Infertility Causes : ನಮ್ಮ ಸುತ್ತಲಿನ ವಾತಾವರಣ ನಿರಂತರವಾಗಿ ಬದಲಾಗುತ್ತಿರುತ್ತಿದೆ. ಜನರ ಜೀವನಶೈಲಿ ಆಧುನಿಕವಾಗುತ್ತಿದೆ. ಮಾರ್ಡ್ರನ್ ಯುಗ ಜನರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತಿದ್ದರೂ ಸಹ, ಕೆಲವು ಕೆಟ್ಟ ಅಭ್ಯಾಸಗಳು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತಿದೆ. ಈ ಪೈಕಿ ಇಂದಿನ ಹೆಚ್ಚಿನ ದಂಪತಿಗಳು ವಿಶೇಷವಾಗಿ ಮಗುವನ್ನು ಹೆರುವ ಬಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಮಹಿಳೆಯರು ಮತ್ತು ಪುರುಷರಲ್ಲಿ ಬಂಜೆತನ ಹೆಚ್ಚಾಗುತ್ತಿರುವುದು.
ಹೌದು.. ಬಂಜೆತನ ಬರೀ ಹೆಣ್ಣಿಗಷ್ಟೇ ಅಲ್ಲ ಪುರುಷರಲ್ಲಿಯೂ ಇರುತ್ತದೆ. ಮಕ್ಕಳನ್ನು ಹೊಂದುವಲ್ಲಿ ಮಹಿಳೆಯರು ಮಾತ್ರವಲ್ಲದೆ ಪುರುಷರು ಸಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಸಮಸ್ಯೆಗೆ ಈ ಕೆಳಗೆ ನೀಡಿರುವ ಆರು ಅಭ್ಯಾಸಗಳು ಪ್ರಮುಖ ಕಾರಣಗಳಾಗಿವೆ. ಬಂಜೆತನಕ್ಕೆ ಕಾರಣವಾಗಿರುವ ಆರು ಅಭ್ಯಾಸಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ...
ಇದನ್ನೂ ಓದಿ: Curd Benefits : ನಿಮ್ಮ ದೇಹದಲ್ಲಿ ಈ ಸಮಸ್ಯೆ ಇದ್ರೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ..!
- ಧೂಮಪಾನ ಅಥವಾ ತಂಬಾಕು ಸೇವನೆ : ಧೂಮಪಾನವು ಯಕೃತ್ತು ಮತ್ತು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ಇದು ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಈ ಅಭ್ಯಾಸವು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ, ಇದರಿಂದಾಗಿ ಪುರುಷರು ಮತ್ತು ಮಹಿಳೆಯರ ಫಲವತ್ತತೆ ಕಡಿಮೆಯಾಗುತ್ತದೆ.
- ಮದ್ಯ ಸೇವನೆ : ಆಲ್ಕೊಹಾಲ್ ಸೇವನೆಯು ಪುರುಷರಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯು ಆಲ್ಕೊಹಾಲ್ ಸೇವಿಸಿದರೆ, ಅಂಡೋತ್ಪತ್ತಿ ಮತ್ತು ಫಲವತ್ತತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
- ಅಧಿಕ ತೂಕ : ಬಂಜೆತನಕ್ಕೆ ಮೂರನೇ ಪ್ರಮುಖ ಕಾರಣ ಅಂದ್ರೆ, ಅಧಿಕ ತೂಕ. ಹೌದು.. ತೂಕ ಹೆಚ್ಚಾದರೂ ಸಹ ಬಂಜೆತನದ ಅಪಾಯವನ್ನೂ ಹೆಚ್ಚಾಗುತ್ತದೆ. ಅಧಿಕ ತೂಕವು ರಕ್ತದಲ್ಲಿನ ಸಕ್ಕರೆ ಮತ್ತು ಹೃದ್ರೋಗದ ಅಪಾಯವನ್ನು ಅಧಿಕಗೊಳಿಸುತ್ತದೆ. ಇದರಿಂದ ಹಾರ್ಮೋನ್ ಮಟ್ಟವು ಸಹ ಬದಲಾಯಿಸುತ್ತದೆ.
- ಕೆಟ್ಟ ಆಹಾರ : ಆಹಾರದಲ್ಲಿ ಹೆಚ್ಚು ಕೊಬ್ಬು, ಸಂಸ್ಕರಿಸಿದ ಆಹಾರ ಮತ್ತು ತ್ವರಿತ ಆಹಾರವನ್ನು ಸೇವಿಸುವ ಜನರು ಪೋಷಕಾಂಶಗಳ ಕೊರತೆಯನ್ನು ಎದುರಿಸುತ್ತಿರುತ್ತಾರೆ. ಅಂತಹ ಸ್ಥಿತಿಯಲ್ಲಿ ಮಹಿಳೆಯರು ಮತ್ತು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ.
- ಜಡ ಜೀವನಶೈಲಿ : ಜಡ ಜೀವನಶೈಲಿಯನ್ನು ಹೊಂದಿರುವ ಮಹಿಳೆಯರು ಮತ್ತು ಪುರುಷರಲ್ಲಿ ಫಲವತ್ತತೆ ಕ್ಷೀಣಿಸುತ್ತದೆ, ಅಂದರೆ ಅವರು ತಮ್ಮ ಹೆಚ್ಚಿನ ಸಮಯವನ್ನು ಒಂದೇ ಸ್ಥಳದಲ್ಲಿ ಕುಳಿತು ಕಳೆಯುತ್ತಿದ್ದಾರೆ. ದೈಹಿಕ ಚಟುವಟಿಕೆಯ ಕೊರತೆಯನ್ನು ಹೊಂದಿರುತ್ತಾರೆ.
- ಒತ್ತಡ : ಒತ್ತಡವು ವೀರ್ಯ ಫಲವತ್ತತೆಗೆ ದೊಡ್ಡ ಶತ್ರು. ಇದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ಒತ್ತಡದಿಂದ ಮಹಿಳೆಯರಲ್ಲಿ ಅಂಡೋತ್ಪತ್ತಿ ಮತ್ತು ಪುರುಷರಲ್ಲಿ ವೀರ್ಯ ಉತ್ಪಾದನೆಯು ಕಡಿಮೆಯಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.