ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಬಿಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿರುವುದು ಏಕೆ ಗೊತ್ತಾ?

Aishwarya Rai Abhishek Bachchan: ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ ಎಂಬ ಗಾಸಿಪ್ ನಡುವೆ ಐಶ್ವರ್ಯ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರನ್ನು ಬಿಟ್ಟು ಪ್ರತ್ಯೇಕವಾಗಿ ಇರುವುದು ಯಾವ ಕಾರಣಕ್ಕೆ ಎಂದು ಗೊತ್ತಾಗಿದೆ.

Written by - Yashaswini V | Last Updated : Dec 23, 2024, 06:08 AM IST
  • ಬಹುತೇಕ ದಿನಗಳಿಂದ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ
  • ಇದಲ್ಲದೆ ಕಾರ್ಯಕ್ರಮಗಳಿಗೂ ಕೂಡ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಇಬ್ಬರೂ ಪ್ರತ್ಯೇಕವಾಗಿಯೇ ಬರುತ್ತಾರೆ
  • ಇದರಿಂದಾಗಿಯೇ ಈ ಸ್ಟಾರ್ ದಂಪತಿಗಳ ಬಗ್ಗೆ ಡಿವೋರ್ಸ್ ವದಂತಿ ಹರಿದಾಡುತ್ತಿದೆ.
ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಬಿಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿರುವುದು ಏಕೆ ಗೊತ್ತಾ? title=

Aishwarya Rai Abhishek Bachchan: ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಕುಟುಂಬದಲ್ಲಿ ಕಲಹ ಉಂಟಾಗಿದ್ದು ವಿಚ್ಛೇದನ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ, ಈಗಾಗಲೇ ಅವರಿಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎನ್ನುವ ಸುದ್ದಿ ತಳಬುಡ ಇಲ್ಲದೆ ಹರಿದಾಡುತ್ತಿದೆ. ಇದರ ನಡುವೆ ಐಶ್ವರ್ಯ ರೈ ಗಂಡ ಅಭಿಷೇಕ್ ಬಚ್ಚನ್ ಅವರನ್ನ ಬಿಟ್ಟು ಪ್ರತ್ಯೇಕವಾಗಿ ಇರುವುದು ಬೇರೆಯ ಕಾರಣಕ್ಕೆ ಎಂದು ಗೊತ್ತಾಗಿದೆ.

ನಿವೃತ್ತ ಸೇನಾ ಜೀವಶಾಸ್ತ್ರಜ್ಞ ಕೃಷ್ಣರಾಜ್ ರೈ ಮತ್ತು ಬ್ರಿಂದ್ಯ ರೈ ಅವರ ಏಕೈಕ ಮಗಳು ಐಶ್ವರ್ಯ ರೈ. ಐಶ್ವರ್ಯ ರೈ ವಿದ್ಯಾಭ್ಯಾಸ ಮೊಟಕುಗೊಳಿಸಿ ಮಾಡೆಲಿಂಗ್ ಕ್ಷೇತ್ರಕ್ಕೆ ಬರಬೇಕು ಎಂದುಕೊಂಡಾಗ, ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ಜಗತ್ತಿಗೆ ಜಿಗಿಯಬೇಕು ಎಂದುಕೊಂಡಾಗ ಐಶ್ವರ್ಯ ರೈಗೆ ಅಪ್ಪ-ಅಮ್ಮ ತುಂಬಾ ಸಪೋರ್ಟ್ ಮಾಡಿದ್ದರು. ಹಾಗಾಗಿ ಐಶ್ವರ್ಯ ರೈ ಅಪ್ಪ-ಅಮ್ಮ ಎಂದರೆ ಅಚ್ಚುಮೆಚ್ಚು.

ಇದನ್ನೂ ಓದಿ- ಶ್ರೀದೇವಿಯನ್ನು ಬಂಧಿಸಲು ಪೊಲೀಸರು ಈಗ ಸ್ವರ್ಗಕ್ಕೆ ಹೋಗುತ್ತಾರಾ? ರಾಮ್ ಗೋಪಾಲ್ ವರ್ಮಾ ಹೀಗೆ ಹೇಳಿದ್ದೇಕೆ?

2017ರಲ್ಲಿ ಕೃಷ್ಣರಾಜ್ ರೈ ತೀರಿಕೊಂಡ ನಂತರ ಐಶ್ವರ್ಯ ರೈ ತೀವ್ರ ನೊಂದುಕೊಂಡಿದ್ದರು. ಈ ಮಧ್ಯೆ ಐಶ್ವರ್ಯ ರೈ ಅವರ ತಾಯಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಹಾಗೂ ಐಶ್ವರ್ಯ ರೈ ಅವರ ಸಹೋದರ ಕೂಡ ಬ್ಯುಸಿ ಇರುವುದರಿಂದ ಕೊನೆಗಾಲದಲ್ಲಿ ಅಮ್ಮ ಒಂಟಿಯಾಗಿರಬಾರದು ಎನ್ನುವ ಕಾರಣಕ್ಕೆ ಐಶ್ವರ್ಯ ರೈ ಅಮ್ಮನ ಮನೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಹಾಗಾಗಿಯೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇದು ವದಂತಿಗೂ ಕಾರಣವಾಗಿದೆ. 

ಇದನ್ನೂ ಓದಿ- Bigg Boss Kannada 11: ಮನೆಯಿಂದ ಹೊರಬಂದವರಿಂದಲೇ ರಿವೀಲ್ ಆಯ್ತು 'ಬಿಗ್ ಬಾಸ್ ವಿನ್ನರ್' ಹೆಸರು...!

ನಿಜಕ್ಕೂ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಸಂಬಂಧ ತುಂಬಾ ಚೆನ್ನಾಗಿದೆ ಅಂತಾ ಇತ್ತೀಚಿಗೆ ಮುಂಬೈನಲ್ಲಿ ಮತ್ತೆ ಸಾಬೀತಾಗಿದೆ. ಇತ್ತೀಚೆಗೆ ನಡೆದ ಪುತ್ರಿ ಆರಾಧ್ಯಳ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಇಡೀ ಬಚ್ಚನ್ ಕುಟುಂಬ ಒಟ್ಟಾಗಿ ಕಾಣಿಸಿಕೊಂಡು ಆಡಿಕೊಳ್ಳುವವರಿಗೆ ತಕ್ಕ ಉತ್ತರ ನೀಡಿದೆ. ಇದಕ್ಕೆ ಮೊದಲೂ ಸಹ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಒಟ್ಟಾಗಿ ಸೆಲ್ಫಿಗೆ ಪೋಸ್ ನೀಡಿದ್ದರು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News