ಹಾಂಗ್ಕಾಂಗ್: ವಿಡಿಯೋ ರೀಲ್ಸ್ ಮಾಡಲು ಹೋಗಿ ರೆಮಿ ಲುಸಿಡಿ(30) 68ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಸಾಹಸ ಕ್ರೀಡೆಗಳಿಗೆ ಹೆಸರಾದ ರೆಮಿ ಲುಸಿಡಿ ಫ್ರೆಂಚ್ ‘ಡೇರ್ ಡೆವಿಲ್’ ಎಂದೇ ಖ್ಯಾತಿಯಾಗಿದ್ದರು.
ಗಗನಚುಂಬಿ ಕಟ್ಟಡಗಳನ್ನು ಏರಿ ತುತ್ತತುದಿಗೆ ತಲುಪಿ ನೋಡುಗರ ಮೈ ಜುಮ್ಮೆನಿಸುವಂತಹ ಸ್ಟಂಟ್ ಮಾಡುತ್ತಿದ್ದ ರೆಮಿ ಲುಸಿಡಿ ಹಾಂಗ್‍ಕಾಂಗ್‍ನ ವಸತಿ ಕಟ್ಟವೊಂದರ 68ನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ರೆಮಿ ಲುಸಿಡಿ ಟ್ರೆಗುಂಟರ್ ಟವರ್ ಸಂಕೀರ್ಣ ಹತ್ತಿ ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಆಯತಪ್ಪಿ 68ನೇ ಮಹಡಿಯಿಂದ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: Viral News: 16 ಲಕ್ಷ ಖರ್ಚು ಮಾಡಿ ಶ್ವಾನವಾಗಿ ಬದಲಾದ ವ್ಯಕ್ತಿ!
ಹಾಂಗ್‍ಕಾಂಗ್ ಅಧಿಕಾರಿಗಳ ಪ್ರಕಾರ, ಸಂಜೆ 6 ಗಂಟೆ ವೇಳೆಗೆ ಲುಸಿಡಿ 40ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿರುವುದಾಗಿ ಸೆಕ್ಯೂರಿಟಿ ಗಾರ್ಡ್ ಬಳಿ ಹೇಳಿದ್ದರು. ಈ ವೇಳೆ ಸೆಕ್ಯೂರಿಟಿ ತಡೆಯಲು ಯತ್ನಿಸಿದರೂ ಆತ ಕಟ್ಟಡದ ಒಳಗೆ ಪ್ರವೇಶಿಸಿದ್ದ. 49ನೇ ಮಹಡಿಗೆ ಲುಸಿಡಿ ಬಂದು ನಂತರ ಮೆಟ್ಟಿಲುಗಳ ಮೂಲಕ ಕೊನೆಯ ಮಹಡಿಗೆ ಹೋಗುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊನೆಯದಾಗಿ ರಾತ್ರಿ 7.38ಕ್ಕೆ ಲುಸಿಡಿ ಕಾಣಿಸಿಕೊಂಡಿದ್ದರು.ಕಾಂಪ್ಲೆಕ್ಸ್‌ನ ಪೆಂಟ್‌ಹೌಸ್‌ನ ಕಿಟಕಿಯ ಮೇಲೆ ನಡೆದಾಡುತ್ತಿದ್ದ ವೇಳೆ ಅಪಾರ್ಟ್‌ಮೆಂಟ್‌ನಲ್ಲಿದ್ದ ಸೇವಕಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲುಸಿಡಿಯವರ ಕ್ಯಾಮೆರಾ ದೊರಕಿದ್ದು, ಅದರಲ್ಲಿ ಎತ್ತರಕ್ಕೆ ಏರಿ ಸಾಹಸ ಮಾಡಿರುವ ವಿಡಿಯೋ ದೊರೆತಿದೆ.
ಇದನ್ನೂ ಓದಿ: ಪಾಕ್ ನಲ್ಲಿ ಬಾಂಬ್ ಸ್ಪೋಟಕ್ಕೆ ಕನಿಷ್ಠ 42 ಸಾವು, 111 ಜನರಿಗೆ ಗಾಯ
ಲುಸಿಡಿಯವರು ಸಾಹಸ ಮಾಡಲು ಹೋಗಿ ತಮ್ಮ ಸಮತೋಲನವನ್ನು ಕಳೆದುಕೊಳ್ಳುವ ಮೊದಲು ಸಹಾಯಕ್ಕಾಗಿ ಕಿಟಕಿಯ ಮೇಲೆ ಬಡಿಯುತ್ತಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಲುಸಿಡಿ ಸಾವಿನ ಬಗ್ಗೆ ಪೊಲೀಸರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.