ಇದು ನಿಜವಾಗಿಯೂ ಕಾಂಗ್ರೆಸ್ ಪಕ್ಷ ಸಾಯುವ ಸಮಯ - ಆಮ್ ಆದ್ಮಿ ಪಕ್ಷದ ನಾಯಕಿ

ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಪಕ್ಷದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ನಾಯಕಿ ಪ್ರೀತಿ ಶರ್ಮಾ ಮೆನನ್ ಅವರು ' ಆ ಪಕ್ಷ ಸಾಯುವ ಸಮಯ' ಎಂದು ಹೇಳಿದ್ದಾರೆ.

Last Updated : Nov 12, 2019, 04:39 PM IST
ಇದು ನಿಜವಾಗಿಯೂ ಕಾಂಗ್ರೆಸ್ ಪಕ್ಷ ಸಾಯುವ ಸಮಯ - ಆಮ್ ಆದ್ಮಿ ಪಕ್ಷದ ನಾಯಕಿ title=
file photo

ನವದೆಹಲಿ: ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಪಕ್ಷದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ನಾಯಕಿ ಪ್ರೀತಿ ಶರ್ಮಾ ಮೆನನ್ ಅವರು ' ಆ ಪಕ್ಷ ಸಾಯುವ ಸಮಯ' ಎಂದು ಹೇಳಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು ' ಕಾಂಗ್ರೆಸ್ ಪಕ್ಷವು ದೇಶಕ್ಕಿಂತ ಪಕ್ಷವೇ ಮೊದಲು ಎನ್ನುವಂತೆ ವರ್ತಿಸುತ್ತಿದೆ. ಲೋಕಸಭೆಯಲ್ಲಿ ಅವರು ಪ್ರಾದೇಶಿಕ ಮೈತ್ರಿಗಳನ್ನು ಮೊಂಡುತನದಿಂದ ನಿರಾಕರಿಸಿ ಬಿಜೆಪಿಗೆ ಅನುಕೂಲ ಮಾಡಿದರು. ಈಗ ಅವರು ಮಹಾರಾಷ್ಟ್ರವನ್ನು ತಟ್ಟೆಯಲ್ಲಿ ಬಿಜೆಪಿಗೆ ನೀಡುತ್ತಿದ್ದಾರೆ.'ಎಂದು ಹೇಳಿದ್ದಾರೆ.

ಇನ್ನು ಮುಂದುವರೆದು ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರು ಶರದ್ ಪವಾರ್ ಅವರೊಂದಿಗೆ ಸೇರಬೇಕು ಎಂದು ಅವರು ಹೇಳಿದರು. ಚುನಾವಣಾ ಪೂರ್ವ ಮೈತ್ರಿ ಹೊಂದಿದ್ದರೂ, ಅಕ್ಟೋಬರ್ 24 ರಂದು ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಬಿಜೆಪಿ ಮತ್ತು ಶಿವಸೇನೆ ನಡುವೆ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಅಸಮಾಧಾನ ಬುಗಿಲೆದ್ದಿತು.

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಗೆ 105 ಸ್ಥಾನಗಳು ಮತ್ತು ಶಿವಸೇನೆ 56 ಸ್ಥಾನಗಳನ್ನು ಪಡೆದಿದೆ. 288 ಸದಸ್ಯರ ವಿಧಾನಸಭೆಯಲ್ಲಿ ಉಭಯ ಪಕ್ಷಗಳ ಒಟ್ಟು ಸಂಖ್ಯೆ 161 ಆಗಿದ್ದು, ಬಹುಮತಕ್ಕೆ 145 ಸ್ಥಾನಗಳ ಅವಶ್ಯಕತೆ ಇದೆ.  

Trending News