ನವದೆಹಲಿ: ಕಲಂ 370 ರಿಂದ ಆಗುವ ಪ್ರಯೋಜನವನ್ನು ವಿವರಿಸುತ್ತಾ ಬಿಜೆಪಿ ಶಾಸಕನೊಬ್ಬ ಇನ್ನು ಮುಂದೆ ಪಕ್ಷದ ಕಾರ್ಯಕರ್ತರು ಕಾಶ್ಮೀರಿ ಸುಂದರಿಯರನ್ನು ಮದುವೆಯಾಗಬಹುದು ಎಂದು ಹೇಳಿರುವ ವೀಡಿಯೋ ಈಗ ವೈರಲ್ ಆಗಿದೆ. ಮುಜಾಫರ್ ನಗರ್ ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಕ್ರಮ ಸೈನಿ ಅವರು "ಸರ್ಕಾರದ ಕಾಶ್ಮೀರ ನಿರ್ಧಾರದಿಂದ, ಬಿಜೆಪಿ ಕಾರ್ಯಕರ್ತರು ಈಗ ಅಲ್ಲಿಗೆ ಹೋಗಬಹುದು, ಜಮೀನುಗಳನ್ನು ಖರೀದಿಸಬಹುದು ಮತ್ತು ಮದುವೆಯಾಗಬಹುದು" ಎಂದು ಹೇಳಿದರು.
Muzaffarnagar BJP MLA Vikram Saini on abrogation of Article 370.
"Muslim karyakartas sitting here should be celebrating. Marry "gori ladki" from Kashmir now" pic.twitter.com/tRhZXy8IZq
— Piyush Rai (@Benarasiyaa) August 6, 2019
"ಕಾರ್ಯಕರ್ತರು ತುಂಬಾ ಉತ್ಸುಕರಾಗಿದ್ದಾರೆ ಮತ್ತು ಪದವಿ ಪಡೆದವರು ಅಲ್ಲಿ ಮದುವೆಯಾಗಬಹುದು. ಈಗ ಯಾವುದೇ ಸಮಸ್ಯೆ ಇಲ್ಲ. ಈ ಹಿಂದೆ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿದ್ದವು. ಕಾಶ್ಮೀರದ ಮಹಿಳೆಯೊಬ್ಬರು ಉತ್ತರ ಪ್ರದೇಶದ ಪುರುಷನನ್ನು ಮದುವೆಯಾದರೆ, ಅವರ ಪೌರತ್ವವನ್ನು ರದ್ದುಪಡಿಸಲಾಗುತ್ತದೆ. ಭಾರತ ಮತ್ತು ಕಾಶ್ಮೀರಕ್ಕೆ ವಿಭಿನ್ನ ಪೌರತ್ವವಿತ್ತು. ಮುಸ್ಲಿಂ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಬೇಕು. ಅವರು ಸುಂದರ ಕಾಶ್ಮೀರಿ ಹುಡುಗಿಯರನ್ನು ಮದುವೆಯಾಗಬಹುದು. ಸಂಭ್ರಮಾಚರಣೆ ಇರಬೇಕು. ಎಲ್ಲರೂ ಆಚರಿಸಬೇಕು, ಅದು ಹಿಂದೂಗಳಾಗಿರಲಿ ಅಥವಾ ಮುಸ್ಲಿಮರಾಗಲಿ. ಇದು ಇಡೀ ದೇಶ ಸಂಭ್ರಮಿಸುವಂತಹ ಸಮಯ " ಎಂದು ಅವರು ಹೇಳಿದರು.
ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಅವರು “ಈಗ ಯಾರಾದರೂ ಯಾವುದೇ ಸಮಸ್ಯೆಯಿಲ್ಲದೆ ಕಾಶ್ಮೀರಿ ಹುಡುಗಿಯನ್ನು ಮದುವೆಯಾಗಬಹುದು. ನಾನು ಹೇಳಿದ್ದು ಅಷ್ಟೆ ಮತ್ತು ಇದು ಸತ್ಯ. ಇದು ಕಾಶ್ಮೀರದ ಜನರಿಗೆ ನೀಡಿರುವ ಸ್ವಾತಂತ್ರ. ಅದಕ್ಕಾಗಿಯೇ ನಾವು ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈಗ ಕಾಶ್ಮೀರಿಗಳು ಸ್ವಾತಂತ್ರ್ಯವನ್ನು ಪಡೆದಿದ್ದಾರೆ ಎಂದು ಹೇಳಿದರು.