Baba Vanga Prediction 2025: ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಕೋವಿಡ್ ಸಾಂಕ್ರಾಮಿಕ ರೋಗ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆ ಹೀಗೆ ಬಾಬಾ ವಂಗಾರ ಹಲವಾರು ಭವಿಷ್ಯಗಳು ನಿಜವಾಗಿದೆ.
Baba Vanga Predictions for 2025: ಇಡೀ ಜಗತ್ತೇ 2025ರ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿರುವಾಗ ಬಲ್ಗೇರಿಯಾದ ಬಾಬಾ ವಂಗಾರ ಭವಿಷ್ಯವಾಣಿಗಳು ಆತಂಕ ಮೂಡಿಸಿವೆ. 2025ರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳು ತುಂಬಾ ಆತಂಕಕಾರಿಯಾಗಿದೆ. ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಕೋವಿಡ್ ಸಾಂಕ್ರಾಮಿಕ ರೋಗ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆ ಹೀಗೆ ಅವರ ಹಲವಾರು ಭವಿಷ್ಯಗಳು ನಿಜವಾಗಿದೆ. 2025ರಲ್ಲಿ ಯುರೋಪ್ನಲ್ಲಿ ಯುದ್ಧ ಮತ್ತು ಜಗತ್ತಿನ ಅಂತ್ಯದ ಬಗ್ಗೆ ಅವರು ನುಡಿದಿರುವ ಭವಿಷ್ಯವಾಣಿಗಳು ಇದೀಗ ಬಹುದೊಡ್ಡ ಆತಂಕವನ್ನು ಮೂಡಿಸಿವೆ. 2025ರ ಕುರಿತು ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
2025ರ ಹೊಸ ವರ್ಷದ ಆರಂಭದ ಮುನ್ನವೇ ಜಾಗತಿಕ ಮಟ್ಟದಲ್ಲಿ ಯುದ್ಧದ ಛಾಯೆ ಆವರಿಸಿದೆ. 2025ರಲ್ಲಿ ಸಿರಿಯಾ ಪತನವಾಗಲಿದೆ ಅನ್ನೋ ಬಾಬಾ ವಂಗಾರ ಭವಿಷ್ಯ ನಿಜವಾಗುತ್ತಿದೆ. 2024ರ ಕೊನೆಯ ತಿಂಗಳಿನಲ್ಲಿಯೇ ಸಿರಿಯಾ ಕ್ರಾಂತಿ ಶುರುವಾಗಿದ್ದು, ಬಂಡುಕೋರರು ಸಿರಿಯಾ ಆಡಳಿತ ವಿರುದ್ಧ ದಂಗೆ ಎದ್ದಿದ್ದಾರೆ. 2000ರಿಂದ ಸುದೀರ್ಘ ಆಡಳಿತ ನಡೆಸುತ್ತಾ ಬಂದಿದ್ದ ಬಶರ್ ಅಲ್ ಅಸ್ಸಾದ್ ಬಂಡುಕೋರರ ದಾಳಿಗೆ ಸೋತು ದೇಶ ಬಿಟ್ಟು ಓಡಿ ಹೋಗಿದ್ದಾರೆ.
ಅಸ್ಸಾದ್ ಅಜ್ಞಾತ ಸ್ಥಳಕ್ಕೆ ಓಡಿ ಹೋಗಿದ್ದಾರೆ ಅಂತಾ ಕೆಲ ವರದಿಗಳು ಹೇಳಿದ್ರೆ, ಅವರನ್ನು ಕೊಂದು ಹಾಕಲಿವೆ ಅಂತಾ ಇನ್ನು ಕೆಲ ವರದಿಗಳು ಹೇಳುತ್ತಿದೆ. ದಂಡುಕೋರರು ನಿರಂತರ ಶಸ್ತ್ರ ಹೋರಾಟ ಮಾಡಿದ ಪರಿಣಾಮ ಅಸ್ಸಾದ್ ಅಧಿಕಾರದಿಂದ ಕೆಳಗಿಳಿದು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ಪರಿಸ್ಥಿತಿ ಉಂಟಾಯ್ತು. ಇದರಿಂದ ಸಿರಿಯಾ ಪತನದಿಂದ ವಿಶ್ವ ಯುದ್ಧ ನಡೆಯಲಿದೆ ಎಂಬ ಬಾಬಾ ವಂಗಾರ ಭವಿಷ್ಯವು ನಿಜವಾಗುತ್ತಿದೆ. ವಂಗಾರ ಭವಿಷ್ಯವಾಣಿಯ ಪ್ರಕಾರ, ಸಿರಿಯಾ ಪತನದ ಬಳಿಕ 3ನೇ ಮಹಾಯುದ್ಧ ನಡೆಯಲಿದೆ ಎಂದು ಹೇಳಲಾಗಿದೆ. ಆ ಭವಿಷ್ಯವಾಣಿ ನಿಜವಾಗಿದ್ದು, ಸಿರಿಯಾ ಪತನವಾಗಿದೆ. ಸಿರಿಯಾದಲ್ಲಿ ಉಂಟಾಗಿರುವ ಈ ಗೊಂದಲವೇ 3ನೇ ವಿಶ್ವ ಮಹಾ ಯುದ್ಧಕ್ಕೆ ನಾಂದಿ ಹಾಡಲಿದೆಯೇ? ಈ ಭವಿಷ್ಯ ನಿಜವಾಗಲಿದೆಯೇ? ಅನ್ನೋ ಆತಂಕವನ್ನು ಮೂಡಿಸಿದೆ.
ಬಾಬಾ ವಂಗಾ ಅವರು, ಯುರೋಪ್ನಲ್ಲಿ ಜನ ಸಂಖ್ಯೆ ಕಡಿಮೆಯಾಗಲಿದೆ ಅನ್ನೋ ಭವಿಷ್ಯ ನುಡಿದಿದ್ದಾರೆ. ಇದು ಯುದ್ಧದಿಂದಲೇ ಅಥವಾ ಪ್ರಕೃತಿ ವಿಕೋಪಗಳಿಂದಲೇ ಎಂಬುದು ಗೊತ್ತಿಲ್ಲ. ಆದರೆ ಯುರೋಪ್ನಲ್ಲಿ ಹೀಗಾಗಲೇ ಹಲವು ಕಡೆ ಆಂತರಿಕ ದಂಗೆಗಳು ಕಾಣುತ್ತಿದ್ದು, ಇದರಿಂದ ವಿಶ್ವ ಮಹಾಯುದ್ಧ ಸಂಭವಿಸಲಿದೆ ಅಂತಾನೇ ಹೇಳಲಾಗುತ್ತಿದೆ.
ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿಯಾಗಲಿದ್ದು, ಆಧುನಿಕ ಚಿಕಿತ್ಸಾ ವಿಧಾನ, ಮಾರಕ ರೋಗಗಳಿಗೆ ಪರಿಣಾಮಕಾರಿ ಔಷಧಗಳು ಬರಲಿವೆ. ಆರೋಗ್ಯ ವಿಭಾಗದಲ್ಲಿ ತುಂಬಾನೇ ಬದಲಾವಣೆಯಾಗಲಿದ್ದು, ಈ ಬದಲಾವಣೆಯಿಂದ ಜನರ ಜೀವನ ಮಟ್ಟ ಸುಧಾರಿಸಲಿದೆ. ಕ್ಯಾನ್ಸರ್ ಸೇರಿದಂತೆ ಮಾರಕ ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯುವ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಸಂವಹನದಲ್ಲಿ ಮತ್ತಷ್ಟು ಬೆಳವಣಿಗೆಯಾಗಲಿದ್ದು, ಟೆಲಿಪತಿ ಸಂವಹನ ಕೂಡ ಉಂಟಾಗಲಿದೆ. ಅನ್ಯಗ್ರಹ ಜೀವಿಗಳ ಜೊತೆಗೆ ಭೂಮಿಯಲ್ಲಿರುವ ಮಾನವನಿಗೆ ಸಂವಹನ ಸಾಧ್ಯವಾಗಲಿದೆ ಎಂಬ ಭವಿಷ್ಯವನ್ನು ಸಹ ಬಾಬಾ ವಂಗಾ ನುಡಿದಿದ್ದಾರೆ.
ಬಲ್ಗೇರಿಯಾದ ಬಾಬಾ ವಂಗಾ ತಮ್ಮ 12ನೇ ವಯಸ್ಸಿನಲ್ಲಿ ದೃಷ್ಟಿಯನ್ನು ಕಳೆದುಕೊಂಡರು. ಅತೀಂದ್ರಿಯ ಶಕ್ತಿಗಳ ಮೂಲಕ 51ನೇ ಶತಮಾನದವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಸಂಗತಿಗಳ ಭವಿಷ್ಯವಾಣಿಗಳನ್ನು ಸಾವಿಗೂ ಮೊದಲೇ ಬಾಬಾ ವಂಗಾ ನುಡಿದಿದ್ದಾರೆ.