Actress Mumtaj news : ನಟಿ ಮುಮ್ತಾಜ್ ತಮಿಳು ಚಿತ್ರರಂಗದಲ್ಲಿ ಬಹಳ ಮುಖ್ಯ ಮತ್ತು ಪ್ರಮುಖ ನಟಿಯರಲ್ಲಿ ಒಬ್ಬರು. ಅವರು ಅನೇಕ ಚಿತ್ರಗಳಲ್ಲಿ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಗ್ಲಾಮರಸ್ ಪಾತ್ರಗಳನ್ನ ಮಾಡಿದ್ದಾರೆ. ಇದೀಗ ನಟಿ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಕನ್ನಡದ ಕಂಠಿ ಸಿನಿಮಾದಲ್ಲಿ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದ ಮಮ್ತಾಜ್ ಹೆಚ್ಚಾಗಿ ತಮಿಳು ಮತ್ತು ತೆಲುಗಿನಲ್ಲಿ ನಟಿಸಿದ್ದಾರೆ. ಹಳೆಯ ಸಂದರ್ಶನವೊಂದರಲ್ಲಿ, ಅವರು ತಮ್ಮ ಮರಣದ ನಂತರ ತಮ್ಮ ಮಾದಕ ಫೋಟೋಗಳನ್ನು ಹಂಚಿಕೊಳ್ಳಬಾರದು ಎಂದು ವಿನಂತಿಸಿಕೊಂಡಿದ್ದು. ಸದ್ಯ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ:ಈ ವರ್ಷ ಆಗಸ್ಟ್ನಲ್ಲಿ ಮೋಕ್ಷಿತಾ ಪೈ ಮದುವೆ! ಹುಡುಗ ಯಾಋು ಗೊತ್ತಾ?
ರಾಜೇಂದ್ರನ್ ನಿರ್ದೇಶನದ ಮೋನಿಶಾ ಎನ್ ಮೊನಾಲಿಸಾ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದರು. ಮುಮ್ತಾಜ್ ಅಂದ್ರೆ ಗ್ಲಾಮರ್, ಗ್ಲಾಮರ್ ಅಂದ್ರೆ ಮಮ್ತಾಜ್ ಎನ್ನುವ ಮಾತಿತ್ತು.. ಆದರೆ ಕೊನೆಯ ಬಾರಿಗೆ 2013 ರಲ್ಲಿ 'ಅತ್ತಾರಿಂಟಿಕಿ ದಾರೇದಿ' ಚಿತ್ರದಲ್ಲಿ ನಟಿಸಿದರು. ಅದಾದ ನಂತರ ಸಿನಿರಂಗದಿಂದ ಸಂಪೂರ್ಣವಾಗಿ ದೂರುಳಿದರು.
ಸಿನಿಮಾದಿಂದ ಸಂಪೂರ್ಣವಾಗಿ ನಿವೃತ್ತಿ ಪಡೆದ ಮುಮ್ತಾಜ್, ಈಗ ಪೂಜೆ ಮತ್ತು ಆಧ್ಯಾತ್ಮದಲ್ಲಿ ಸಂಪೂರ್ಣವಾಗಿ ಮುಳುಗಿದ್ದಾರೆ. ಅವರು ಇಲ್ಲಿಯವರೆಗೆ ಮೂರು ಬಾರಿ ಮೆಕ್ಕಾಗೆ ಭೇಟಿ ನೀಡಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಮುಸ್ಲಿಮರು ಧನ್ಯರು ಎಂದು ಇಸ್ಲಾಮಿಕ್ ಜನರು ನಂಬುತ್ತಾರೆ.
ಇದನ್ನೂ ಓದಿ:ಬಾಡಿಗೆ ಮನೆ ಕೇಳಲು ಹೋದ Bigg Boss ಸ್ಪರ್ಧಿಗೆ ಧರ್ಮ-ಜಾತಿ ಪ್ರಶ್ನೆ..! ನಟಿ ಅಂದ್ರೆ ಮನೆನೂ ತೋರಿಸಲ್ವಂತೆ..
ಮುಮ್ತಾಜ್ ಒಬ್ಬ ಆಧ್ಯಾತ್ಮಿಕವಾದಿಯಾಗಿದ್ದಾರೆ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ, "ನಾನು ಮಗುವಾಗಿದ್ದಾಗ, ನನ್ನ ಧಾರ್ಮಿಕ ಪುಸ್ತಕ ಕುರಾನ್ನಲ್ಲಿ ಏನಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಅದನ್ನು ಓದಿದ್ದರೂ, ಅದರ ಅರ್ಥಗಳು ನನಗೆ ತಿಳಿದಿರಲಿಲ್ಲ. ನಾನು ಇಂದು ಹೀಗೆ ಬದಲಾಗಿದ್ದೇನೆ, ಕುರಾನ್ನಲ್ಲಿ ನನಗೆ ಏನು ಹೇಳಲಾಗಿದೆ ಎಂದು ಅರ್ಥವಾಗಿದೆ. ನನ್ನ ಹಿಂದಿನದನ್ನು ನಾನು ಮರೆಯಬಲ್ಲೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ, ನನ್ನ ಪ್ರಸ್ತುತ ಜೀವನದಲ್ಲಿ ನಾನು ಅಲ್ಲಾಹನಿಗೆ ಹತ್ತಿರವಾಗಲು ಪ್ರಯತ್ನಿಸುತ್ತೇನೆ.
ನನ್ನದೊಂದು ವಿನಂತಿ.. ನಾನು ಸತ್ತ ನಂತರ, ನನ್ನ ಕೊಳಕು (ಮಾದಕ) ಫೋಟೋಗಳನ್ನು ಹಂಚಿಕೊಳ್ಳಬೇಡಿ. ದಯವಿಟ್ಟು ಇದನ್ನು ನನ್ನ ಕೊನೆಯ ಆಸೆಯಾಗಿ ತೆಗೆದುಕೊಳ್ಳಿ. "ನನ್ನ ಆ ಫೋಟೋಗಳನ್ನು ನೀವು ಹಂಚಿಕೊಂಡರೆ, ಅದು ನನ್ನ ಸಾವಿನಲ್ಲೂ ನನಗೆ ನೋವುಂಟು ಮಾಡುತ್ತದೆ" ಎಂದು ಮಮ್ತಾಜ್ ಹೇಳಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.