ಪದಾಧಿಕಾರಿಗಳ ಜೊತೆ ವಿಜಯೇಂದ್ರ ಹೈವೋಲ್ಟೇಜ್‌ ಮೀಟಿಂಗ್..‌ ಲೋಕಸಭೆ ಜೊತೆ ಯತ್ನಾಳ್‌ಗೂ ಮದ್ದು..?

B Y Vijayendra: ರಾಜ್ಯ ಬಿಜೆಪಿಯ ನೂತನ ಸಾರಥಿಯಾಗಿ ಬಿವೈ ವಿಜಯೇಂದ್ರ ಅಧಿಕಾರವಹಿಸಿಕೊಂಡ ನಂತರ ಒಂದಿಷ್ಟು ಬದಲಾವಣೆಗಳು ಆಗುತ್ತಿವೆ.. ಲೋಕಸಭಾ ಚುನಾವಣೆಯಲ್ಲಿ ಪ್ರಾಬಲ್ಯ ತೋರಿಸಲು ಹೊಸ ಟೀಮ್ ಗೆ ಅವಕಾಶ ನೀಡಲಾಗಿದೆ. ಹೊಸ ಟೀಮ್ ನ ಸದಸ್ಯರ ಮೊದಲ ಸಭೆ ನಡೆಸಿ ಕೆಲವೊಂದು ಟಾಸ್ಕ್ ನೀಡಲಾಗಿದೆ. ಜೊತೆಗೆ ಪಕ್ಷದ ವಿರುದ್ದ ಡ್ಯಾಮೇಜ್ ಹೇಳಿಕೆ ನೀಡುವವರ ಬಗ್ಗೆಯು ಚರ್ಚೆ ನಡೆದಿದೆ. ಹಾಗಾದ್ರೆ ಹೊಸ ಟೀಮ್ ಗೆ ಕೊಟ್ಟ ಟಾಸ್ಕ್ ಏನು.? ಪಕ್ಷದ ವಿರುದ್ದ ಹೇಳಿಕೆ ಕೊಡವವರ ಬಗ್ಗೆ ತೆಗೆದುಕೊಂಡ ನಿರ್ಣಯದ ಬಗ್ಗೆ ಇಲ್ಲಿದೆ ಮಾಹಿತಿ..

Written by - Savita M B | Last Updated : Dec 27, 2023, 06:04 PM IST
  • ವಿಜಯೇಂದ್ರ ನೇತೃತ್ವದಲ್ಲಿ ಪದಾಧಿಕಾರಿಗಳ ಮೀಟಿಂಗ್‌
  • ಲೋಕಸಭಾ ಚುನಾವಣೆ ಗೆಲ್ಲೋದಕ್ಕೆ ಸದಸ್ಯರಿಗೆ ಟಾಸ್ಕ್
  • ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್ ವಿಚಾರವೇ ಸದ್ದು
ಪದಾಧಿಕಾರಿಗಳ ಜೊತೆ ವಿಜಯೇಂದ್ರ ಹೈವೋಲ್ಟೇಜ್‌ ಮೀಟಿಂಗ್..‌ ಲೋಕಸಭೆ ಜೊತೆ ಯತ್ನಾಳ್‌ಗೂ ಮದ್ದು..? title=

BJP High Voltage Meeting: ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹೊಸ ಟೀಮ್ ಕಟ್ಟಿ,  ಮೊದಲ ಸಭೆ ಕೂಡ ನಡೆಸಿದ್ದಾರೆ. ನೂತನ ಸದಸ್ಯರಿಗೆ ಕೆಲವು ಸೂಚನೆಗಳ ಜೊತೆ ಟಾಸ್ಕ್ ನ್ನ ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಸದಸ್ಯರು ಜವಾಬ್ದಾರಿ ಹೊತ್ತು 28 ಕ್ಷೇತ್ರಗಳಲ್ಲಿ ಗೆಲ್ಲವುದು ಸೇರಿದಂತೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಗೆ ಯಾವ ರೀತಿ ತಿರುಗೇಟು ನೀಡಬೇಕು ಎಂಬುದರ ಬಗ್ಗೆ ಸಲಹೆ ಸೂಚನೆಗಳ ಬಗ್ಗೆ ಚರ್ಚೆ ನಡೆಸಿ ಪ್ರತಿಯೊಬ್ಬರಿಗೂ ಟಾಸ್ಕ್ ರೀಚ್ ಮಾಡಲೇಬೇಕೆಂದು ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಲೋಕಸಭಾ ಚುನಾವಣೆ ಟಾಸ್ಕ್ ಒಂದು ಕಡೆಯಾದ್ರೆ.. ಸದ್ಯ ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ ಹೇಳಿಕೆ ಕೊಡುವಂತಹ ನಾಯಕರಿಗೆ ಕಡಿವಾಣ ಹಾಕಲೇಬೇಕೆಂಬ ನಿರ್ಣಯವನ್ನ ತೆಗೆದುಕೊಳ್ಳಲಾಗಿದೆ. ಹಿರಿಯ ನಾಯಕ ಹಾಗೂ ಶಾಸಕ ಯತ್ನಾಳ್ ಅವರ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್ ಅಗ್ತಿದೆ ಅಂತಾ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್ ವಿರುದ್ಧ ಒಕ್ಕೊರಲಿನಿಂದ ಖಂಡಿಸಲಾಗಿದೆ.ಯತ್ನಾಳ್ ಕಾಂಗ್ರೆಸ್ ಏಜೆಂಟ್ ಥರ ವರ್ತಿಸುತ್ತಿದ್ದಾರೆ ಅವರ ಹೇಳಿಕೆಯಿಂದ  ನಮ್ಮ ಮೇಲೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುವಂತಾಗಿದೆ..

ಇದನ್ನೂ ಓದಿ-ಮಂತ್ರಾಲಯದಲ್ಲಿ ಹುಂಡಿ ಎಣಿಕೆ; 2 ಕೋಟಿ 96 ಲಕ್ಷ ಕಾಣಿಕೆ ಸಂಗ್ರಹ

ಸಭೆಯ ಬಳಿಕ‌ ಮಾತನಾಡಿದ ಮಾಜಿ ಶಾಸಕ‌ ಹಾಗೂ ಪ್ರಧಾನ ಕಾರ್ಯದರ್ಶಿ ಪಿ  ರಾಜೀವ್, ಪದಾಧಿಕಾರಿಗಳ ಸಭೆ ನಡೆಸಿ ಎಲ್ಲರಿಗೂ ಲೋಕಸಭಾ ಚುನಾವಣೆಯ ಜವಾಬ್ದಾರಿ ನೀಡಲಾಗಿದೆ.. ಎಲ್ಲರು ಲೋಕಸಭಾ ಚುನಾವಣೆ ಮುಗಿಯುವವರೆಗು ಪ್ರವಾಸ, ಪಕ್ಷ ಸಂಘಟನೆ ಮಾಡುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಪಕ್ಷದಲ್ಲಿನ  ಅಶಿಸ್ತಿನ ವಿಚಾರದಲ್ಲಿ ಇತ್ತೀಚಿನ ಘಟನೆ ಸಭೆಯಲ್ಲಿ ಬಹಳ ಗಂಭೀರವಾಗಿ ಚರ್ಚೆಯಾಗಿದೆ. 

ಇದನ್ನೂ ಓದಿ-ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ: ಪ್ರಿಯಾಂಕ್ ಖರ್ಗೆ

ಇತ್ತೀಚಿನ ಎಲ್ಲಾ ಬೆಳವಣಿಗೆ ಬಗ್ಗೆ ಪದಾಧಿಕಾರಿಗಳು ಚರ್ಚೆ ಮಾಡಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಆಗಿದೆ. ಆಂತರಿಕ ವಿಚಾರ ಬಹಿರಂಗ ಪಡಿಸಲ್ಲ. ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೆ ಅಂತಾ ಪರೋಕ್ಷವಾಗಿ ಶಾಸಕ ಯತ್ನಾಳ್ ವಿರುದ್ದ ಕ್ರಮ ತೆಗೆದುಕೊಳ್ಳೊದಕ್ಕೆ ಹೈಕಮಾಂಡ್ ಗೆ ಮಾಹಿತಿ ನೀಡಲಾಗುತ್ತೆ ಎಂದು ಮಾಹಿತಿ ನೀಡಿದರು..

ಶಾಸಕ ಯತ್ನಾಳ್ ಹೇಳಿಕೆಗಳು ಆರೋಪಗಳಿಂದ  ಡ್ಯಾಮೇಜ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ, ನಾಗರಹಾವಿಗೆ ತಲೆ ನೋವು ಬಂದಾಗ ಏನು ಮಾಡುತ್ತೆ, ತಲೆ ಚಚ್ಚಿಕೊಂಡು ಸಾಯುತ್ತೆ.. ಇವಾಗ ಅವರು ತಲೆ  ನೋವು‌ ಬಂದು ತಲೆ ಚಚ್ಚಿಕೊಳ್ತಿದ್ದಾರೆ .. ನಾಗರಹಾವಿಗೆ ಔಷಧಿ ಕೂಡ ಇದೆ,  ಸೂಕ್ತ ಸಂದರ್ಭದಲ್ಲಿ ಔಷಧಿ ಕೊಡುವ  ಕಾಲವು ಬಂದಿದೆ, ಯತ್ನಾಳ್ ವಿರುದ್ಧ ಸೂಕ್ತ ಕ್ರಮದ ಬಗ್ಗೆಯೂ ಚರ್ಚೆ ಆಗಿದೆ ಆದಷ್ಟು ಬೇಗನೇ ಕ್ರಮದ ಬಗ್ಗೆಯೂ ಪಕ್ಷ ತೀರ್ಮಾನ ಮಾಡುತ್ತದೆ ಅಂತ ಯತ್ನಾಳ್ ವಿರುದ್ದ ವಾಗ್ದಾಳಿ ನಡೆಸಿದರು..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News