ಲಕ್ನೋ: ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಸಹರನಪುರ ಜಿಲ್ಲೆಯ ದೇವಬಂದ್ನಲ್ಲಿ ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಫೆಬ್ರವರಿ 22 ರಂದು ಬಂಧಿಸಿದ್ದರು.
ಉತ್ತರ ಪ್ರದೇಶದ ಡೈರೆಕ್ಟರ್ ಜನರಲ್ ಆಫ್ ಪೋಲಿಸ್ (ಡಿಜಿಪಿ) ಓಂ ಪ್ರಕಾಶ್ ಸಿಂಗ್ ಭಾನುವಾರ ಸುಮಾರು ನಾಲ್ಕು ಗಂಟೆಗಳ ಕಾಲ ಬಂಧಿತ ಇಬ್ಬರು ಕಾಶ್ಮೀರಿ ಯುವಕರ ಸಂಪೂರ್ಣ ತನಿಖೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಸ್ಪೋಟಕ ಹೇಳಿಕೆ ನೀಡಿದ್ದಾರೆ. ನಿಷೇಧಿತ ಜೈಷ್ ಎ ಮೊಹ್ಮದ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಈ ಉಗ್ರರು, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ರಶೀದ್ ಘಾಜಿ ಜೊತೆ ಸಂಪರ್ಕ ಹೊಂದಿದ್ದರು ಎಂದು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಡಿಜಿಪಿ ಓ.ಪಿ.ಸಿಂಗ್ 4 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಇಬ್ಬರು ಯುವಕರು ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳು ಈ ಇಬ್ಬರು ಯುವಕರು ಉಗ್ರ ಸಂಘಟನೆಯವರೊಂದಿಗೆ ಸಂಭಾಷಣೆ ನಡೆಸಿರುವ ಆಡಿಯೋ ಕ್ಲಿಪ್ ಕೂಡ ತನಿಖಾ ತಂಡಕ್ಕೆ ದೊರೆಕಿದೆ ಎನ್ನಲಾಗಿದೆ.
ತನಿಖೆ ವೇಳೆ ಬಂಧಿತ ಉಗ್ರರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಇವರು ಜೈಶ್ ಎ ಮೊಹ್ಮದ್ ಉಗ್ರ ಸಂಘಟನೆ ಜೊತೆ ಸೇರಿದ ಕಥೆ ಇದರಲ್ಲಿ ಬಹಿರಂಗವಾಗಿದೆ...
ಯುಪಿ ಎಟಿಎಸ್ ಮತ್ತು ಶಹನಾವಾಜ್ ನಡುವಿನ ಸಂಭಾಷಣೆ:
ಪ್ರಶ್ನೆ ಸಂಖ್ಯೆ 1: ಉಗ್ರನನ್ನು ಶಹನಾವಾಜ್ ಎಂದು ಕರೆದಾಗ...
ಉತ್ತರ: ಶಹನಾವಾಜ್ ಯಾರು? ನನ್ನ ಹೆಸರು ನವಾಜ್ ಅಹ್ಮದ್ ತೆಲಿ.
ಪ್ರಶ್ನೆ ಸಂಖ್ಯೆ 2: ನಿನ್ನ ತಂದೆ ಏನು ಕೆಲಸ ಮಾಡುತ್ತಾರೆ?
ಉತ್ತರ: ನನ್ನ ತಂದೆ ಕುಲ್ಗಮ್ನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಾರೆ.
ಪ್ರಶ್ನೆ ಸಂಖ್ಯೆ 3: ನೀನು ಎಷ್ಟು ಓದುತ್ತಿದ್ದೀರಿ ಎಂದು ಕೇಳಿದಾಗ?
ಉತ್ತರ: ನಾನು ಬಿಎ ಮೊದಲ ವರ್ಷ ತನಕ ಅಧ್ಯಯನ ಮಾಡಿದ್ದೇನೆ ಮತ್ತು ನಂತರ ಅಧ್ಯಯನಗಳನ್ನು ಬಿಟ್ಟೆ. ನಂತರ ಕಂಪ್ಯೂಟರ್ ಕೋರ್ಸ್ ಸೇರಿದೆ, ಬಳಿಕ ಅದನ್ನು ಬಿಟ್ಟೆ.
ಪ್ರಶ್ನೆ ಸಂಖ್ಯೆ 4: ನೀನು ಅರೇಬಿಕ್ ಅನ್ನು ಎಲ್ಲಿ ಕಲಿತಿದ್ದೀರಿ?
ಉತ್ತರ: ನಾನು ಕಾಶ್ಮೀರದಲ್ಲೇ ಅರೇಬಿಕ್ ಭಾಷೆಯನ್ನು ಕಲಿತಿದ್ದೇನೆ.
ಪ್ರಶ್ನೆ ಸಂಖ್ಯೆ 5: ನಿನ್ನ ಮನೆಯಲ್ಲಿ ಯಾರ್ಯಾರಿದ್ದಾರೆ?
ಉತ್ತರ: ನನ್ನ ಸಹೋದರ, ಇಬ್ಬರು ತಂಗಿಯರು ಇದ್ದಾರೆ. ನನ್ನ ಸಹೋದರ ಕಾಶ್ಮೀರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
ಪ್ರಶ್ನೆ ಸಂಖ್ಯೆ 6: ನೀನು ಭಯೋತ್ಪಾದಕರ ಸಂಪರ್ಕಕ್ಕೆ ಹೇಗೆ ಬಂದೆ?
ಉತ್ತರ: ಸುಮಾರು ಎರಡು ವರ್ಷಗಳ ಹಿಂದೆ ಕಾಶ್ಮೀರ ಸೇಬು ಉದ್ಯಾನದಲ್ಲಿ, ಭಯೋತ್ಪಾದಕರು ನನ್ನನ್ನು ಸಂಪರ್ಕಿಸಿದರು. ಅಲ್ಲಿಂದೀಚೆಗೆ, ಅವರೊಂದಿಗೆ ಕೆಲಸ ಮಾಡುವ ಒತ್ತಡ ಭಯೋತ್ಪಾದಕರೊಂದಿಗೆ ಸಂಪರ್ಕ ಬೆಸೆಯಿತು.
ಪ್ರಶ್ನೆ ಸಂಖ್ಯೆ 7: ಕಾಶ್ಮೀರ ಸೇನೆಯು ನಿಮ್ಮನ್ನು ಪ್ರಶ್ನಿಸಿದೆಯಾ?
ಉತ್ತರ: ಹೌದು, ಭಯೋತ್ಪಾದಕರೊಂದಿಗಿನ ಸಂಪರ್ಕದ ಕಾರಣದಿಂದಾಗಿ, ಸೈನ್ಯದ ಕಣ್ಣು ನನ್ನ ಮೇಲೆ ಬಿದ್ದಿತ್ತು. ಸೈನ್ಯ ಹಲವು ಬಾರಿ ನನ್ನನ್ನು ಪ್ರಶ್ನಿಸಿದೆ.
ಪ್ರಶ್ನೆ ಸಂಖ್ಯೆ 8: ನೀನು ಕಾಶ್ಮೀರದಿಂದ ಓಡಿ ಹೋಗಲು ಕಾರಣವೇನು?
ಉತ್ತರ: ಪದೇ ಪದೇ ವಿಚಾರಣೆಯಿಂದ ಬೇಸತ್ತು ಕಳೆದ ವರ್ಷ ಈದ್ನ ನಂತರ ಜೂನ್ ನಲ್ಲಿ ನಾನು ಕಾಶ್ಮೀರದಿಂದ ತಪ್ಪಿಸಿಕೊಂಡೆ.
ಭಯೋತ್ಪಾದಕ ಅಕಿಬ್ ಸಹ ವಿಚಾರಣೆ ವೇಳೆ ಭಯೋತ್ಪಾದಕನಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಪ್ರಶ್ನೆ ಸಂಖ್ಯೆ 1: ನೀನು ಎಲ್ಲಿಯವರೆಗೆ ಓದಿದ್ದೀಯ?
ಉತ್ತರ: ನಾನು 12ನೇ ತರಗತಿವರೆಗೆ ಓದಿದ್ದು, ಬಳಿಕ ವಿದ್ಯಾಭ್ಯಾಸ ಬಿಟ್ಟೆ.
ಪ್ರಶ್ನೆ ಸಂಖ್ಯೆ 2: ನಿನ್ನ ತಂದೆ ಏನು ಮಾಡುತ್ತಾರೆ?
ಉತ್ತರ: ನನ್ನ ತಂದೆ ಕಾಶ್ಮೀರದಲ್ಲಿ ಸೇಬಿನ ರೈತರಾಗಿದ್ದಾರೆ.
ಪ್ರಶ್ನೆ ಸಂಖ್ಯೆ 3: ನೀನು ಭಯೋತ್ಪಾದಕರೊಂದಿಗೆ ಹೇಗೆ, ಯಾವಾಗ ಸಂಪರ್ಕ ಹೊಂದಿದೆ?
ಉತ್ತರ: ಈ ಪ್ರಶ್ನೆಗೆ ಮೊದಲಿಗೆ ಮೌನವಾಗಿದ್ದ ಅಕಿಬ್ ಸ್ವಲ್ಪ ಸಮಯದ ಬಳಿಕ 6 ತಿಂಗಳ ಹಿಂದೆ ಎಂದು ಉತ್ತರಿಸಿದ್ದಾರೆ.
ಪ್ರಶ್ನೆ ಸಂಖ್ಯೆ 4: ನೀನು ಕಾಶ್ಮೀರದಿಂದ ಓಡಿ ಹೋಗಲು ಕಾರಣವೇನು?
ಉತ್ತರ: ಹಲವಾರು ಬಾರಿ ಸೈನ್ಯವು ವಿಚಾರಣೆಗೆ ನನ್ನನ್ನು ಕರೆದಿದೆ. ಹಾಗಾಗಿ ನಾನು ದಿಯೋಬಂದ್ಗೆ ಬಂದಿದ್ದೇನೆ.
ಪ್ರಶ್ನೆ ಸಂಖ್ಯೆ 5: ನೀವು ಪರಸ್ಪರ ಹೇಗೆ ಸಂಪರ್ಕಿಸಿದ್ದೀರಿ?
ಉತ್ತರ: ಕರೆ ಮಾಡಲು ನಾವು ವರ್ಚುವಲ್ ಸಂಖ್ಯೆಯನ್ನು ಬಳಸುತ್ತಿದ್ದೆವು. ಅವರು ನಮಗೆ ಕೆಲವು ವೇಳೆ ಸಂದೇಶ, ಇಲ್ಲವೇ ಧ್ವನಿ ಸಂದೇಶ ರವಾನಿಸುವ ಮೂಲಕ ಸೂಚನೆ ನೀಡುತ್ತಿದ್ದರು.
ಪ್ರಶ್ನೆ ಸಂಖ್ಯೆ 6: ಯಾರಾದರೂ ದೊಡ್ಡ ಕಾರ್ಯಾಚರಣೆಯನ್ನು ಕೈಗೊಳ್ಳಲು ಯೋಜಿಸಿದ್ದರೇ?
ಉತ್ತರ: ಇದಕ್ಕೆ ಉಗ್ರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ವಾಸ್ತವವಾಗಿ, ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಸಹರನಪುರ ಜಿಲ್ಲೆಯ ದೇವಬಂದ್ನಲ್ಲಿ ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಬಂಧಿಸಿರುವುದಾಗಿ ಡಿಜಿಪಿ ಒ.ಪಿ.ಸಿಂಗ್ ಶುಕ್ರವಾರ ತಿಳಿಸಿದರು. ಬಂಧಿತ ಶಹನವಾಜ್ ಕುಲಗಾಮ್ ಪ್ರದೇಶದವನು ಹಾಗೂ ಅಕಿಬ್ ಪುಲ್ವಾಮಾದವನಾಗಿದ್ದು ಅವರಿಂದ ಶಸ್ತ್ರಾಸ್ತ್ರಗಳು, ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದರು.
ಈ ಇಬ್ಬರೂ ಉಗ್ರರು ಜೈಶ್-ಎ-ಮೊಹಮ್ಮದ್ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಸಂಘಟನೆಯಲ್ಲಿ ಗ್ರೆನೇಡ್ ಎಕ್ಸ್ ಪರ್ಟ್ ಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರೂ ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಹೊಸ ಯುವಕರನ್ನು ನೇಮಕ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದರು ಎನ್ನಲಾಗಿತ್ತು.