Famous Actress Priya Gill: ಮಾಡೆಲ್ ಮತ್ತು ನಟಿ ಪ್ರಿಯಾ ಗಿಲ್ ಪಂಜಾಬ್ ಮೂಲದವರು. ಅವರು 1995 ರಲ್ಲಿ ಬೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದರು.. 1996 ರಲ್ಲಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಆಕೆಯ ಅಭಿನಯದಲ್ಲಿ ತೆರೆಕಂಡ ತೇರೆ ಮೇರೆ ಸಪ್ನೆ ಚಿತ್ರ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಇದರ ಬೆನ್ನಲ್ಲೇ ಪ್ರಿಯಾ ಗಿಲ್ ಬಾಲಿವುಡ್ ನ ಬ್ಯುಸಿ ನಟಿಯಾದರು.
ಹಿಂದಿಯ ನಂತರ ತಮಿಳು, ತೆಲುಗು, ಮಲಯಾಳಂ, ಭೋಜ್ಪುರಿ, ಪಂಜಾಬಿ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಅಜಿತ್ ಜೊತೆ ‘ರೆಡ್’ ಸಿನಿಮಾದಲ್ಲಿ ನಟಿಸಿದ್ದರು. ಸಿಂಗಂ ಪುಲಿ ನಿರ್ದೇಶನದ ಈ ಚಿತ್ರವನ್ನು ಎಸ್ ಎಸ್ ಚಕ್ರವರ್ತಿ ನಿರ್ಮಿಸಿದ್ದಾರೆ. ಮಣಿವಣ್ಣನ್, ರಘುವರನ್, ಸಲೀಂ ಘೋಷ್, ರೇವತಿ, ಕವಿತಾ, ಗಾಂಧಿಮತಿ, ಇಲ್ಲಸಾಸು, ಶಾಡೋಸ್ ರವಿ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ-Dina Bhavishya: ಈ ರಾಶಿಯವರು ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು!
ಸಿನಿಮಾ ವಿಫಲವಾದ ಕಾರಣ ಪ್ರಿಯಾ ಗಿಲ್ಗೆ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗಲಿಲ್ಲ. ಬಳಿಕ ನಾಯಕ ನಟಿಯಾಗಿರುವಾಗಲೇ ಉದ್ಯಮಿಯೊಬ್ಬರನ್ನು ಮದುವೆಯಾದ ಅವರು ಮದುವೆಯ ನಂತರವೂ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದರು. ಕೆಲ ಚಿತ್ರಗಳಲ್ಲಿ ನಟರ ಜೊತೆ ಇಂಟಿಮೇಟ್ ಸೀನ್ ಗಳಲ್ಲಿ ನಟಿಸಿದ್ದಕ್ಕೆ ಪತಿ ಹಾಗೂ ಅವರ ನಡುವೆ ಸಮಸ್ಯೆ ಉಂಟಾಗಿತ್ತು ಎನ್ನಲಾಗಿದೆ.
ಹಾಗಾಗಿ 2006ರಲ್ಲಿ ಚಿತ್ರರಂಗದಿಂದ ಸಂಪೂರ್ಣ ನಿವೃತ್ತಿಯಾದ ಪ್ರಿಯಾ ಗಿಲ್ ಕೆಲವೇ ವರ್ಷಗಳಲ್ಲಿ ಪತಿಯಿಂದ ವಿಚ್ಛೇದನ ಪಡೆದರು. ಆಗಾಗ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಪ್ರಿಯಾ ಗಿಲ್ 49ನೇ ವಯಸ್ಸಿನಲ್ಲೂ ಯೌವನವನ್ನೇ ಮೀರಿಸುವ ಸ್ಲಿಮ್ ಫಿಗರ್ ಇದೆ.. ಆದರೆ, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಾವು ‘ತಂ’ ವೆಬ್ ಸೀರಿಸ್ ನಟ ರವಿಶೇಖರ್ ಅವರನ್ನು ಪ್ರೀತಿಸಿ ಗುಟ್ಟಾಗಿ ಎರಡನೇ ಮದುವೆಯಾಗಿರುವುದಾಗಿ ಹೇಳಿದ್ದಾರೆ. ರವಿಶೇಖರ್ಗೆ ಮಗಳಿದ್ದು, ಪ್ರಿಯಾ ಗಿಲ್ಗೂ ಒಬ್ಬ ಮಗಳಿದ್ದಾಳೆ. ಸದ್ಯ ಈ ಮಾಹಿತಿಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ-UI Box Office Collection Day 1: ಯುಐ ಸಿನಿಮಾ ಮೊದಲ ದಿನವೇ ಗಳಿಸಿದ್ದೆಷ್ಟು? ಬ್ರೇಕ್ ಆಗುತ್ತಾ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.