ವೆಸ್ಟ್ ಇಂಡೀಸ್ ಪ್ರವಾಸ :ವಿರಾಟ್ ಕೊಹ್ಲಿ, ಬುಮ್ರಾಗೆ ವಿಶ್ರಾಂತಿ ಸಾಧ್ಯತೆ

ಆಗಸ್ಟ್ 3 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ಸರಣಿಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಭಾರತವು ಕೆರಿಬಿಯನ್ ತಂಡದ ವಿರುದ್ಧ ಮೂರು ಟಿ 20, ಮೂರು ಏಕದಿನ  ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. 

Last Updated : Jul 12, 2019, 04:06 PM IST
ವೆಸ್ಟ್ ಇಂಡೀಸ್ ಪ್ರವಾಸ :ವಿರಾಟ್ ಕೊಹ್ಲಿ, ಬುಮ್ರಾಗೆ ವಿಶ್ರಾಂತಿ ಸಾಧ್ಯತೆ  title=
Photo courtesy: AFP

ನವದೆಹಲಿ: ಆಗಸ್ಟ್ 3 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ಸರಣಿಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಭಾರತವು ಕೆರಿಬಿಯನ್ ತಂಡದ ವಿರುದ್ಧ ಮೂರು ಟಿ 20, ಮೂರು ಏಕದಿನ  ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. 

ಕೊಹ್ಲಿ ಮತ್ತು ಬುಮ್ರಾ ಕಳೆದ ಒಂದು ವರ್ಷದಿಂದ ನಿರಂತರವಾಗಿ ಆಡುತ್ತಿದ್ದಾರೆ ಮತ್ತು ದೀರ್ಘಾವಧಿಯ ಋತುವಿನಲ್ಲಿ ಈ ಇಬ್ಬರು ಅತ್ಯುತ್ತಮ ಆಟಗಾರರನ್ನು ಉಳಿಸುವ ಸಲುವಾಗಿ ಆಯ್ಕೆದಾರರು ಅವರಿಗೆ ವಿರಾಮ ನೀಡಲು ಬಯಸಿದ್ದಾರೆ ಎನ್ನಲಾಗಿದೆ. ಈಗ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದ್ದರೆ, ರೋಹಿತ್ ಶರ್ಮಾ ಟಿ 20 ಮತ್ತು ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಐಸಿಸಿ ವಿಶ್ವಕಪ್ 2019 ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ ನಂತರ ಮೆನ್ ಇನ್ ಬ್ಲೂ ಜುಲೈ 14 ರಂದು ಭಾರತಕ್ಕೆ ಬರಲಿದೆ. 

ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತಂಡವನ್ನು ಆಯ್ಕೆ ಮಾಡಲು ಹಿರಿಯ ರಾಷ್ಟ್ರೀಯ ಸಮಿತಿ ಶೀಘ್ರದಲ್ಲೇ ಸಭೆ ಸೇರುವ ನಿರೀಕ್ಷೆಯಿದೆ ಎನ್ನಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಧೋನಿಯವರನ್ನು ತಂಡದಲ್ಲಿ ಸೇರ್ಪಡೆಯಾಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲವೆನ್ನಲಾಗಿದೆ.

Trending News