ನವದೆಹಲಿ: ಪೂರ್ವ ಲಿಬಿಯಾದಲ್ಲಿ ಡೇನಿಯಲ್ ಚಂಡಮಾರುತ ವಿನಾಶ ಸೃಷ್ಟಿಸಿದ್ದು, ಪ್ರವಾಹಕ್ಕೆ 5,300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಮಳೆ ಮತ್ತು ಚಂಡಮಾರುತದ ಅಬ್ಬರಕ್ಕೆ ಡರ್ನಾ ನಗರ ಮುಳುಗಿ ಹೋಗಿದೆ. ಪ್ರವಾಹದಿಂದ ಅಪಾರ ಪ್ರಮಾಣದ ಜೀವ ಹಾನಿಯ ಜೊತೆಗೆ ಆಸ್ತಿ-ಪಾಸ್ತಿಗೆ ನಷ್ಟವುಂಟಾಗಿದೆ. ಪೂರ್ವ ಲಿಬಿಯಾದ ರಕ್ಷಣಾ ಪಡೆಗಳು ಕರಾವಳಿ ನಗರದಲ್ಲಿ ಅವಶೇಷಗಳಡಿ ಸಿಲುಕಿದ್ದ 1,000ಕ್ಕೂ ಹೆಚ್ಚು ಶವಗಳನ್ನು ಹೊರಗೆ ತೆಗೆದಿದ್ದಾರೆ ಎಂದು ಪೂರ್ವ ಲಿಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಿಷಿ ಸುನಕ್ - ಅಕ್ಷತಾ ಮೂರ್ತಿ ಲವ್ ಸ್ಟೋರಿ ಎಲ್ಲಿ, ಹೇಗೆ ಶುರುವಾಯ್ತು ಗೊತ್ತಾ?
ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಲಿಬಿಯಾದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಿಸುವ ವೇಳೆ ಮೂವರು ಐಎಫ್ಆರ್ಸಿ ಸ್ವಯಂಸೇವಕರು ಸಹ ಸಾವನ್ನಪ್ಪಿದ್ದಾರೆ.
Thousands of people were killed and at least 10,000 were missing in Libya in floods caused by a huge Mediterranean storm that burst dams, swept away buildings and wiped out as much as a quarter of the eastern coastal city of Derna https://t.co/PYjDW2gCQn
— Reuters (@Reuters) September 13, 2023
ಅಣೆಕಟ್ಟು ಒಡೆದ ಪರಿಣಾಮ ಸುಮಾರು 1,25,000 ಜನಸಂಖ್ಯೆ ಹೊಂದಿರುವ ಡರ್ನಾ ನಗರವು ಅಕ್ಷರಶಃ ಕೊಚ್ಚಿಕೊಂಡು ಹೋಗಿದೆ. ನೂರಾರು ಕಟ್ಟಡಗಳು ನೆಲಕ್ಕುರುಳಿದ್ದು, ವಾಹನಗಳು ಜಖಂಗೊಂಡಿವೆ. ಅವಶೇಷಗಳಡಿ ದೇಹಗಳು ಹೂದುಗಿಹೋಗಿವೆ. ಪ್ರವಾಹದ ನಡುವೆಯೇ ರಕ್ಷಣಾ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ಪಾಶ್ಚಿಮಾತ್ಯ ದೇಶಗಳು ಅಂತರಾಷ್ಟ್ರೀಯ ಹಣಕಾಸು ಸಂಬಂಧಗಳ ವ್ಯವಸ್ಥೆಯನ್ನು ನಾಶಪಡಿಸುತ್ತಿವೆ: ಪುಟಿನ್
ಜನರ ರಕ್ಷಣೆಗಾಗಿ ರಕ್ಷಣಾ ಪಡೆಗಳು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಲವಾರು ದೇಶಗಳು ಲಿಬಿಯಾಗೆ ಸಹಾಯಹಸ್ತ ಚಾಚಿವೆ. ಲಿಬಿಯಾದಲ್ಲಿ ಬಂಧು-ಬಾಂಧವರನ್ನು, ಮನೆ-ಮಠ ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.