಾಷ್ಟ್ರದ ತನುಷ್ ಕೋಟ್ಯಾನ್ ಆಫ್ ಸ್ಪಿನ್ ಬೌಲಿಂಗ್ ಅಷ್ಟೆ ಅಲ್ಲದೆ ಬ್ಯಾಟಿಂಗ್‌ನಲ್ಲಿ ಕೂಡ ಪ್ರವೀಣರು. 

ಇದುವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ತನುಷ್ ಕೋಟ್ಯಾನ್ 25.70ರ ಸರಾಸರಿಯಲ್ಲಿ 101 ವಿಕೆಟ್ ಪಡೆದಿದ್ದು, ಇದುವರೆಗೂ  ಮೂರು ಬಾರಿ ಐದು ವಿಕೆಟ್‌ಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಅಶ್ವಿನ್ ಅವರಂತೆ ಬ್ಯಾಟಿಂಗ್ ಮಾಡಬಲ್ಲ ತನುಷ್ ಕೋಟ್ಯಾನ್ ಎರಡು ಶತಕ ಮತ್ತು 13 ಅರ್ಧ ಶತಕಗಳೊಂದಿಗೆ 1525 ರನ್ ಗಳಿಸಿದ್ದಾರೆ. 

ಕಳೆದ ವರ್ಷ ಮುಂಬೈ ರಣಜಿ ಟ್ರೋಫಿ ಗೆಲ್ಲುವಲ್ಲಿ ತನುಷ್ ಕೋಟ್ಯಾನ್ ಪ್ರಮುಖ ಪಾತ್ರ ವಹಿಸಿದ್ದರು. ಈ ಟೂರ್ನಿಯಲ್ಲಿ ತನುಷ್ 29 ವಿಕೆಟ್ ಹಾಗೂ 502 ರನ್ ಗಳಿಸಿ ಟೂರ್ನಿಯ ಆಟಗಾರ ಪ್ರಶಸ್ತಿ ಪಡೆಯುವ ಮೂಲಕ ಇತ್ತೀಚೆಗೆ ಭಾರತ-ಎ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಈ ಪ್ರದರ್ಶನದಿಂದಲೇ ತನುಷ್ ಕೋಟ್ಯಾನ್ ಅವರನ್ನು ತಂಡಕ್ಕೆ ಕರೆತರಲಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಅಶ್ವಿನ್ ಅವರಂತೆಯೇ ತನುಷ್ ಕೋಟ್ಯಾನ್ ಕೂಡ ವೈವಿಧ್ಯಮಯ ರೀತಿಯಲ್ಲಿ ಚೆಂಡುಗಳನ್ನು ಬೀಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದರಲ್ಲೂ ಸಾಫ್ಟ್ ಬಾಲ್‌ಗಳಿಂದ ಬ್ಯಾಟರ್‌ಗಳ ವಿಕೆಟ್‌ಗಳನ್ನು ಉರುಳಿಸುವುದು ತನುಷ್ ವಿಶೇಷತೆ.  ಇನ್ನೂ, ಟೀಂ ಇಂಡಿಯಾ ತಂಡದಲ್ಲಿ ಆರ್‌ ಅಶ್ವಿನ್‌ ಅವರ ಸ್ಥಾನ ಅಲಂಕರಿಸಿರುವ ಆರ್‌ ತನುಷ್‌, ಆರ್‌ ಅಶ್ವಿನ್‌ ಅವರಂತೆಯೇ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ? ಇಲ್ವಾ? ಎಂಬುದನ್ನು ಕಾದು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News