Rudrabhishekam: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿ ಪ್ರೇಕ್ಷಕರನ್ನು ರಂಜಿಸಿವೆ. ಅದೇ ಹಾದಿಯಲ್ಲಿ ಇದೀಗ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಪ್ರತಿಭಾವಂತ ನಟ ವಿಜಯ ರಾಘವೇಂದ್ರ ಅವರು ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ರುದ್ರಾಭಿಷೇಕಂ. ಈ ಚಿತ್ರದ ಮುಹೂರ್ತ ಸಮಾರಂಭ ದೇವನಹಳ್ಳಿ ಬಳಿಯ ವಿಜಯಪುರದ ಫಾರಂ ಹೌಸ್ ಒಂದರಲ್ಲಿ ಸರಳವಾಗಿ ನೆರವೇರಿತು.
ಮುಹೂರ್ತದ ನಂತರ ಮಾತನಾಡಿದ ವಿಜಯ ರಾಘವೇಂದ್ರ, ಇನ್ನೊಂದು ಒಳ್ಳೆಯ ಪ್ರಯತ್ನ. ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನೆಲೆಯ ಜತೆಗೆ ಒಂದು ಸಣ್ಣ ಇತಿಹಾಸ, ಅದರ ವೈಭವವನ್ನು ತೆಗೆದುಕೊಂಡು ಹೋಗುವ ಕಥೆ. ಕಮರ್ಷಿಯಲ್ ಎಲಿಮೆಂಟ್ ಒಳಗೊಂಡಿದ್ದರೂ ಕೂಡ ಸಾಕಷ್ಟು ಡಿವೈನಿಟಿ ಇರುವ ಚಿತ್ರ. ನಿರ್ದೇಶಕರು ವೀರಗಾಸೆ ಕಲೆಯ ಹಿನ್ನೆಲೆ ಇಟ್ಟುಕೊಂಡು ಒಂದೊಳ್ಳೆ ಕಾನ್ಸೆಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಾನು ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲ ಚಿತ್ರದಲ್ಲಿ ನನಗೆ ಸಾಕಷ್ಟು ಗೆಟಪ್ ಗಳಿವೆ ಎಂದು ಹೇಳಿದರು.
ನಿರ್ದೇಶಕ ವಸಂತ್ ಕುಮಾರ್ ಮಾತನಾಡುತ್ತ ನಾನು ಕಳೆದ ಎರಡುವರೆ ದಶಕಗಳಿಂದಲೂ ಚಿತ್ರರಂಗದಲ್ಲಿದ್ದೇನೆ. ಹಲವಾರು ಚಿತ್ರಗಳಿಗೆ ಸಹನಿರ್ದೇಶನ, ಕಥೆ, ಚಿತ್ರಕಥೆ ಬರೆದಿದ್ದೇನೆ. ಇದೊಂದು ಟ್ರೆಡಿಷನಲ್ ಸಬ್ಜೆಕ್ಟ್. ನಮ್ಮ ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ಒಂದು ಕಲೆಯನ್ನು ಈ ಚಿತ್ರದ ಮೂಲಕ ಹೇಳಹೊಟಿದ್ದೇನೆ. ಒಂದೂವರೆ ವರ್ಷದಿಂದ ಸಾಕಷ್ಟು ರೀಸರ್ಚ್ ಮಾಡಿ ಈ ಕಥೆ ರೆಡಿ ಮಾಡಿಕೊಂಡಿದ್ದೇನೆ. ಕಥೆ ಮಾಡಿಕೊಂಡು ಒಂದಷ್ಟು ಮಠಾಧೀಶರನ್ನು ಸಂಪರ್ಕಿಸಿದಾಗ ಅವರೆಲ್ಲ ಒಳ್ಳೆ ಪ್ರಯತ್ನ. ಗೆದ್ದೇ ಗೆಲ್ತೀಯ ಎಂದು ಶುಭ ಹಾರೈಸಿದರು. ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ಇಲ್ಲಿ ಹೇಳುತ್ತಿದ್ದೇನೆ. ನಾನು ಕಥೆ ಮಾಡುವಾಗಲೇ ವಿಜಯ ರಾಘವೇಂದ್ರ ಅವರನ್ನು ವೀರಗಾಸೆ ಗೆಟಪ್ ನಲ್ಲಿ ಕಲ್ಪಿಸಿಕೊಂಡೆ. ಈ ಸಮಯದಲ್ಲಿ ನನ್ನ ಹಲವಾರು ಸ್ನೇಹಿತರು ನಿರ್ಮಾಣದಲ್ಲಿ ಕೈಜೋಡಿಸುತ್ತಿದ್ದಾರೆ. ಈ ಮೂಲಕ ನಾಡಿನ ಜನತೆಗೆ ಒಂದೊಳ್ಳೆ ಸಿನಿಮಾ ಕಟ್ಟಿ ಕೊಡಬೇಕೆಂದುಕೊಂಡುದ್ದೇನೆ. ಮೊದಲ ಹಂತದಲ್ಲಿ ಇದೇ ಫಾರಂ ಹೌಸ್ ನಲ್ಲಿ 15 ದಿನ ಶೂಟ್ ಮಾಡುತ್ತಿದ್ದೇವೆ. ನಂತರ ಇಡೀ ಊರತುಂಬ ಆಲದಮರ, ಹಿಂದುಳಿದವರೇ ಇರುವಂಥ ಲೊಕೇಶನ್ ಹುಡುಕೊದಾಗ ಸಿಕ್ಕಿದ್ದೇ ಚಿಕ್ಕತದಮಂಗಲ. ಅಲ್ಲಿ ಜಾಸ್ತಿ ಇರುವುದೇ ವೀರಭದ್ರ ದೇವರ ಒಕ್ಕಲಿನವರು. ಅಲ್ಲಿ ಹೋಗಿ ಶೂಟಿಂಗ್ ಮಾಡಬೇಕೆಂದಾಗ ಇಡೀ ಊರ ಜನತೆ ನಮಗೆ ಸಹಕಾರ ಕೊಡ್ತಿದಾರೆ ಎಂದು ಹೇಳಿದರು.
ನಿರ್ದೇಶಕರ ಸ್ನೇಹಿತರಾದ ಜಯರಾಮಣ್ಣ, ಶಿವರಾಮ್, ಚಿದಾನಂದ್, ಹಡಪದ, ರಮೇಶ್, ಮಂಜುನಾಥ್, ಮುನಿಕೃಷ್ಣಪ್ಪ, ರವಿ, ಅಶ್ವಥ್, ಆನಂದ್ ಸೇರಿ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕರ ಒಂದು ಒಳ್ಳೆಯ ಪ್ರಯತ್ನಕ್ಕೆ ನಾವೆಲ್ಲ ಕೈ ಜೋಡಿಸಿರುವುದಾಗಿ ಅವರು ಹೇಳಿಕೊಂಡರು.
ರುದ್ರಾಭಿಷೇಕಂ ಚಿತ್ರದ ನಾಯಕಿಯಾಗಿ ಮೈಸೂರು ಮೂಲದ ರಂಗಭೂಮಿ ಪ್ರತಿಭೆ ಪ್ರೇರಣಾ ನಟಿಸುತ್ತಿದ್ದಾರೆ. ಮತ್ತೊಬ್ಬ ದೈತ್ಯಪ್ರತಿಭೆ ಬಲ ರಾಜವಾಡಿ ಅವರು ಊರ ಗೌಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಲ್ಲದೆ ತಾರಕೇಶ್ವರ ಸೇರಿ ಅನೇಕ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.