Manvitha Kamath Marriage : ನಟಿ ಮಾನ್ವಿತಾ ಹಾಗೂ ಅರುಣ್ ಚಿಕ್ಕಮಗಳೂರಿನ ಕಳಸದಲ್ಲಿ ಮದುವೆ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. 2 ಕುಟುಂಬದವರು, ಆಪ್ತರು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಇವರ ವಿವಾಹಕ್ಕೆ ಸಾಕ್ಷಿಯಾದರು.
ಇಂದು ಚಿಕ್ಕಮಗಳೂರಿನ ಕಳಸದಲ್ಲಿ ಮೈಸೂರು ಹುಡುಗ ಅರುಣ್ ಕುಮಾರ್ ಜೊತೆ ನಟಿ ಮಾನ್ವಿತಾ ಕಾಮತ್ ಸಪ್ತಪದಿ ತುಳಿದಿದ್ದಾರೆ.
ನಿನ್ನೆ ಅರಿಶಿನ ಶಾಸ್ತ್ರ, ಮೆಹಂದಿ ಅದ್ಧೂರಿಯಾಗಿ ಜರುಗಿತ್ತು.
ನಟಿ ಮಾನ್ವಿತಾ ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ, ಶ್ರುತಿ ಹರಿಹರನ್, ನಿರೂಪಕ ನಿರಂಜನ್ ಸೇರಿದಂತೆ ಹಲವು ಸಿನಿರಂಗದ ಸ್ನೇಹಿತರು ಭಾಗಿಯಾಗಿದ್ದರು.
ಮಾನ್ವಿತಾ ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮದುವೆಯಾಗಿದ್ದಾರೆ.
ಕಳಸದ 500 ವರ್ಷಗಳ ಇತಿಹಾಸ ಇರುವ ವೆಂಕಟೇಶ್ವರ ದೇವಾಲಯದಲ್ಲಿ ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆಯಿತು.