ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗಾಗಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕೆ ಆರು ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷ ತನ್ನ ಅಭ್ಯರ್ಥಿಗಳ ಹೆಸರನ್ನು ಶನಿವಾರ ಬಿಡುಗಡೆ ಮಾಡಿದೆ.
ಪೂರ್ವ ದೆಹಲಿಯಿಂದ ಅತೀಶಿ, ನೈಋತ್ಯ ದೆಹಲಿಯಿಂದ ಗುಗ್ಗಾನ್ ಸಿಂಗ್ ರಂಗ, ದಕ್ಷಿಣ ದೆಹಲಿಯ ರಾಘವ್ ಚಾಧ, ಈಶಾನ್ಯ ದೆಹಲಿಯಿಂದ ದಿಲೀಪ್ ಪಾಂಡೆ, ಚಾಂದನಿ ಚೌಕದಿಂದ ಪಂಕಜ್ ಗುಪ್ತಾ ಮತ್ತು ನವ ದೆಹಲಿ ಕ್ಷೇತ್ರದಿಂದ ಬ್ರಿಜೆಶ್ ಗೋಯಲ್ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
Announcement : Declaration of candidates for the upcoming Loksabha Polls
1. New Delhi - @brijeshgoyalaap
2. East Delhi - @AtishiAAP
3. North East Delhi - @dilipkpandey
4. South Delhi - @raghav_chadha
5. Chandani Chowk - @pankajgupta
6. North West Delhi - @AAPGuganSingh pic.twitter.com/EuNyseK1Fi
— AAP (@AamAadmiParty) March 2, 2019
ದೆಹಲಿಯ ಎಎಪಿ ಸಂಚಾಲಕ ಗೋಪಾಲ್ ರೈ ಅಭ್ಯರ್ಥಿಯ ಹೆಸರುಗಳನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ವೆಸ್ಟ್ ದೆಹಲಿಯಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.