Sandalwood : ಕಳೆದ ವರ್ಷ ಬಿಡುಗಡೆಗೊಂಡ ಹಲವು ಕನ್ನಡ ಸಿನಿಮಾಗಳಿಂದ ಕನ್ನಡ ಚಲನಚಿತ್ರಗಳ ಗಳಿಕೆಯ ಮಟ್ಟವೇ ಬದಲಾಗುತ್ತಿದೆ. ಈ ಹಿಂದೆ ಹತ್ತು ಕೋಟಿ ದಾಟಿದರೆ ಹೆಚ್ಚು ಎನ್ನಲಾಗುತ್ತಿದ್ದ ಕನ್ನಡ ಚಿತ್ರಗಳು ಕಳೆದ ವರ್ಷ ರಾಜ್ಯದಲ್ಲಿಯೇ ಇಪ್ಪತ್ತು, ಮೂವತ್ತು ಕೋಟಿ ರೂಪಾಯಿಗಳ ಕಲೆಕ್ಷನ್ ಅನ್ನು ಸುಲಭವಾಗಿ ಮಾಡಿದ್ದವು ಹಾಗೂ ವಿಶ್ವದಾದ್ಯಂತ ಕನ್ನಡ ಸಿನಿಮಾ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಕಬ್ಜ ರಿಲೀಸ್ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ಬಳಿಕ ಮೊದಲ ದಿನ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ತುಸು ಬದಲಾವಣೆಯಾಗಿದ್ದು, ಯಾವ ಕನ್ನಡ ಚಿತ್ರಗಳು ಹೆಚ್ಚು ಕಲೆಕ್ಷನ್ ಮಾಡಿ ರಿಲೀಸ್ ದಿನ ಅತಿಹೆಚ್ಚು ಗಳಿಸಿದ ಚಿತ್ರಗಳ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ ಎಂಬ ಮಾಹಿತಿ ಕೆಳಕಂಡಂತಿದೆ..
ಕಳೆದ ವರ್ಷ ತೆರೆಗೆ ಬಂದ ಜೇಮ್ಸ್, ಕೆಜಿಎಫ್ ಚಾಪ್ಟರ್ 2 ಹಾಗೂ ವಿಕ್ರಾಂತ್ ರೋಣ ಸಿನಿಮಾಗಳು ಬಾಕ್ಸ್ ಆಫೀಸ್ ಧೂಳಿಪಟ ಮಾಡಿ ಬಿಡುಗಡೆ ದಿನ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದವು.
ಈ ವರ್ಷವೂ ಸಹ ಕಬ್ಜ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆ ದಿನದ ಕಲೆಕ್ಷನ್ ದಾಖಲೆ ಸೃಷ್ಟಿಯಾಗಿದೆ.
ರಾಜ್ಯದಲ್ಲಿ ಬಿಡುಗಡೆ ದಿನ 26 ಕೋಟಿ ಗಳಿಕೆ ಮಾಡಿರುವ ಕಬ್ಜ ವಿಶ್ವದಾದ್ಯಂತ ಎಲ್ಲಾ ಭಾಷೆಗಳ ಕಲೆಕ್ಷನ್ ಸೇರಿದಂತೆ ಒಟ್ಟಾರೆ 54 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ತಿಳಿಸಿದೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಬಳಿಕ ಎರಡನೇ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಕಬ್ಜ ರಾಜ್ಯದಲ್ಲಿ ರಿಲೀಸ್ ದಿನ ಅತಿಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ವಿಕ್ರಾಂತ್ ರೋಣ, ಜೇಮ್ಸ್ ಚಿತ್ರಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.
ಇದು ಬಿಡುಗಡೆ ದಿನ ಕನ್ನಡ ಚಿತ್ರಗಳು ವಿಶ್ವದಾದ್ಯಂತ ಮಾಡಿದ ಗಳಿಕೆಯ ಪಟ್ಟಿಯಾಗಿದ್ದು, ಕೆಜಿಎಫ್ ಚಾಪ್ಟರ್ 2 ಹಾಗೂ ಕಬ್ಜ ಈ ಎರಡು ಚಿತ್ರಗಳು ಮಾತ್ರ ಮೊದಲ ದಿನ ವರ್ಲ್ಡ್ ವೈಡ್ ಐವತ್ತು ಕೋಟಿ ಕ್ಲಬ್ ಸೇರಿದ ಕನ್ನಡ ಚಿತ್ರಗಳು ಎಂಬ ಸಾಧನೆ ಮಾಡಿವೆ.