ಅವಾರ್ಡ್‌ ಶೋನಲ್ಲಿ ಮೊದಲ ಭೇಟಿ.. 900 ಕೋಟಿ ಸಿನಿಮಾ ರಿಜೆಕ್ಟ್‌ ಮಾಡಿ ರಾಜಕೀಯ ನಾಯಕನನ್ನು ಮದುವೆಯಾದ ಖ್ಯಾತ ನಟಿ ಈಕೆ!!

Star Actress: ಪರಿಣಿತಿ ಚೋಪ್ರಾ 2012 ರಲ್ಲಿ 'ಇಶಕ್ಜಾದೆ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಯಶಸ್ವಿಯಾಯಿತು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸಹ ಗಳಿಸಿತು.  

Written by - Savita M B | Last Updated : Dec 22, 2024, 07:29 PM IST
  • ಬಾಲಿವುಡ್‌ನಲ್ಲಿ ವಿವಿಧ ರೀತಿಯ ಲವ್ ಸ್ಟೋರಿಗಳನ್ನು ಹೊಂದಿರುವ ಅನೇಕ ನಟ-ನಟಿಯರಿದ್ದಾರೆ
  • ಮದುವೆಯಾದಾಗಿನಿಂದ ನಟಿ ಜನಮನದಲ್ಲಿದ್ದಾರೆ ಮತ್ತು ಅವರ ಲವ್‌ಸ್ಟೋರಿ ಬಗ್ಗೆ ಅನೇಕ ಕಥೆಗಳು ಹೊರಬರುತ್ತಿವೆ.
ಅವಾರ್ಡ್‌ ಶೋನಲ್ಲಿ ಮೊದಲ ಭೇಟಿ.. 900 ಕೋಟಿ ಸಿನಿಮಾ ರಿಜೆಕ್ಟ್‌ ಮಾಡಿ ರಾಜಕೀಯ ನಾಯಕನನ್ನು ಮದುವೆಯಾದ ಖ್ಯಾತ ನಟಿ ಈಕೆ!!  title=

parineeti chopra raghav chadha Love Story: ಬಾಲಿವುಡ್‌ನಲ್ಲಿ ವಿವಿಧ ರೀತಿಯ ಲವ್ ಸ್ಟೋರಿಗಳನ್ನು ಹೊಂದಿರುವ ಅನೇಕ ನಟ-ನಟಿಯರಿದ್ದಾರೆ.. ಅದರಲ್ಲಿ ರಾಜಕೀಯ ಕ್ಷೇತ್ರದ ವ್ಯಕ್ತಿಯನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ ನಟಿಯೊಬ್ಬರು ಕೊನೆಗೆ ಅದೇ ಕ್ಷೇತ್ರದ ವ್ಯಕ್ತಿಯನ್ನು ಮದುವೆಯಾಗಿರುವ ಲವ್‌ ಕಹಾನಿಯೊಂದಿದೆ.. ಆ ನಟಿ ಬೇರಾರೂ ಅಲ್ಲ.. ಪರಿಣಿತಿ ಚೋಪ್ರಾ.. 

ಪರಿಣಿತಿ ಚೋಪ್ರಾ 2012 ರಲ್ಲಿ 'ಇಶಕ್ಜಾದೆ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸಹ ಗಳಿಸಿತು. ಇಂದು ಈ ನಟಿ ಟಾಪ್ ನಟಿಯರಲ್ಲಿ ಒಬ್ಬರು ಎಣಿಸಲ್ಪಟ್ಟಿದ್ದಾರೆ. ಮದುವೆಯಾದಾಗಿನಿಂದ ನಟಿ ಜನಮನದಲ್ಲಿದ್ದಾರೆ ಮತ್ತು ಅವರ ಲವ್‌ಸ್ಟೋರಿ ಬಗ್ಗೆ ಅನೇಕ ಕಥೆಗಳು ಹೊರಬರುತ್ತಿವೆ.

ಇದನ್ನೂ ಓದಿ-ಅಭ್ಯಾಸದಲ್ಲಿ ಗಾಯಗೊಂಡ ರೋಹಿತ್ ಶರ್ಮಾ ಆರೋಗ್ಯ ಪರಿಸ್ಥಿತಿ ಹೇಗಿದೆ? ಟೀಂ ಇಂಡಿಯಾ ಆಟಗಾರನಿಂದಲೇ ಹೊರ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಆಪ್ ಸಂಸದ ರಾಘವ್ ಚಡ್ಡಾ ಅವರನ್ನು ವಿವಾಹವಾಗಿದ್ದಾರೆ. ನಟಿ ತನ್ನ ಇತ್ತೀಚಿನ ಸಂದರ್ಶನದಲ್ಲಿ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ತಿರಸ್ಕರಿಸುವುದು ತನಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ, ನಟಿ ಮದುವೆಗೂ ಮುಂಚೆ ರಾಘವ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಬಗ್ಗೆ ಮಾತನಾಡಿದರು.

ಇದನ್ನೂ ಓದಿ-ಮದುವೆಯ ನಂತರ ಬಿಗ್‌ಶಾಕ್‌ ಕೊಟ್ಟ ಕೀರ್ತಿ ಸುರೇಶ್.. ಸಿನಿಮಾಗಳಿಗೆ ಗುಡ್ ಬೈ!?  

ಪರಿಣಿತಿ ಚೋಪ್ರಾ ಇತ್ತೀಚೆಗೆ ಇಂಡಿಯಾ ಟಿವಿಯ ಸೂಪರ್ ಹಿಟ್ ಶೋ 'ಆಪ್ ಕಿ ಅದಾಲತ್' ನಲ್ಲಿ ಪತಿ ರಾಘವ್ ಅವರೊಂದಿಗೆ ಕಾಣಿಸಿಕೊಂಡರು. ಇದೇ ವೇಳೆ ತಮ್ಮ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. ಮದುವೆಗಾಗಿ ಒಟಿಟಿ 900 ಕೋಟಿಯ ಚಿತ್ರವನ್ನು ತಿರಸ್ಕರಿಸಿದ್ದೇನೆ ಎಂದು ಪರಿಣಿತಿ ಹೇಳಿದ್ದಾರೆ. ‘ಅನಿಮಲ್’ ಚಿತ್ರಕ್ಕೆ ಪರಿಣಿತಿ ಚೋಪ್ರಾ ಮೊದಲ ಆಯ್ಕೆಯಾಗಿದ್ದರು. ಈ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಆದರೆ ರಶ್ಮಿಕಾ ಪಾತ್ರಕ್ಕೆ ಮೊದಲು ಆಯ್ಕೆಯಾದದ್ದು ಪರಿಣಿತಿ ಚೋಪ್ರಾ. ಆದರೆ ಅವರು ಚಿತ್ರದ ಆಫರ್ ಅನ್ನು ತಿರಸ್ಕರಿಸಿದ್ದರಂತೆ.. 

ಪರಿಣಿತಿ ಅವರು, 'ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ಲಂಡನ್‌ನಲ್ಲಿದ್ದೆ. ರಾಜಕೀಯ ಮತ್ತು ಆಡಳಿತದಲ್ಲಿ ಪ್ರಶಸ್ತಿ ಸ್ವೀಕರಿಸಲು ರಾಘವ್ ಕೂಡಾ ಉಪಸ್ಥಿತರಿದ್ದರು. ನನ್ನ ಸಹೋದರ ಇವರನ್ನು ಇಷ್ಟಪಡುತ್ತಿದ್ದರು.. ಅಲ್ಲದೇ ಇವರ ದೊಡ್ಡ ಅಭಿಮಾನಿಯಾಗಿದ್ದರು.. ನನ್ನ ಅಣ್ಣನ ಸಲಹೆಯ ನಂತರವೇ ನಾನು ಅವರನ್ನು ನೋಡಲು ಹೋದೆ. ಆದರೆ ಅಲ್ಲಿ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ ಮತ್ತು ನಂತರ ಮುಂಬೈನಲ್ಲಿ ಭೇಟಿಯಾಗಲು ಚರ್ಚೆ ನಡೆಯಿತು. ಎರಡನೇ ಭೇಟಿಯಲ್ಲಿ ನಾವು ಹತ್ತು ಜನ ಒಟ್ಟಿಗೆ ಇದ್ದೆವು. ಅದೇ ವೇಳೆ ಇವರು ಅಷ್ಟೂ ಜನರ ನಡುವೆ ಥಟ್ಟನೆ ಎದ್ದು ತಟ್ಟೆ ತಂದು ತಮ್ಮ ಊಟವನ್ನು ತಾವೇ ಹಾಕಿಕೊಂಡು ತಿನ್ನತೊಡಗಿದರು.. ಆಗ ಈ ಮನುಷ್ಯ ತುಂಬಾ ಸರಳ ವ್ಯಕ್ತಿ. ನಾನು ಇವರನ್ನೇ ಮದುವೆಯಾಗಬೇಕು ಎಂದು ಬಯಸಿದೆ" ಎಂದು ಹೇಳಿಕೊಂಡಿದ್ದಾರೆ..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News