ಬೆಂಗಳೂರು : Mercury Retrograde 2022: ಜ್ಯೋತಿಷ್ಯದಲ್ಲಿ, ಗ್ರಹಗಳ ಚಲನೆ ಮತ್ತು ಹಿಮ್ಮುಖ ಚಲನೆಯ ಪರಿಣಾಮವು ವ್ಯಕ್ತಿಯ ಜೀವನದ ಮೇಲೆ ಕಂಡುಬರುತ್ತದೆ. ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯ ಮತ್ತು ಅವಧಿಯ ನಂತರ ತನ್ನ ಸ್ಥಳವನ್ನು ಬದಲಾಯಿಸುತ್ತದೆ. ಇದನ್ನು ರಾಶಿಚಕ್ರದ ಬದಲಾವಣೆ ಎಂದು ಕರೆಯುತ್ತಾರೆ. ಇದಲ್ಲದೆ, ಗ್ರಹಗಳ ಹಿಮ್ಮುಖ ಚಲನೆ ಕೂಡಾ ಆರಂಭವಾಗುತ್ತವೆ. ಏಪ್ರಿಲ್ ತಿಂಗಳಿನಲ್ಲಿ, ಬಹುತೇಕ ಎಲ್ಲಾ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಿವೆ. ಮೇ 10 ರಿಂದ, ಬುದ್ಧಿವಂತಿಕೆಯ ಅಂಶವಾಗಿರುವ ಬುಧ ಗ್ರಹವು ಹಿಮ್ಮುಖ ಚಲನೆ ಆರಂಭಿಸಲಿದೆ.
ಯಾವುದೇ ಗ್ರಹದ ಹಿಮ್ಮುಖ ಚಲನೆ ಕೆಲವು ರಾಶಿಯ ಜನರಿಗೆ ಪ್ರಯೋಜನಕಾರಿಯಾಗಿದೆ. ಆದರೆ ಕೆಲವು ರಾಶಿಯವರಿಗೆ ಇದು ತೊಂದರೆ ನೀಡುತ್ತದೆ. ಬುಧ ಗ್ರಹದ ಹಿಮ್ಮುಖ ಚಲನೆ ಕೂಡಾ ಕೆಲವು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ.
ಇದನ್ನೂ ಓದಿ : ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಬುಧವಾರ ಈ ಕೆಲಸ ಮಾಡಿ
ಬುಧನ ಹಿಮ್ಮುಖ ಚಲನೆಯಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ :
ಮೀನ: ಜ್ಯೋತಿಷ್ಯದ ಪ್ರಕಾರ, ಬುಧನ ಹಿಮ್ಮುಖ ಚಲನೆ ಈ ರಾಶಿಚಕ್ರದ ಜನರಿಗೆ ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಯ ಜನರು ಹೂಡಿಕೆಯಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ತೋರಿಸಲು ಇದು ಸೂಕ್ತವಾದ ಸಮಯ. ಇದಲ್ಲದೆ, ಈ ಸಮಯವು ಪ್ರೀತಿಯ ವಿಷಯದಲ್ಲಿ ಸಹ ಅನುಕೂಲಕರವಾಗಿರಲಿದೆ. ಪ್ರವಾಸ ಯೋಗಗಳು ರೂಪುಗೊಳ್ಳಲಿವೆ. ಈ ಅವಧಿಯಲ್ಲಿ ಮಾಡಿದ ಪ್ರವಾಸಗಳು ಲಾಭದಾಯಕವಾಗಿರಲಿದೆ.
ವೃಷಭ ರಾಶಿ : ವೃಷಭ ರಾಶಿಯವರಿಗೆ ಕೂಡಾ ಬುಧನ ಹಿಮ್ಮುಖ ಚಲನೆ ಮಂಗಳಕರವಾಗಿರಲಿದೆ. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡಬಹುದು. ಪರೀಕ್ಷೆಯಲ್ಲಿ ಯಶಸ್ಸು ಕಾಣುವಿರಿ. ಮತ್ತೊಂದೆಡೆ, ಯಾವುದೇ ರೀತಿಯ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸುವುದಾದರೆ, ಇದು ಸರಿಯಾದ ಸಮಯ. ಈ ಅವಧಿಯಲ್ಲಿ, ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ವ್ಯವಹಾರದಲ್ಲಿ ಉತ್ತಮ ಲಾಭವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : Shukra Gochar 2022: ಮುಂದಿನ 20 ದಿನಗಳವರೆಗೆ ಈ ರಾಶಿಯವರ ಮೇಲೆ ಹಣದ ಹೊಳೆ ಹರಿಸಲಿದ್ದಾನೆ ಶುಕ್ರ
ಕರ್ಕ ರಾಶಿ: ಈ ಸಮಯವು ಕರ್ಕ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕವೆಂದು ಸಾಬೀತಾಗಲಿದೆ. ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳು ಗೋಚರಿಸಬಹುದು. ನಿಂತು ಹೋಗಿದ್ದ ಕೆಲಸಗಳು ಮತ್ತೆ ಚುರುಕು ಪಡೆಯಬಹುದು. ವ್ಯಾಪಾರದಲ್ಲಿ ಬೆಳವಣಿಗೆಗೆ ಬಲವಾದ ಅವಕಾಶಗಳಿವೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು. ಅಧಿಕಾರಿಗಳ ಜತೆಗಿನ ಸಂಬಂಧ ಗಟ್ಟಿಯಾಗುತ್ತಿದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.