ಚಂಡಿಗಡ್: ಕೆಲಸದ ಹುಡುಕಾಟಕ್ಕೆಂದು ಹೋಗಿದ್ದ 22 ವರ್ಷದ ಮಹಿಳೆಯೊಬ್ಬಳು ಅತಿಥಿ ಗೃಹವೊಂದರರಲ್ಲಿ ಕೂಡಿ ಹಾಕಿ ಸುಮಾರು 40 ವ್ಯಕ್ತಿಗಳು ಅತ್ಯಾಚಾರಗೈದ ಘಟನೆ ನಡೆದಿದೆ.
ಗುರುವಾರದಂದು ಆ ಸಂತ್ರಸ್ತ ಮಹಿಳೆಯು ಚಂಡಿಗಡ್ ಪೊಲೀಸರಿಗೆ ದೂರು ನೀಡಿದ್ದಳು. ಮೊರೊನಿ ಹಿಲ್ಸ ನಲ್ಲಿರುವ ಗೆಸ್ಟ್ ಹೌಸ್ ನಲ್ಲಿ ಜೂ. 15 ರಿಂದ 18 ರ ತನಕ ಆ ಮಹಿಳೆ ತಂಗಿದ್ದಳು. ಆ ಸಂದರ್ಭದಲ್ಲಿ ಈ ಭೀಕರ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ತನ್ನನ್ನು ಅತ್ಯಾಚಾರ ಮಾಡಿದ 40 ವ್ಯಕ್ತಿಗಳಲ್ಲಿ ಒಬ್ಬನು ತನ್ನ ಪತಿಗೆ ಪರಿಚಿತ, ತನಗೆ ಕೆಲಸ ನೀಡುತ್ತೇನೆಂದು ಅತಿಥಿ ಗೃಹದಲ್ಲಿ ಕೂಡಿ ಹಾಕಲಾಗಿತ್ತು ಎಂದು ಅವಳು ತಿಳಿಸಿದ್ದಾಳೆ.
ಈ ಘಟನೆಯ ವಿಚಾರವಾಗಿ ಪೊಲೀಸರು ಈಗಾಗಲೇ ಇಬ್ಬರು ಅತಿಥಿ ಗೃಹದ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ ಎಂದು ಮನಿಮಾಜ್ರಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರಂಜಿತ್ ಸಿಂಗ್ ಹೇಳಿದ್ದಾರೆ. ಇನ್ನು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.