ಚಿಕನ್ 65 ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಉತ್ತರದಿಂದ ದಕ್ಷಿಣದ ವರೆಗೂ ಪೂರ್ವದಿಂದ ಪಶ್ಚಿಮದವರೆಗೂ ಪದಾರ್ಥದ ಸವಿಯನ್ನು ಅನುಭವಿಸದೇ ಇರುವವರಿಲ್ಲ, ಅಷ್ಟರ ಮಟ್ಟಿಗೆ ಆ ಆಹಾರ ಪ್ರಸಿದ್ದವಾಗಿದೆ.ಕೇವಲ ಭಾರತ ಅಷ್ಟೇ ಅಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿ ಈ ಪದಾರ್ಥಕ್ಕೆ ಭಾರಿ ಬೇಡಿಕೆ ಇದೆ.
ಈಗ ನಾವು ಆಹಾರ ಪದಾರ್ಥ ಹುಟ್ಟಿದ್ದೇಗೆ ಮತ್ತು ಇದರ ಹೆಸರಿನ ಹಿಂದಿರುವ ರೋಚಕ ಕಥೆಯನ್ನು ತಿಳಿಯೋಣ ಬನ್ನಿ.
ಇದನ್ನೂ ಓದಿ: 'ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕಿಂತ ಕೀಳು'.! ಈ ವಿಡಿಯೋ ನೋಡಿ ಅರ್ಥವಾಗುತ್ತೆ..
ಚಿಕನ್ 65 ಹುಟ್ಟಿದ್ದೆಲ್ಲಿ ಗೊತ್ತಾ?
ಬಹುತೇಕರಿಗೆ ಚಿಕನ್ 65 ಚೀನಾದಲ್ಲೂ ಅಥವಾ ಇನ್ನ್ಯಾವುದೋ ದೇಶದಲ್ಲಿ ಈ ಆಹಾರ ಪದಾರ್ಥ ಹುಟ್ಟಿರಬೇಕು ಎನ್ನುವ ನಂಬಿಕೆ ಇರುತ್ತದೆ.ಒಂದು ವೇಳೆ ನೀವೂ ಕೂಡ ಹಾಗೆ ಭಾವಿಸಿದ್ದರೆ ನಿಮ್ಮ ಊಹೆ ಖಂಡಿತಾ ತಪ್ಪು..! ಅಷ್ಟಕ್ಕೂ ಈ ಆಹಾರ ಪದಾರ್ಥ ಹುಟ್ಟಿದ್ದೆಲ್ಲಿ ಅಂತೀರಾ..? ಚೆನ್ನೈ ನ ಬುಹಾರಿ ಎನ್ನುವ ಹೋಟೆಲ್ ಪ್ರದೇಶದಲ್ಲಿ ಹುಟ್ಟಿದ ಈ ಪದಾರ್ಥವನ್ನು ಬೋನಲೆಸ್ ಚಿಕನ್, ಈರುಳ್ಳಿ ಹಾಗೂ ಮೆಣಸಿನಕಾಯಿ ಮೂಲಕ ತಯಾರಿಸಲಾಗುತ್ತದೆ.
ಇದನ್ನೂ ಓದಿ: ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿಸಲು ಸುರಕ್ಷಿತವಾದ ಮನೆ ಮದ್ದು ಎಂದರೆ ಇದೊಂದೇ ಮಸಾಲೆ !
ಬುಹಾರಿ ಹೋಟೆಲ್ ನಲ್ಲಿ ಈ ಆಹಾರವನ್ನು ಕಂಡು ಹಿಡಿದಿದ್ದರೂ ಸಹ ಇದರ ಹೆಸರಿನ ಹಿನ್ನೆಲೆಯ ಕುರಿತಾಗಿ ಹಲವಾರು ಥಿಯರಿಗಳಿವೆ.ಅದರಲ್ಲಿ ಪ್ರಮುಖವಾಗಿ 1965 ರಲ್ಲಿ ಭಾರತೀಯ ಸೈನಿಕರಿಗೆ ಇದನ್ನು ನೀಡಲಾಗುತ್ತಿತ್ತು. ಹಾಗಾಗಿ ಅಂದಿನಿಂದ ಈ ಪದಾರ್ಥಕ್ಕೆ ಚಿಕನ್ 65 ಎಂದು ಕರೆಯುವ ಪರಿಪಾಟವಿದೆ. ಕೆಲವರ ಪ್ರಕಾರ ಹೋಟೆಲ್ ಉದ್ಯಮಿ ಇದನ್ನು ತಯಾರಿಸಲು 65 ಮೆಣಸಿನಕಾಯಿಗಳನ್ನು ಬಳಸಿದ್ದಕ್ಕೆ ಹಾಗೆ ಕರೆಯಲಾಗುತ್ತದೆ ಎನ್ನುವ ಮಾತಿದೆ.ಇನ್ನೊಂದೆಡೆಗೆ 65 ದಿನದ ಕೋಳಿಯ ಮಾಂಸದಿಂದ ಇದನ್ನು ತಯಾರಿಸಲಾಗಿದೆ ಎನ್ನಲಾಗುತ್ತದೆ.ಇನ್ನೂ ಕೆಲವರು 65 ಕೋಳಿ ಮಾಂಸದ ಪೀಸ್ ಗಳನ್ನು ಬಳಸಿ ತಯಾರಿಸಿದ್ದರಿಂದಾಗಿ ಹಾಗೆ ಕರೆಯಲಾಗುತ್ತದೆ ಎಂದು ಹೇಳುತ್ತಾರೆ. ಏನೇ ಹೇಳಿ ತನ್ನ ಭಿನ್ನ ಹೆಸರಿನಿಂದಲೇ ಜನಮನ ಗಳಿಸಿರುವ ಈ ಆಹಾರ ಪದಾರ್ಥ ಸೇವಿಸುವಾಗ ಇನ್ನೊಬ್ಬರಿಗೂ ಸಹಿತ ಇದರ ಹೆಸರಿನ ಹಿಂದಿನ ಕಥೆ ಹೇಳಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.