Mars Transit 2023 Dates: ವರ್ಷ ಪ್ರಾರಂಭವಾದ ತಕ್ಷಣ, ಪ್ರತಿಯೊಬ್ಬ ವ್ಯಕ್ತಿಯು ಈ ವರ್ಷವು ತನಗೆ ಸಂತೋಷವನ್ನು ತರುತ್ತದೆ ಎಂಬ ಭರವಸೆಯೊಂದಿಗೆ ಕುಳಿತಿರುತ್ತಾನೆ. ಅವನಿಗೆ ಜೀವನದಲ್ಲಿ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಆದರೆ ಇದೆಲ್ಲವೂ ಕೇವಲ ಆಲೋಚನೆಯಿಂದ ಸಾಧಿಸಲ್ಪಡುವುದಿಲ್ಲ. ವಾಸ್ತವದಲ್ಲಿ, ಗ್ರಹಗಳು ಮತ್ತು ನಕ್ಷತ್ರಗಳ ಬದಲಾವಣೆಯು ವ್ಯಕ್ತಿಯ ಜೀವನದಲ್ಲಿನ ಸುಖ, ಸಂತೋಷ ಹಾಗೂ ಸಂಕಷ್ಟಗಳನ್ನು ನಿರ್ಧರಿಸುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ತನ್ನ ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ.
ಈ ವರ್ಷ 2023 ರಲ್ಲಿ, ಮಂಗಳ ತನ್ನ ಸ್ಥಾನವನ್ನು ಒಟ್ಟು 7 ಬಾರಿ ಬದಲಾಯಿಸಲಿದೆ. ಇದು ಕೆಲ ರಾಶಿಗಳ ಜನರಿಗೆ ಭಾರಿ ಪ್ರಯೋಜನಕಾರಿಯಾಗಿದೆ, ಈ ರಾಶಿಚಕ್ರದ ಪಾಲಿಗೆ ಈ ವರ್ಷವು ತುಂಬಾ ವಿಶೇಷವಾಗಿರುತ್ತದೆ. ಮಂಗಳ, ಗ್ರಹಗಳ ಸೇನಾಪತಿ, ಭೂಮಿ, ಕಟ್ಟಡ, ಯೋಧರ ಅಂಶವೆಂದು ಪರಿಗಣಿಸಲಾಗಿದೆ. ಮಂಗಳ ವ್ಯಕ್ತಿಯನ್ನು ಮುಂಗೋಪಿಯನ್ನಾಗಿ ಮಾಡುತ್ತದೆ. ಮಂಗಳ ಮಕರ ಮತ್ತು ಮೀನ ರಾಶಿಯಲ್ಲಿದ್ದರೆ, ಅದು ಹೆಚ್ಚು ಶುಭ ಫಲಿತಾಂಶಗಳನ್ನು ನೀಡುತ್ತದೆ, ಮಂಗಳ ಗ್ರಹವು ಈ ವರ್ಷದಲ್ಲಿ ಯಾವ ಎರಡು ಗ್ರಹಗಳ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ತರಲಿದೆ ತಿಳಿದುಕೊಳ್ಳೋಣ ಬನ್ನಿ.
ಮಂಗಳ ಸಂಚಾರ ಈ 2 ರಾಶಿಗಳ ಜನರಿಗೆ ಪ್ರಯೋಜನಕಾರಿಯಾಗಿದೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇಷ ಮತ್ತು ವೃಶ್ಚಿಕ ಈ ಎರಡೂ ರಾಶಿಗಳಿಗೆ ಮಂಗಳ ಅಧಿಪತಿ ಮತ್ತು ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಗಳ ಜನರಿಗೆ ಮಂಗಳ ಎಂದಿಗೂ ಅಶುಭ ಫಲಿತಾಂಶಗಳನ್ನು ನೀಡುವುದಿಲ್ಲ. ಜಾತಕದಲ್ಲಿ ಮಂಗಳವು ಶುಭವಾಗಿದ್ದರೆ, ವ್ಯಕ್ತಿಯ ಜೀವನದಲ್ಲಿ ಎಲ್ಲಾ ಕೆಲಸಗಳು ಮಂಗಳಕರವಾಗಿರುತ್ತವೆ. ಮತ್ತೊಂದೆಡೆ, ಅಶುಭ ಮಂಗಳದಿಂದಾಗಿ, ವ್ಯಕ್ತಿಯು ಕಣ್ಣು ನೋವು, ಕೀಲು ನೋವು, ಮೂಳೆ ನೋವು, ರಕ್ತಹೀನತೆ ಇತ್ಯಾದಿಗಳಿಂದ ಬಳಳುತ್ತಾನೆ. ಈ ವರ್ಷ ಮಂಗಳವು ಯಾವಾಗ ಮತ್ತು ಎಷ್ಟು ಬಾರಿ ತನ್ನ ರಾಶಿಯನ್ನು ಪರಿವರ್ತಿಸಲಿದೆ ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-ಶೀಘ್ರದಲ್ಲಿಯೇ ಮಕರ ರಾಶಿಗೆ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಅದೃಷ್ಟಕ್ಕೆ ಸಿಗಲಿದೆ ಭಾರಿ ಮೆರಗು!
2023 ರಲ್ಲಿ ಮಂಗಳ ಸಾಗಣೆ ಪಟ್ಟಿ
>> ಮಾರ್ಚ್ 13, 2023, ಸೋಮವಾರ- ಬೆಳಗ್ಗೆ 05.33ಕ್ಕೆ ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ.
>> ಮೇ 10, 2023 ರಂದು, ಬುಧವಾರ - ಮಧ್ಯಾಹ್ನ 02.13 ಕ್ಕೆ, ಇದು ಮಿಥುನ ರಾಶಿಯನ್ನು ಬಿಟ್ಟು ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ.
>> ಜುಲೈ 01, 2023, ಶನಿವಾರ - 02.38 ಕ್ಕೆ, ಇದು ಕರ್ಕದಿಂದ ಹೊರಬಂದು ಸಿಂಹ ರಾಶಿಯಲ್ಲಿ ಕುಳಿತುಕೊಳ್ಳುತ್ತದೆ.
>> ಆಗಸ್ಟ್ 18, 2023 ರಂದು, ಶುಕ್ರವಾರ - ಸಂಜೆ 04:13 ಕ್ಕೆ, ಇದು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶಿಸುತ್ತದೆ.
>> ಅಕ್ಟೋಬರ್ 03, 2023, ಮಂಗಳವಾರ - ಸಂಜೆ 06.17 ಕ್ಕೆ, ಇದು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಚಲಿಸುತ್ತದೆ.
>> 16ನೇ ನವೆಂಬರ್ 2023, ಗುರುವಾರ - ಬೆಳಗ್ಗೆ 11.04 ಕ್ಕೆ, ಅದು ತುಲಾವನ್ನು ಬಿಟ್ಟು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತದೆ.
>> ಡಿಸೆಂಬರ್ 28, 2023 ರಂದು, ಬುಧವಾರ - ಮಧ್ಯಾಹ್ನ 12.37 ಕ್ಕೆ, ಇದು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಸಾಗಲಿದೆ.
ಇದನ್ನೂ ಓದಿ-Shani Udaya 2023: ಶನಿ ಉದಯಿಸುತ್ತಿದ್ದಂತೆ ನಿರ್ಮಾಣಗೊಳ್ಳಲಿದೆ 'ಧನ ರಾಜಯೋಗ' ಈ ರಾಶಿಗಳ ಮೇಲೆ ಶುಭ ದೃಷ್ಟಿ
ಶುಭ ಫಲಿತಾಂಶಗಳಿಗಾಗಿ ಈ ಕ್ರಮಗಳನ್ನು ಮಾಡಿ
ನಿಮ್ಮ ಜಾತಕದಲ್ಲಿ ಮಂಗಳನ ಸ್ಥಾನವನ್ನು ಬಲಪಡಿಸಲು ನೀವು ಬಯಸುತ್ತಿದ್ದರೆ, ನಿಮ್ಮ ಕೈಯಲ್ಲಿ ಕೆಂಪು ಬಣ್ಣದ ದಾರವನ್ನು ಧರಿಸಿ. ಅಂದ ಹಾಗೆ, ನೀವು ಬಯಸಿದರೆ, ನೀವು ಹವಳವನ್ನು ಸಹ ಧರಿಸಬಹುದು. ಇದಲ್ಲದೆ ಮಂಗಳ ಗ್ರಹದ ಅಶುಭ ಪ್ರಭಾವವನ್ನು ಕಡಿಮೆ ಮಾಡಲು ಮಂಗಳವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬೂಂದಿಯನ್ನು ಪ್ರಸಾದದ ರೂಪದಲ್ಲಿ ಅರ್ಪಿಸಿ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.