ಭಾರತದ ಈ ನಿಗೂಢ ರಾಜ್ಯದಲ್ಲಿ ಸೂರ್ಯ ಮುಳುಗ್ತಿದ್ದಂತೆ 'ಸಾಮೂಹಿಕ ಆತ್ಮಹತ್ಯೆ'ಗೆ ಶರಣಾಗ್ತವೆ ಪಕ್ಷಿಗಳು..! ಈ ವಿಚಿತ್ರ ಘಟನೆ ನಡೆಯೋ ಸ್ಥಳ ಯಾವುದು ಗೊತ್ತೇ?

Jatinga Bird Suicide Mystery: ಅಸ್ಸಾಂ ಒಂದು ಪ್ರವಾಸಿ ತಾಣವಾಗಿದ್ದು, ಐತಿಹಾಸಿಕ ಪ್ರಾಮುಖ್ಯತೆಗಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ತನ್ನ ಪರಂಪರೆ, ಒಂದು ಕೊಂಬಿನ ಘೇಂಡಾಮೃಗ, ಕಾಜಿರಂಗ ರಾಷ್ಟ್ರೀಯ ಉದ್ಯಾನ, ಕಾಮಾಖ್ಯ ದೇವಸ್ಥಾನ ಸೇರಿದಂತೆ ಅನೇಕ ವಿಶೇಷ ಸ್ಥಳಗಳನ್ನು ಅಸ್ಸಾಂ ಒಳಗೊಂಡಿದೆ.  

Written by - Bhavishya Shetty | Last Updated : Oct 25, 2024, 08:49 PM IST
    • ಭಾರತದಲ್ಲಿ ಭಯಾನಕ ರಹಸ್ಯಗಳನ್ನು ಎಲ್ಲಾ ಕಡೆಗಳಲ್ಲೂ ಕೇಳಸಿಗುತ್ತವೆ
    • ಇದು ದೇಶದಲ್ಲಿರುವ ಅತ್ಯಂತ ಭಯಾನಕ ಮತ್ತು ನಿಗೂಢ ಗ್ರಾಮ
    • ಪ್ರತಿ ವರ್ಷ ಮಳೆಗಾಲದ ಕೊನೆಯಲ್ಲಿ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತವೆ.
ಭಾರತದ ಈ ನಿಗೂಢ ರಾಜ್ಯದಲ್ಲಿ ಸೂರ್ಯ ಮುಳುಗ್ತಿದ್ದಂತೆ 'ಸಾಮೂಹಿಕ ಆತ್ಮಹತ್ಯೆ'ಗೆ ಶರಣಾಗ್ತವೆ ಪಕ್ಷಿಗಳು..! ಈ ವಿಚಿತ್ರ ಘಟನೆ ನಡೆಯೋ ಸ್ಥಳ ಯಾವುದು ಗೊತ್ತೇ?  title=
Mysterious village of India

Mysterious village of India: ಭಾರತದಲ್ಲಿ ಭಯಾನಕ ರಹಸ್ಯಗಳನ್ನು ಎಲ್ಲಾ ಕಡೆಗಳಲ್ಲೂ ಕೇಳಸಿಗುತ್ತವೆ. ಇದೀಗ ಅಂತಹದ್ದೇ ಒಂದು ವಿಚಾರದ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ. ಇದು ದೇಶದಲ್ಲಿರುವ ಅತ್ಯಂತ ಭಯಾನಕ ಮತ್ತು ನಿಗೂಢ ಗ್ರಾಮ. ಅಸ್ಸಾಂನ ಜಟಿಂಗ ಗ್ರಾಮದ.. ಇಲ್ಲಿನ ರಹಸ್ಯದ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗದೆ ಇರದು.

ಇದನ್ನೂ ಓದಿ: ದೇಶದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ರಾಜ್ಯ ಯಾವುದು ಗೊತ್ತೆ..? ಈ ರಾಜ್ಯದಲ್ಲಿ 79000 ದೇಗುಲಗಳಿವೆ..

ಅಸ್ಸಾಂ ಒಂದು ಪ್ರವಾಸಿ ತಾಣವಾಗಿದ್ದು, ಐತಿಹಾಸಿಕ ಪ್ರಾಮುಖ್ಯತೆಗಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ತನ್ನ ಪರಂಪರೆ, ಒಂದು ಕೊಂಬಿನ ಘೇಂಡಾಮೃಗ, ಕಾಜಿರಂಗ ರಾಷ್ಟ್ರೀಯ ಉದ್ಯಾನ, ಕಾಮಾಖ್ಯ ದೇವಸ್ಥಾನ ಸೇರಿದಂತೆ ಅನೇಕ ವಿಶೇಷ ಸ್ಥಳಗಳನ್ನು ಅಸ್ಸಾಂ ಒಳಗೊಂಡಿದೆ.

ಇನ್ನು ಇಲ್ಲಿನ ಜಟಿಂಗ ನಿಗೂಢ ಹಳ್ಳಿ, ಪ್ರತಿ ವರ್ಷ ಮಳೆಗಾಲದ ಕೊನೆಯಲ್ಲಿ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತವೆ. ಈ ಗ್ರಾಮವು ದಿಮಾ ಹಸಾವೊ ಜಿಲ್ಲೆಯಲ್ಲಿದ್ದು, ಗುವಾಹಟಿಯಿಂದ ದಕ್ಷಿಣಕ್ಕೆ 330 ಕಿಮೀ ಮತ್ತು ಹಫ್ಲಾಂಗ್‌ನಿಂದ 9 ಕಿಮೀ ದೂರದಲ್ಲಿದೆ. ಇಲ್ಲಿನ ವಲಸೆ ಹಕ್ಕಿಗಳ ವಿಚಿತ್ರ ವಿದ್ಯಮಾನವು ಜಟಿಂಗದಲ್ಲಿ ಸೆಪ್ಟೆಂಬರ್‌ನಿಂದ ನವೆಂಬರ್ ನಡುವೆ ರಾತ್ರಿ 7 ರಿಂದ 10 ರವರೆಗೆ ಸಂಭವಿಸುತ್ತದೆ.

ಈ ಘಟನೆಯಲ್ಲಿ ಟೈಗರ್ ಬಿಟರ್ನ್, ಕಿಂಗ್ ಫಿಶರ್ ಮತ್ತು ಲಿಟಲ್ ಎಗ್ರೆಟ್‌ನಂತಹ ವಿವಿಧ ಜಾತಿಯ ಪಕ್ಷಿಗಳ ಗುಂಪು ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಈ ಹಕ್ಕಿಗಳು ಮಂಜು ಅಥವಾ ಮೋಡಗಳು ಇದ್ದಾಗ ಜಟಿಂಗಕ್ಕೆ ಬರುತ್ತವೆ. ಆದರೆ ಅಲ್ಲಿ ವಿಚಿತ್ರ ರೀತಿಯಲ್ಲಿ ಸಾಯುತ್ತವೆ. ವಿಜ್ಞಾನಿಗಳ ಪ್ರಕಾರ, ಬಲವಾದ ಗಾಳಿಯು ಈ ಪಕ್ಷಿಗಳನ್ನು ಗೊಂದಲಗೊಳಿಸುತ್ತದೆ. ಈ ಪಕ್ಷಿಗಳು ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ಬೆಳಕಿನ ಕಡೆಗೆ ಹಾರುತ್ತವೆ. ಆದರೆ ಬಿದಿರಿನ ಕಂಬಗಳಿಗೆ ಡಿಕ್ಕಿ ಹೊಡೆದು ಗಾಯಗೊಳ್ಳುತ್ತವೆ ಅಥವಾ ಸಾಯುತ್ತವೆ.

ಇದನ್ನೂ ಓದಿ: Daily GK Quiz: ಯಾವ ರಾಜ್ಯದಲ್ಲಿ ತಂಬಾಕನ್ನು ಅಧಿಕವಾಗಿ ಬೆಳೆಯುತ್ತಾರೆ..?

ಇನ್ನು ಈ ಪಕ್ಷಿಗಳ ಸಾವಿನ ಬಗ್ಗೆ ಅನೇಕ ಹೇಳಿಕೆಗಳಿವೆ. ಕೆಲವು ಅಧ್ಯಯನಗಳು ಅಸ್ಸಾಂನಲ್ಲಿನ ಜಲಾಶಯಗಳನ್ನು ಭರ್ತಿ ಮಾಡುವುದರಿಂದ ಪಕ್ಷಿಗಳ ನೈಸರ್ಗಿಕ ಆವಾಸಸ್ಥಾನವನ್ನು ಅಡ್ಡಿಪಡಿಸುತ್ತದೆ ಎಂದು ಹೇಳಿದರೆ, ಇಲ್ಲಿನ ಜನರು ಇದನ್ನು ದುಷ್ಟಶಕ್ತಿಯ ಕೆಲಸ ಎಂದು ನಂಬುತ್ತಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News