ಚಾಮರಾಜನಗರ: ಕಾಡುಗಳ್ಳ, ದಂತಚೋರ, ನರಹಂತಕ ವೀರಪ್ಪನ್ ಕೊರಳಲ್ಲೂ ಕೂಡ ಬರೋಬ್ಬರಿ 25 ವರ್ಷಗಳ ತನಕ ಹುಲಿ ಉಗುರಿನ ಲಾಕೆಟ್ ವೊಂದು ನೇತಾಡುತ್ತಿತ್ತು.
ಹೌದು..., ಕಾಡುಗಳ್ಳನ ಫೋಟೋಗಳನ್ನು ಸೆರೆಹಿಡಿದ ತಮಿಳುನಾಡಿನ ಪತ್ರಕರ್ತ ಶಿವಸುಬ್ರಹ್ಮಣ್ಣ ಈ ಸಂಬಂಧ ಮಾಹಿತಿ ನೀಡಿದ್ದು, ವೀರಪ್ಪನ್ ಕೊರಳಲ್ಲಿ ಯಾವಾಗಲೂ ಹುಲಿ ಉಗುರಿನ ಲಾಕೆಟ್ ಇರುತ್ತಿತ್ತು, ಬಂಡೀಪುರದಲ್ಲೆಲ್ಲೋ ಸತ್ತು ಬಿದ್ದಿದ್ದ ಹುಲಿಯೊಂದರ ಉಗುರುಗಳನ್ನು ಆತ ಕಿತ್ತಕೊಂಡು ಬಂದು ತಾನೆರಡು ಇಟ್ಟುಕೊಂಡು, ಸ್ನೇಹಿತರಿಗೆ ಕೊಟ್ಟಿದ್ದ. ಉಳಿದಿದ್ದ ಎರಡು ಉಗುರುಗಳಲ್ಲಿ ಸಾವಿರ ರೂ.ನಲ್ಲಿ 1 ತೊಲ ಬಂಗಾರದಲ್ಲಿ ಸರ ಮಾಡಿಸಿಕೊಂಡು ಹಾಕಿಕೊಂಡಿದ್ದ ಎಂದು ವೀರಪ್ಪನ್ ಸಂದರ್ಶನ ಸಮಯದಲ್ಲಿ ತಿಳಿಸಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ- ನಟ ದರ್ಶನ್ ಮನೆಯಲ್ಲಿ 8 ಹುಲಿ ಉಗುರಿನ ಪೆಂಡೆಂಟ್ ಪತ್ತೆ..! ಅಸಲಿ ಅಥವಾ ನಕಲಿ..?
ಆನೆಗಳು, ಗಂಧದನ್ನು ಲೂಟಿ ಮಾಡುತ್ತಿದ್ದ ಆತ ಹುಲಿಯನ್ನು ತಾನು ಕೊಂದಿಲ್ಲ ಎಂದು ಹೇಳಿಕೊಂಡಿದ್ದ, ಆತನ ಸಹಚರ ಸೇತುಕುಳಿ ಗೋವಿಂದನ್ ಎದುರಾದ ಹುಲಿಗೆ ಗುಂಡು ಹಾರಿಸಿದ್ದ ಎಂದು ಆತ ತಿಳಿಸಿದ್ದ ಎಂದು ಮಾಹಿತಿ ಕೊಟ್ಟಿದ್ದಾರೆ.
ಸಾಯುವ ತನಕವೂ ಕೂಡ ಹುಲಿ ಉಗುರಿನ ಲಾಕೆಟ್ ಆತನ ಕೊರಳಲ್ಲಿ ನೇತಾಡುತ್ತಿತ್ತು. ವೀರಪ್ಪನ್ ದೇವರು ಹಾಗೇ ಮೌಢ್ಯತೆಯನ್ನು ನಂಬುತ್ತಿದ್ದ ಆತ ಹುಲಿ ಉಗುರಿನ ಧರಿಸಿದ್ದ ಎನ್ನಲಾಗುತ್ತಿದೆ.
ಇದನ್ನೂ ಓದಿ- ಪೆಂಡೆಂಟ್ ಹುಲಿ ಉಗುರಲ್ಲ, ಸಿಂಥೆಟಿಕ್ ಎಂದು ಹೆಚ್ಡಿಕೆ ಸ್ಪಷ್ಟನೆ
ಮೌಢ್ಯಕ್ಕೆ ಹುಲಿ ಜೀವಕ್ಕೆ ಸಂಚಕಾರ:
ಹುಲಿ ಶಕ್ತಿಶಾಲಿ ಜೊತೆಗೆ ಕಾಡಿನ ರಾಜನಾಗಿರುವುದರಿಂದ ಹುಲಿಯ ಶಕ್ತಿ ತಮಗಿರಲೆಂದು ಹಿಂದಿನಿಂದಲೂ ಮೌಢ್ಯಕ್ಕೆ ಹುಲಿಗಳು ಬಲಿಯಾಗುತ್ತಿವೆ. ಹುಲಿ ಚರ್ಮವನ್ನು ಬಳಸಿ ಆಧ್ಯಾತ್ಮಿಕ ಸಾಧನೆ ಮಾಡುವವರು ಬಳಸುವುದು ಒಂದೆಡೆಯಾದರೇ ಮತ್ತೊಂದೆಡೆ ಅಲಂಕಾರಿಕ ವಸ್ತುವಾಗಿಯೂ ಬಳಸುತ್ತಾರೆ. ಚೀನಾದವರು ಹುಲಿ ಮೂಳೆಗಳಿಂದ ವಯಾಗ್ರ ತಯಾರಿಸುತ್ತಾರೆ. ಅದರ ಹಲ್ಲುಗಳು, ಉಗುರುಗಳನ್ನು ಚಿನ್ನಾಭರಣಕ್ಕೆ ಬಳಸಿಕೊಂಡು ಶ್ರೀಮಂತಿಕೆ ತೋರುವ ಶೋಕಿತನ ಬೆಳೆಸಿಕೊಂಡಿದ್ದಾರೆ.
ಈಗ ಅರಣ್ಯ ಕಾಯ್ದೆಗಳು ಬಿಗಿಯಾಗಿರುವುದರಿಂದ ಜೊತೆಗೆ ಅರಣ್ಯ ಇಲಾಖೆ ಕಾರ್ಯ ಕ್ಷಮತೆಯಿಂದ ಇರುವುದರಿಂದ ಈ ಎಲ್ಲಾ ಮೌಢ್ಯಕ್ಕೆ ಬಹುಪಾಲು ಕಡಿವಾಣ ಬಿದ್ದಿದೆ ಎನ್ನಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.