NTR Devara AI Photo : ‘ಆರ್ಆರ್ಆರ್’ ಸಿನಿಮಾದ ಮೂಲಕ ಗ್ಲೋಬಲ್ ಸ್ಟಾರ್ ಎನಿಸಿಕೊಂಡಿರುವ ಯಂಗ್ ಟೈಗರ್ ಜೂ. ಎನ್ಟಿಆರ್ ಸದ್ಯ ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಆರ್ಆರ್ಆರ್’ ನಂತರ ಎನ್ಟಿಆರ್ ಅಭಿನಯದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಚಿತ್ರದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದ್ದು, ಅರ್ಧಕ್ಕೂ ಹೆಚ್ಚು ಚಿತ್ರೀಕರಣ ಮುಗಿದಿದೆಯಂತೆ. ಮತ್ತೊಂದೆಡೆ ಚಿತ್ರಕ್ಕೆ ಸಂಬಂಧಿಸಿದ ವಿಎಫ್ಎಕ್ಸ್ ಕೆಲಸ ಪ್ರಾರಂಭವಾಗಿದೆ.
ಈಗಾಗಲೇ ‘ದೇವರ’ ಸಿನಿಮಾದಿಂದ ಬಿಡುಗಡೆಯಾಗಿರುವ ಪೋಸ್ಟರ್ಗಳು ಸಿನಿ ಪ್ರೇಕ್ಷಕರ ಮನಸೂರೆಗೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಎನ್ಟಿಆರ್ ಅಭಿಮಾನಿಗಳ ಜೊತೆಗೆ ಸಿನಿಪ್ರೇಮಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಅಪ್ಡೇಟ್ ಬಂದ್ರೂ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಸಂಬಂಧಿಸಿದಂತೆ ಎರಡು ಫೋಟೋಗಳು ಬಿಡುಗಡೆಯಾಗಿದ್ದು, ಎಲ್ಲರನ್ನೂ ಆಕರ್ಷಿಸುತ್ತಿವೆ.
ಇದನ್ನೂ ಓದಿ: ಬ್ಲೂ ಡ್ರೇಸ್ನಲ್ಲಿ ಬಿಟೌನ್ ಬೆಡಗಿ ಜಾನ್ವಿ ಶೈನ್..! ಗ್ಲಾಮರ್ ಕ್ವೀನ್ ಎಂದ ಫ್ಯಾನ್ಸ್
'ದೇವರ' ಚಿತ್ರಕ್ಕೆ ವಿಎಫ್ಎಕ್ಸ್ ಸೂಪರ್ವೈಸರ್ ಆಗಿರುವ ಶ್ರೀನಿವಾಸ್ ಮೋಹನ್ ತಮ್ಮ ಟ್ವಿಟರ್ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಎನ್ಟಿಆರ್ ಮುಖವನ್ನು ಎಐ ಇಲ್ಯೂಷನ್ ಟೂಲ್ ಮೂಲಕ ರಚಿಸಲಾಗಿದೆ. ಎನ್ಟಿಆರ್ ಅವರ ಮುಖವನ್ನು ಸಮುದ್ರದ ತೀರದಲ್ಲಿ ದೋಣಿಗಳಿಂದ ವಿನ್ಯಾಸಗೊಳಿಸಲಾಗಿದೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
Playing with Ai illusion tool. @tarak9999 pic.twitter.com/sOLl05lcqE
— Srinivas Mohan (@srinivas_mohan) September 21, 2023
ದಲಿತರ ಅಮಾನುಷ ಕಗ್ಗೊಲೆಯನ್ನು ಆಧರಿಸಿ ‘ದೇವರ’ ಚಿತ್ರ ತಯಾರಾಗುತ್ತಿದೆಯಂತೆ. ಈ ಚಿತ್ರದಲ್ಲಿ ಕಾರಂಚೇಡು ದುರಂತ ಘಟನೆಯನ್ನು ನಿರ್ದೇಶಕರು ತೋರಿಸಲಿದ್ದಾರೆ ಎಂದು ವರದಿಯಾಗಿದೆ. 1985ರಲ್ಲಿ ಆಂಧ್ರಪ್ರದೇಶದ ಕರಚೇಡು ಗ್ರಾಮದಲ್ಲಿ ಹಲವು ದಲಿತರನ್ನು ಮೇಲ್ಜಾತಿಯವರು ಕೊಂದಿದ್ದರು. ಆಗ ಈ ಘಟನೆ ರಾಜ್ಯಾದ್ಯಂತ ರಾಜಕೀಯ ಸಂಚಲನ ಮೂಡಿಸಿತ್ತು.
ಇದನ್ನೂ ಓದಿ: 'ಅವಳೊಂದಿಗೆ ನಾನೂ ಸತ್ತಿದ್ದೇನೆ'..! ಮಗಳ ಅಗಲಿಕೆಗೆ ವಿಜಯ್ ಆಂಟನಿ ಸಂತಾಪ ಸಂದೇಶ
ದೇವರ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಜೊತೆ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎನ್ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಹರಿಕೃಷ್ಣ ಮತ್ತು ಮಿಕ್ಕಿಲಿನೇನಿ ಸುಧಾಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 'ದೇವರ' ಮುಂದಿನ ವರ್ಷ (2024) ಏಪ್ರಿಲ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.