5 Biggest controversies in cricket in 2024: ಕೆಲವೊಂದು ಕ್ಷಣಗಳು ತುಂಬಾ ವಿಶೇಷ, ಸಮಯ ಯಾರಿಗಾಗಿಯೂ ನಿಲ್ಲುವುದಿಲ್ಲ ಹೌದು, ಆದರೆ ನಾವು ಆ ಸಮಯದೊಂದಿಗೆ ಕಲಿಯುವ ಪಾಠಗಳು ಹಾಗೂ ಆ ಸುಂದರ ಕ್ಷಣಗಳನ್ನು ಮತ್ತೆ ಮತ್ತೆ ನಮಗೆ ನೆನಪು ಬರುತ್ತಿರುತ್ತವೆ. ನಿನ್ನೆ ನಡೆದದ್ದು, ನಾಳೆ ನೆನಪಿಸಿಕೊಂಡರೆ ನೆನಪಾಗುತ್ತೆ. ಸಮಯ ಎಷ್ಟು ಬೇಗ ಸಾಗುತ್ತಿದೆಯಲ್ವಾ ಎಂದು ನೆನಸಿಕೊಂಡರೆ ಬೇಸರವಾಗುತ್ತೆ. 2024 ವರ್ಷ ಮುಗಿಯುತ್ತಾ ಬಂದಿದೆ. ಈ ವರ್ಷ ಮುಗಿಯಲು ಕೇವಲ 12 ದಿನಗಳಷ್ಟು ಬಾಕಿ ಇದ್ದು, ಈ ವರ್ಷ ನೆನಪಿಸಿಕೊಳ್ಳುವುದಕ್ಕೆ ಸಾಕಷ್ಟು ಘಟನೆಗಲನ್ನು ಬಿಟ್ಟು ಹೋಗುತ್ತಿದೆ.
365 ದಿನಗಳ ಈ ವರ್ಷದ ಪ್ರತಿ ದಿನವೂ ವಿಶೇಷ.. ಪ್ರತಿ ಘಟನೆಯೂ ಒಂದು ಪಾಠ. ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಈ ವರ್ಷ ಸ್ಟಾರ್ ಕ್ರಿಕೆಟಿಗರು ತಮ್ಮ ಜೀವನ ಪೂರ್ತಿ ನೆನಪಿಟ್ಟುಕೊಳ್ಳುವಂತಹ, ನೆನಪಿಸಿಕೊಂಡು ಮರೆಯಲಾಗದಂತಹ ಹಲವಾರು ಘಟನೆಗಳು ನಡೆದಿವೆ. ಆದರೆ, ಈ ವರ್ಷ ಕ್ರಿಕೆಟ್ ಜಗತ್ತನ್ನೆ ಬೆಚ್ಚಿ ಬೀಳಿಸಿದ ವಿವಾದಗಳು ಯಾವುದು ತಿಳಿಯಲು, ಮುಂದೆ ಓದಿ...
ಇದನ್ನೂ ಓದಿ: WPL 2025: Rs. 16000000 ಕೊಟ್ಟು 16 ವರ್ಷದ ಬಾಲಕಿಯನ್ನು ತಂಡಕ್ಕೆ ಕರೆತಂದ ನೀತಾ ಅಂಬಾನಿ! ಅಷ್ಟಕ್ಕೂ ಆ ಬಾಲಕಿ ಯಾರು ಗೊತ್ತಾ?
ಹಾರ್ದಿಕ್ ಪಾಂಡ್ಯ
ಮುಂಬೈ ಇಂಡಿಯನ್ಸ್ ತಂಡ 2024ರ ಐಪಿಎಲ್ಗಾಗಿ ಹಾರ್ದಿಕ್ ಪಾಂಡ್ಯ ನಾಯಕನ ಪಟ್ಟಕ್ಕೆ ಏರಿಸಿತ್ತು. ರೋಹಿತ್ ಶರ್ಮಾ ಅವರನ್ನು ನಾಯಕನ ಪಟ್ಟದಿಂದ ಇಳಿಸಿ, ಆ ಪಟ್ಟವನ್ನು ಹಾರ್ದಿಕ್ ಪಾಂಡ್ಯ ಅವರಿಗೆ ನೀಡಿತ್ತು. ಇದೇ ಕಾರಣದಿಂದಾಗಿ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಗೇಲಿ ಮಾಡಲು ಶುರುಮಾಡಿದ್ದರು. ಇದೇ ಮೊದಲ ಭಾರಿಗೆ ಅಭಿಮಾನಿಗಳು ತಮ್ಮದೇ ತಂಡದ ಆಟಗಾರನನ್ನು ಗೇಲಿ ಮಾಡಿದ್ದರು.
ಕೆಎಲ್ ರಾಹುಲ್
ಐಪಿಎಲ್ 2024ರ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀನಾಯವಾಗಿ ಸೋತಿತ್ತು, ಆ ಸಮಯದಲ್ಲಿ ಲಕ್ನೋ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಿದ್ದರು. ಲಕ್ನೋ ತಂಡ ಪಂದ್ಯ ಸೋಲುತ್ತಿದ್ದಂತೆ, ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಕೋಪಗೊಂಡಿದ್ದರು. ಕ್ಯಾಮರಾಗಳ ಮುಂದೆ ರಾಹುಲ್ ಅವರನ್ನು ತೀವ್ರವಾಗಿ ನಿಂದಿಸಿದ್ದರು. ಇದನ್ನು ನೋಡಿದ ಅಭಿಮಾನಿಗಳು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ವಿರುದ್ಧ ಕಿಡಿ ಕಾರಿದ್ದರು.
ಇದನ್ನೂ ಓದಿ: IPL 2025 ಆರಂಭಕ್ಕೂ ಮುನ್ನವೇ ಅಭಿಮಾನಿಗಳಿಗೆ ಬಿಗ್ ಶಾಕ್ ! ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಯುವ ಆಟಗಾರ..!
ಹಾರಿಸ್ ರೌಫ್
ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ವೇಳೆ ಅಭಿಮಾನಿಯೊಂದಿಗೆ ಪಾಕಿಸ್ತಾನಿ ವೇಗಿ ಹ್ಯಾರಿಸ್ ರೌಫ್ ಜಗಳ ಮಾಡಿಕೊಂಡಿದ್ದಾರೆ. ಹ್ಯಾರಿಸ್ ರೌಫ್ ತನ್ನ ಪತ್ನಿಯೊಂದಿಗೆ ಹೊರಗೆ ಕಾಣಿಸಿಕೊಂಡಾಗ ಅಭಿಮಾನಿಯೊಬ್ಬರು ಟಿ20 ವಿಶ್ವಕಪ್ನ ವೈಫಲ್ಯವನ್ನು ಉಲ್ಲೇಖಿಸಿ ಕಾಮೆಂಟ್ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಹಾರಿಸ್ ರವೂಫ್ ಹೇಳಿದ ಅಭಿಮಾನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮೊಹಮ್ಮದ್ ಶಮಿ
IPL 2025 ಮೆಗಾ ಹರಾಜಿನಲ್ಲಿ ಮೊಹಮ್ಮದ್ ಶಮಿ ಕಮ್ಮಿ ಮೊತ್ತಕ್ಕೆ ಸೇಲ್ ಆಗುತ್ತಾರೆ ಎಂದು ಸಂಜಯ್ ಮಂಜ್ರೇಕರ್ ಅವರು ಭವಿಷ್ಯ ನುಡಿದಿದ್ದರು. ಈ ಕಾಮೆಂಟ್ಗಳಿಗೆ ಶಮಿ ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ಬಾಬಕಿ ಜೈ.. ನಿಮ್ಮ ಸೂಪರ್ ಸ್ಮಾರ್ಟ್ನೆಸ್ ಅನ್ನು ಮರೆಮಾಡಿ ಸಂಜಯ್. ಯಾರಿಗಾದರೂ ಜಾತಕ ಬೇಕಾದರೆ ಸಂಜಯ್ ಮಂಜ್ರೇಕರ್ ಅವರನ್ನು ಭೇಟಿ ಮಾಡಿ ಎಂದು ಶಮಿ, ಸಂಜಯ್ ವಿರುದ್ಧ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: WPL 2025: Rs. 16000000 ಕೊಟ್ಟು 16 ವರ್ಷದ ಬಾಲಕಿಯನ್ನು ತಂಡಕ್ಕೆ ಕರೆತಂದ ನೀತಾ ಅಂಬಾನಿ! ಅಷ್ಟಕ್ಕೂ ಆ ಬಾಲಕಿ ಯಾರು ಗೊತ್ತಾ?
ಮೊಹಮ್ಮದ್ ಸಿರಾಜ್
ಐದು ಟೆಸ್ಟ್ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂಗವಾಗಿ ಅಡಿಲೇಡ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಸಿರಾಜ್ ಮತ್ತು ಟ್ರಾವಿಸ್ ಹೆಡ್ ಮುಖಾಮುಖಿಯಾದರು. ಈ ಪಂದ್ಯದಲ್ಲಿ ಶತಕ ಸಿಡಿಸಿದ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದ ಸಿರಾಜ್ ಸಿಟ್ಟಿನಿಂದ ಸಂಭ್ರಮಿಸಿದರು. ಸಿರಾಜ್ ಅವರ ಈ ವರ್ತನೆಯನ್ನು ಕಂಡ ಟ್ರಾವಿಸ್ ಹೆಡ್ ಹೇಳಿದ ಮಾತಿಗೆ, ಸಿರಾಜ್ ಅವರು ಟ್ರಾವಿಸ್ ಅವರಿಗೆ ಫೀಲ್ಡ್ನಿಂದ ಹೊರ ಹೋಗುವಂತೆ ಕೈ ಸನ್ನೆ ಮಾಡಿದರು. ಪಂದ್ಯದ ವೇಳೆ ಗಡಿ ದಾಟಿದ ಈ ಇಬ್ಬರ ವಿರುದ್ಧ ಐಸಿಸಿ ಇದೀಗ ಕ್ರಮ ಕೈಗೊಂಡಿದೆ. ಮೊಹಮ್ಮದ್ ಶಮಿಗೆ ಪಂದ್ಯ ಶುಲ್ಕ ಮತ್ತು ಒಡಿ ಮೆರಿಟ್ ಪಾಯಿಂಟ್ನಲ್ಲಿ ಶೇಕಡಾ 20 ರಷ್ಟು ಕಡಿತಗೊಳಿಸಲಾಗಿದೆ. ಟ್ರಾವಿಸ್ ಹೆಡ್ಗೆ ಡಿ ಮೆರಿಟ್ ಅಂಕಗಳನ್ನು ಮಾತ್ರ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.