Aadhaar Card: ಪ್ರಸ್ತುತ, ಪ್ರತಿಯೊಬ್ಬ ಭಾರತೀಯರಿಗೂ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದರಿಂದ ಹಿಡಿದು ಬ್ಯಾಂಕಿಂಗ್ ಕೆಲಸಗಳನ್ನು ಪೂರ್ಣಗೊಳಿಸಲು ಆಧಾರ್ ನಂಬರ್ ಇಲ್ಲದೆ ಕೆಲಸ ಸಾಗುವುದೇ ಇಲ್ಲ. ಇಂತಹ ನಿಮ್ಮ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಬೇರೆ ಯಾರಾದರೂ ಬಳಸುತ್ತಿದ್ದಾರಾ?
ಆಧಾರ್ ಸಂಖ್ಯೆಯನ್ನು ಬಳಸಿ ಜನರಿಗೆ ಮೋಸ ಮಾಡುತ್ತಿರುವ ಕೆಲವು ಘಟನೆಗಳು ಮುನ್ನಲೆಗೆ ಬಂದ ಬಳಿಕ ಜನರಲ್ಲಿ ಆತಂಕ ಹೆಚ್ಚಾಗಿದೆ. ಆದಾಗ್ಯೂ, ನಿಮ್ಮ ಆಧಾರ್ ಬೇರೆಯವರು ಬಳಸುತ್ತಿದ್ದಾರೋ, ಇಲ್ಲವೋ ಎಂಬ ಬಗ್ಗೆಯೂ ಕೂಡ ಅರಿವಿರುವುದಿಲ್ಲ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೆಯವರು ಬಳಸುತ್ತಿಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮಗೆ ಕೇವಲ ಎರಡೇ ನಿಮಿಷ ಸಾಕು.
ಇದನ್ನೂ ಓದಿ- TAX ವಿಷಯದಲ್ಲಿ ಸ್ವಲ್ಪ ರಿಲೀಫ್ ಕೊಡಿ ಮೇಡಂ ಎಂಬ ಟ್ವೀಟ್ ಗೆ ನಿರ್ಮಲಾ ಸೀತಾರಾಮನ್ ರಿಪ್ಲೆ ಏನು ಗೊತ್ತಾ?
ನಿಮ್ಮ ಆಧಾರ್ ಸಂಖ್ಯೆಯನ್ನು ಯಾರಾದ್ರೂ ಬಳಸ್ತಿದ್ದಾರಾ? ಹೀಗೆ ಪರಿಶೀಲಿಸಿ...!
ವಾಸ್ತವವಾಗಿ, ನಿಮ್ಮ ಆಧಾರ್ ಸಂಖ್ಯೆಯನ್ನು ಬೇರೆಯವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ಎಂಬುದನ್ನೂ ನೇರವಾಗಿ ತಿಳಿಯಲು ಸಾಧ್ಯವಿಲ್ಲ. ಆದರೆ, ಆಧಾರ್ ಇತಿಹಾಸವನ್ನು ಪರಿಶೀಲಿಸುವ ಮೂಲಕ ನೀವಿದನ್ನು ಪತ್ತೆ ಹಚ್ಚಬಹುದು.
ಯುಐಡಿಎಐ myAadhaar ಪೋರ್ಟಲ್‌ನಲ್ಲಿ 'ದೃಢೀಕರಣ ಇತಿಹಾಸ' ಎಂಬ ವೈಶಿಷ್ಟ್ಯ ಲಭ್ಯವಿದೆ. ಈ ವೈಶಿಷ್ಟ್ಯದ ಸಹಾಯದಿಂದ ನಿಮ್ಮ ಆಧಾರ್ ದುರ್ಬಳಕೆ ಆಗುತ್ತಿದೆಯೇ? ಬೇರೆಯಾರಾದರೂ ನಿಮಗೆ ಅರಿವಿಲ್ಲದೆಯೇ ಆಧಾರ್ ಬಳಸುತ್ತಿದ್ದಾರಾ? ಎಂಬುದನ್ನೂ ಪತ್ತೆ ಮಾಡಬಹುದು.
ಇದನ್ನೂ ಓದಿ- ಇನ್ನು ಟೋಲ್ ಟ್ಯಾಕ್ಸ್ ನೀಡಬೇಕಿಲ್ಲ ! ಯಾವುದೇ ಸುಂಕ ಪಾವತಿಸದೇ ಹೆದ್ದಾರಿಯಲ್ಲಿ ಪ್ರಯಾಣದ ಆನಂದ
ಆಧಾರ್ ಕಾರ್ಡ್ ಬಳಕೆಯ ಹಿಸ್ಟರಿ ತಿಳಿಯಲು ಹಂತ-ಹಂತದ ಪ್ರಕ್ರಿಯೆ:
ಹಂತ-1: myAadhaar ಪೋರ್ಟಲ್‌ಗೆ ಭೇಟಿ ನೀಡಿ.
ಹಂತ-2: myAadhaar ಪೋರ್ಟಲ್ ಲಾಗಿನ್ ಮಾಡಿ.
ಹಂತ-3: ನಿಗದಿತ ಜಾಗದಲ್ಲಿ ಆಧಾರ್ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
ಹಂತ-4: ನೋಂದಾಯಿತ ಸಂಖ್ಯೆಯಲ್ಲಿ ಬರುವ ಓಟಿಪಿ ಬಳಸಿ ಲಾಗಿನ್ ಆಗಿ.
ಹಂತ-5: ಓಟಿಪಿ ನಮೂದಿಸಿದ ಬಳಿಕ ದೃಢೀಕರಣ ಇತಿಹಾಸ ಎಂಬ ಆಯ್ಕೆಯನ್ನು ಆರಿಸಿ.
ಹಂತ-6: ನೀವು ಎಲ್ಲಿಂದ ಎಲ್ಲಿಯವರೆಗೆ ಇತಿಹಾಸವನ್ನು ವೀಕ್ಷಿಸಲು ಬಯಸುತ್ತೀರಿ, ಆ ಅವಧಿಯನ್ನು ಆಯ್ಕೆಯಮಾಡಿ.
ಹಂತ-7: ಎಲ್ಲೆಲ್ಲಿ ನಿಮ್ಮ ಆಧಾರ್ ಬಳಕೆಯಾಗಿದೆ ಎಂಬುದನ್ನು ಪರಿಶೀಲಿಸಿ. ಯಾವುದೇ ಅಜ್ಞಾತ ಅಥವಾ ಅನುಮಾನಾಸ್ಪದ ವಹಿವಾಟು ನಡೆದಿದೆಯೇ ಎಂಬುದನ್ನೂ ಗುರುತಿಸಿ.
ಹಂತ-8: ಒಂದೊಮ್ಮೆ ನಿಮಗರಿವಿಲ್ಲದೆ ಎಲ್ಲಾದರೂ ನಿಮ್ಮ ಆಧಾರ್ ನಂಬರ್ ಬಳಕೆಯಾಗಿದೆ ಎಂಬುದನ್ನೂ ನೀವು ಗಮನಿಸಿದರೆ ಕೂಡಲೇ ಈ ಬಗ್ಗೆ ಯುಐಡಿಎಐಗೆ ವರದಿ ಮಾಡಿ.
ಯುಐಡಿಎಐ ಸಂಪರ್ಕಿಸುವ ಸುಲಭ ವಿಧಾನ:
ಯುಐಡಿಎಐಗೆ ವರದಿ ಮಾಡಲು ಎರಡು ಸುಲಭ ಮಾರ್ಗಗಳಿವೆ.
* ಟೋಲ್ ಫ್ರೀ ಸಂಖ್ಯೆ: 1947 ಗೆ ಕರೆ ಮಾಡಿ ನೀವು ಯುಐಡಿಎಐ ಸಹಾಯಕ್ಕಾಗಿ ಸಂಪರ್ಕಿಸಬಹುದು.
* ಇಮೇಲ್: ಇಲ್ಲವೇ, help@uidai.gov.in ಗೆ ಇಮೇಲ್ ಮಾಡಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ