Rohit Sharma IPL News: ಸದ್ಯ ಇಡೀ ಕ್ರಿಕೆಟ್ ಜಗತ್ತು ಮುಂಬೈ ಇಂಡಿಯನ್ಸ್ ಬಗ್ಗೆ ಮಾತನಾಡುತ್ತಿದೆ. 10 ವರ್ಷಗಳಿಂದ ನಾಯಕನಾಗಿ ಮುಂಬೈ ತಂಡವನ್ನು ಮುನ್ನಡೆಸಿ 5 ಬಾರಿ ಟ್ರೋಫಿಗೆದ್ದ ರೋಹಿತ್ ಶರ್ಮಾ ಒಂದೇ ದಿನದಲ್ಲಿ ಸಾಮಾನ್ಯ ಬ್ಯಾಟ್ಸ್ಮನ್ ಆಗಿದ್ದು, ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುತ್ತಾರೆ. 2015 ರಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಅವಕಾಶ ನೀಡಿದ್ದು ಸಹ ಇದೇ ಮುಂಬೈ ಇಂಡಿಯನ್ಸ್. ಅದರಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡದ ನಾಯಕನಾಗಿ ಬೆಳೆದರು. ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಬಲವರ್ಧಿಸಿಕೊಂಡರು.
ಇದನ್ನೂ ಓದಿ: Bumrah Fitness Secrets: ದೇಹವನ್ನು ಫಿಟ್ ಆಗಿಡಲು ಜಸ್ಪ್ರೀತ್ ಬುಮ್ರಾ ಮಾಡ್ತಾರೆ ಈ ವರ್ಕೌಟ್!
2022 ರಲ್ಲಿ ಮುಂಬೈ ಬಿಟ್ಟು ಗುಜರಾತ್ ತಂಡ ಸೇರಿದರು. ಹಾರ್ದಿಕ್ ಪಾಂಡ್ಯ ಗುಜರಾತ್ ತಂಡದ ನಾಯಕರಾದರು. ಆ ವೇಳೆ ತಂಡ ಟ್ರೋಫಿ ಗೆದ್ದಿತು. ಬಳಿಕ ಐಪಿಎಲ್ 2023 ರಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ಫೈನಲ್ಗೆ ಮುನ್ನಡೆಸಿದರು.
ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಆಟಗಾರ ಮತ್ತು ಅತ್ಯುತ್ತಮ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ತಂಡವನ್ನು ಕಟ್ಟಿ 5 ಬಾರಿ ಚಾಂಪಿಯನ್ ಮಾಡಿದ ರೋಹಿತ್ ಶರ್ಮಾ ಅವರನ್ನು ಏಕಾಏಕಿ ಕೈಬಿಡುವುದು ನಿರಾಸಾದಾಯಕ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
What If 🤔 #MI #CSK #IPL2024 pic.twitter.com/wmrIauLv4U
— S.Badrinath (@s_badrinath) December 16, 2023
ಸಿಎಸ್ಕೆಯಲ್ಲಿ ರೋಹಿತ್ ಶರ್ಮಾ?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಹಾಗೂ ಹಿರಿಯ ಬ್ಯಾಟ್ಸ್ ಮನ್ ಬದರಿನಾಥ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಬಗ್ಗೆ ಸಾಕಷ್ಟು ಮಂದಿ ತಮ್ಮ ಕಾಮೆಂಟ್ ಹಾಕುತ್ತಿದ್ದಾರೆ. ಬದ್ರಿನಾಥ್ ಅವರು ತಮ್ಮ ಎಕ್ಸ್ ಪೇಜ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿಯಲ್ಲಿ ರೋಹಿತ್ ಶರ್ಮಾ ಅವರ ಮಾರ್ಫ್ ಮಾಡಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ 'ವಾಟ್ ಇಫ್' (What If..!) ಎಂದು ಶೀರ್ಷಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಅವರನ್ನು ಮುಂಬೈ ನಾಯಕತ್ವದಿಂದ ಕೆಳಗಿಳಿಸಿರುವ ಸಂದರ್ಭದಲ್ಲಿ, ಅನುಭವಿ ಆಟಗಾರರನ್ನು ಸಿಎಸ್ಕೆ ತಂಡಕ್ಕೆ ಕರೆತಂದೆ ಹೇಗಿರುತ್ತದೆ ಎಂಬುದು ಇದರ ಅರ್ಥ. ರೋಹಿತ್ ಸಿಎಸ್ಕೆಗೆ ಬಂದರೆ ಹೇಗಿರುತ್ತದೆ ಎಂದು ಬದರಿನಾಥ್ ಪೋಸ್ಟ್ ಮಾಡಿದ್ದರು.
ಅಭಿಮಾನಿಗಳ ಅಭಿಪ್ರಾಯವೇನು?
ಅದರಲ್ಲಿ ಹಲವು ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ರೋಹಿತ್ ಶರ್ಮಾ ಸಿಎಸ್ ಕೆಗೆ ಬರುವುದು ಸೂಕ್ತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ 42ರ ಹರೆಯದ ಧೋನಿ ಈ ವರ್ಷ ನಿವೃತ್ತಿಯಾಗುವ ಸಾಧ್ಯತೆ ಹೆಚ್ಚಿದ್ದು, 36ರ ಹರೆಯದ ರೋಹಿತ್ ಶರ್ಮಾ ಈಗ ತಂಡವನ್ನು ಸೇರಿಕೊಂಡರೆ ದೀರ್ಘ ಕಾಲ ನಾಯಕನಾಗಿ ಕಾರ್ಯನಿರ್ವಹಿಸಬಹುದು ಎಂದು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: W,W,0,W,1,W ಜನ್ಮದಿನದಂದೇ ಭರ್ಜರಿ ಬೌಲಿಂಗ್ ಮಾಡಿ ದಾಖಲೆ ಬರೆದ ಭಾರತದ ಆಟಗಾರ !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.