Side Effects of Tempered Glass : ಹೊಸ ಫೋನ್ ಖರೀದಿಸಿದ ಕೂಡಲೇ ನಾವು ಮಾಡುವ ಮೊದಲ ಕೆಲಸ ಹೊಸ ಫೋನ್ ಗೆ ಟೆಂಪರ್ಡ್ ಗ್ಲಾಸ್ ಹಾಕಿಸುವುದು. ಫೋನ್ಗೆ ಯಾವುದೇ ಹಾನಿಯಾಗಬಾರದು ಎನ್ನುವ ಉದ್ದೇಶದಿಂದ ಈ ಕೆಲಸ ಮಾಡಲಾಗುತ್ತದೆ. ಆದರೆ, ಯಾವ ಫೋನ್ ಸೇಫ್ಟಿಗಾಗಿ ಸ್ಕ್ರೀನ್ ಗಾರ್ಡ್ ಅಳವಡಿಸುತ್ತೆವೆಯೋ ಅದೇ ನಮ್ಮ ಫೋನ್ ಅನ್ನು ಹಾನಿಗೊಳಿಸುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.
ಕೆಲವೊಮ್ಮೆ ಕರೆ ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತೇವೆ. ಅಂದರೆ ಕರೆ ಮಾಡಲು ಸಾಧ್ಯವಾಗುವುದಿಲ್ಲ. ಆಗ ಸಾಮಾನ್ಯವಾಗಿ ಬಳಕೆದಾರರು ಫೋನ್ ನಲ್ಲಿ ಏನೋ ಸಮಸ್ಯೆಯಿದೆ ಎಂದೇ ಭಾವಿಸುತ್ತಾರೆ. ಇದರ ಹಿಂದಿನ ಕಾರಣ ಏನು ಮತ್ತು ಈ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವ ಮಾಹತಿ ಇಲ್ಲಿದೆ.
ಇದನ್ನೂ ಓದಿ : 99 ರೂ. ರಿಚಾರ್ಜ್ ಮಾಡಿ 5G ಡೇಟಾ ಪಡೆಯಿರಿ
ಸೆನ್ಸಾರ್ಗಳು ಬ್ಲಾಕ್ ಆಗುತ್ತವೆ :
ಸ್ಮಾರ್ಟ್ಫೋನ್ಗಳು ಟಚ್ ಡಿಸ್ಪ್ಲೇಯೊಂದಿಗೆ ಬರುತ್ತವೆ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಫೋನ್ನ ಕೆಳಭಾಗದಲ್ಲಿ ಇರುತ್ತವೆ. ಸ್ಕ್ರೀನ್ ಗಾರ್ಡ್ ಅನ್ನು ಅನ್ವಯಿಸುವ ಮೂಲಕ, ಈ ಸೆನ್ಸಾರ್ ಅನ್ನು ಬ್ಲಾಕ್ ಮಾಡಿದ ಹಾಗೆ ಆಗುತ್ತದೆ. ಆಗ ಅದು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿ ಬಿಡಬಹುದು. ಹೀಗಾದಾಗ ಕರೆ ಸಮಯದಲ್ಲಿ ಫೋನ್ನ ಲೈಟ್ ಇದ್ದಕ್ಕಿದ್ದಂತೆ ಆನ್ ಆಗುತ್ತದೆ. ಫೋನ್ ನಲ್ಲಿ ಮಾತನಾಡುತ್ತಾ ಇರುವಾಗ ಬೇರೆ ಆಪ್ ಗಳು ತೆರೆದುಕೊಳ್ಳುತ್ತವೆ. ಇದಲ್ಲದೆ, ಆನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಇದ್ದಾಗ ಸ್ಮಾರ್ಟ್ಫೋನ್ ಅನ್ಲಾಕ್ ಮಾಡುವಲ್ಲಿ ಸಮಸ್ಯೆ ಎದುರಾಗುತ್ತದೆ. ಅಂದರೆ, ಫೋನ್ ಅನ್ನು ಅನ್ಲಾಕ್ ಮಾಡಲು ಬಹಳ ಹೊತ್ತು ತೆಗೆದುಕೊಳ್ಳುತ್ತದೆ.
ಈ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ ? :
ಈಗ, ಮನಸ್ಸಿನಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ. ಅದೇನೆಂದರೆ ಈ ರೀತಿಯ ಪರಿಸ್ಥಿತಿಯಲ್ಲಿ ತಮ್ಮ ಫೋನ್ನ ಸೆನ್ಸರ್ಗಳು ಬ್ಲಾಕ್ ಆಗದಂತೆ ಏನು ಮಾಡಬೇಕು? ಕಡಿಮೆ ಗುಣಮಟ್ಟದ ಸ್ಕ್ರೀನ್ ಗಾರ್ಡ್ಗಳನ್ನು ಹಾಕಿರುವ ಫೋನ್ಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಬರುತ್ತದೆ. ಹಾಗಾಗಿ ಕಂಪನಿಯ ಸ್ಕ್ರೀನ್ ಗಾರ್ಡ್ ಹಾಕಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ಯಾಕೆಂದರೆ ಕಂಪನಿಯವರಿಗೆ ಫೋನ್ ನಲ್ಲಿ ಸೆನ್ಸಾರ್ ಗಳನ್ನು ಎಲ್ಲಿ ಅಳವಡಿಸಲಾಗಿದೆ ಎನ್ನುವ ಸ್ಪಷ್ಟ ಮಾಹಿತಿ ಇರುವ ಕಾರಣ ಅದಕ್ಕೆ ಅನುಗುಣವಾಗಿಯೇ ಸ್ಕ್ರೀನ್ ಗಾರ್ಡ್ ತಯಾರಿಸಿರುತ್ತಾರೆ. ಇದರ ಹೊರತಾಗಿ, ಹಲವಾರು ಅಧಿಕೃತ ಕಂಪನಿಗಳಿವೆ. ಅವುಗಳು ಕೇವಲ ಸ್ಕ್ರೀನ್ ಗಾರ್ಡ್ ಗಳನ್ನೇ ತಯಾರಿಸುತ್ತವೆ. ಅವುಗಳನ್ನು ಆಯ್ಕೆ ಮಾಡಬಹುದು.
ಇದನ್ನೂ ಓದಿ : EMI ಮೂಲಕ ಈ ರೀತಿ ಖರೀದಿಸಿದರೆ ದುಬಾರಿ ಫೋನ್ ಅನ್ನು ಕೂಡಾ ಅಗ್ಗದ ಬೆಲೆಗೆ ಖರೀದಿಸಬಹುದು
ಈ ಸೆನ್ಸಾರ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ? :
ನೀವು ಬಿಸಿಲಿನಲ್ಲಿ ಹೋದಾಗ, ನಿಮ್ಮ ಫೋನ್ನ ಪರದೆಯ ಬೆಳಕು ಸ್ವಯಂಚಾಲಿತವಾಗಿ ಬೆಳಕಿಗೆ ಅನುಗುಣವಾಗಿ ಸರಿಹೊಂದುತ್ತದೆ. ಆಂಬಿಯೆಂಟ್ ಲೈಟ್ ಸೆನ್ಸರ್ನಿಂದ ಮಾತ್ರ ಹೀಗಾಗುತ್ತದೆ. ಮತ್ತೊಂದೆಡೆ, ನೀವು ಫೋನ್ ಅನ್ನು ನಿಮ್ಮ ಕಿವಿಯ ಬಳಿ ತೆಗೆದುಕೊಂಡಾಗ, ಲೈಟ್ ತನ್ನಷ್ಟಕ್ಕೆ ಆಫ್ ಆಗುತ್ತದೆ. ಪ್ರಾಕ್ಸಿಮಿಟಿ ಮೊಬೈಲ್ ಸೆನ್ಸಾರ್ ನಿಂದಾಗಿ ಹೀಗಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ