"ಹಾಡಿದ್ದೇ ಹಾಡೋ ಕಿಸುಬಾಯಿ ದಾಸ" ಗಾದೆ ಮಾತಿನಂತಿದೆ ಸಿಎಂ ಆಪಾದನೆ: ಪ್ರಲ್ಹಾದ ಜೋಶಿ ಟಾಂಗ್

Pralhad Joshi: ಅನುದಾನ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪಾದನೆ "ಹಾಡಿದ್ದೇ ಹಾಡೋ ಕಿಸಬಾಯಿ ದಾಸ" ಎಂಬ ಗಾದೆ ಮಾತಿನಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.

Written by - Savita M B | Last Updated : Nov 5, 2024, 01:05 PM IST
  • ಅನುದಾನ ಹಂಚಿಕೆಯ ಸಿಎಂ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟಾಂಗ್
  • ಸಿಎಂ ಸಿದ್ದರಾಮಯ್ಯ ರಾಜಕಾರಣ ಬಿಡುವ ಮೊದಲು ಸಿಎಂ ಸ್ಥಾನ ಬಿಟ್ಟು ತನಿಖೆಗೆ ಸಹಕಾರ ನೀಡಲಿ ಸಾಕು
"ಹಾಡಿದ್ದೇ ಹಾಡೋ ಕಿಸುಬಾಯಿ ದಾಸ" ಗಾದೆ ಮಾತಿನಂತಿದೆ ಸಿಎಂ ಆಪಾದನೆ: ಪ್ರಲ್ಹಾದ ಜೋಶಿ ಟಾಂಗ್ title=

ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಸಮರ್ಪಕ ಅನುದಾನ ನೀಡಿದ್ದರೆ ರಾಜಕೀಯ ಬಿಡುವೆ; ಇಲ್ಲದಿದ್ದರೆ ಪ್ರಲ್ಹಾದ ಜೋಶಿ ರಾಜಕಾರಣ ಬಿಡುತ್ತಾರೆಯೇ? ಎಂದು ಪ್ರಶ್ನಿಸಿದ್ದರು ಸಿಎಂ.ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಲ್ಹಾದ ಜೋಶಿ, ನೀವು ರಾಜಕೀಯ ಬಿಡುವ ಮಾತೂ ನಿಮ್ಮ "ಗ್ಯಾರಂಟಿ" ರೀತಿಯೇ! ಆಗಿರುತ್ತದೆ ಎಂದು ಸಿಎಂಗೆ ಕೌಂಟರ್ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣ, ಎಡವಟ್ಟುಗಳ ವಿರುದ್ಧ ಬಿಜೆಪಿ ಪ್ರತಿಭಟನೆಗಿಳಿದರೆ ಅನುದಾನ ಹಂಚಿಕೆ ಬಗ್ಗೆ ಆಪಾದನೆ ಮಾಡೋದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ವಾಕ್ಚಾಳಿ ಆಗಿಬಿಟ್ಟಿದೆ ಎಂದು ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು "ಹಾಡಿದ್ದೇ ಹಾಡೋ ಕಿಸುಬಾಯಿ ದಾಸ" ಎನ್ನುವಂತೆ ಪದೇ ಪದೇ ಅನುದಾನ ಹಂಚಿಕೆ ಬಗ್ಗೆ ಹಾಡಿದ್ದೇ ಹಾಡುತ್ತಾರೆ ಎಂದು ಜೋಶಿ ಲೇವಡಿ ಮಾಡಿದ್ದಾರೆ.

ಇನ್ನೂ ಎಷ್ಟು ದಿನ ಅದೇ ಸುಳ್ಳು ಹೇಳುತ್ತೀರಿ?: ಸಿಎಂಗೆ ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಹರಿಹಾಯುವುದೇ ನಿತ್ಯ ಕಾಯಕವಾಗಿಬಿಟ್ಟಿದೆ. ಇದೇ ಸುಳ್ಳನ್ನು ಇನ್ನೂ ಎಷ್ಟು ದಿನ ಹೇಳುತ್ತ ರಾಜಕೀಯ ಮಾಡುತ್ತೀರಿ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಹಳೇ ಗ್ರಾಮೋಫೋನ್ ತರ ಅದೇ ವಾಕ್ಯವನ್ನು (ಸುಳ್ಳನ್ನು) ಪುನರುಚ್ಚರಿಸುತ್ತಿದ್ದೀರಿ. ನೀವು ರಾಜಕೀಯ ಬಿಡುವ ಮಾತು ಸಹ ನಿಮ್ಮ "ಅರೆಬರೆ ಗ್ಯಾರಂಟಿ ಥರಾನೆ"…ನಿಮ್ಮಿಂದ ಅದು ಎಂದೂ ಆಗದ ಮಾತು. ಹಾಗಾಗಿ "ರಾಜಕಾರಣ ಬಿಡುವ ಮೊದಲು ಮುಖ್ಯಮಂತ್ರಿ ಸ್ಥಾನ ಬಿಟ್ಟು ಹಗರಣಗಳ ತನಿಖೆಗೆ ಅನುವು ಮಾಡಿಕೊಡಿ ಸಾಕು" ಎಂದು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ ಸಚಿವ ಪ್ರಲ್ಹಾದ ಜೋಶಿ.

ಕರ್ನಾಟಕಕ್ಕೆ ಅನುದಾನ ಬಾಕಿ ಇಲ್ಲ:
ಕರ್ನಾಟಕಕ್ಕೆ ಸಲ್ಲಬೇಕಾದ ಎಎಲ್ಲಾ ಅನುದಾನವೂ ಸಂದಿದೆ. ಯಾವುದೂ ಬಾಕಿ ಇಲ್ಲ. ಸ್ವತಃ ಕೇಂದ್ರ ಹಣಕಾಸು ಸಚಿವರೇ ಅನೇಕ ಬಾರಿ ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ. ಹಣಕಾಸು ಆಯೋಗದ ಹಂಚಿಕೆ ಪ್ರಮಾಣದಿಂದ ಸಹ ಇದು ಸ್ಪಷ್ಟವಾಗಿದೆ ಎಂದು ಜೋಶಿ ಪ್ರತ್ಯುತ್ತರ ಕೊಟ್ಟಿದ್ದಾರೆ.

ಆರ್ಥಿಕತೆ, ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ನಂ.1 ಎನ್ನುತ್ತೀರಿ. ಹಾಗಿದ್ದರೂ ಕೇಂದ್ರದ ಅನುದಾನದ ಜಪ ಮಾಡುತ್ತಿದ್ದೀರಿ. ಇದು ನಿಮ್ಮ ಇಬ್ಬಗೆಯ ನೀತಿಯಲ್ಲವೇ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಗ್ಯಾರಂಟಿಗಳಿಂದ ರಾಜ್ಯದ ರಸ್ತೆಗೂ ಬುಟ್ಟಿ ಮಣ್ಣು ಹಾಕದಾಗಿದೆ ಎಂದು ಸ್ವತಃ ಮಲ್ಲಿಕಾರ್ಜುನ್ ಖರ್ಗೆ ಅವರೇ ಹೇಳಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆಗೂ ಸ್ವಲ್ಪ ಗಮನ ಹರಿಸಿ ಎಂದು ಸಿಎಂಗೆ ಕಿವಿಮಾತು ಹೇಳಿದ್ದಾರೆ ಜೋಶಿ.

ಮೋದಿ ಆಡಳಿತದಲ್ಲಿ ರಾಜ್ಯಗಳಿಗೆ ಹೆಚ್ಚಿದೆ ಅನುದಾನ ಸಂಪನ್ಮೂಲ: ಮೋದಿ ಆಡಳಿತದಲ್ಲಿ ರಾಜ್ಯಗಳಿಗೆ ಅನುದಾನ ಸಂಪನ್ಮೂಲ ಹೆಚ್ಚಿದೆ. ಇದು ಎಲ್ಲರಿಗೂ ತಿಳಿದ ವಿಷಯವೇ. ಆದರೆ, ಚುನಾವಣೆ ಗೆಲ್ಲುವ ಭರದಲ್ಲಿ ನೀವು ನೀಡಿದ ಭರವಸೆಗಳನ್ನು ಪೂರೈಸಲಾಗದೆ ಮತ್ತು ರಾಜ್ಯದ ಅಭಿವೃದ್ಧಿಗೆ ಬ್ರೇಕ್ ಹಾಕಿರುವುದು ಇಡೀ ದೇಶಕ್ಕೇ ತಿಳಿದಿದೆ ಎಂದಿದ್ದಾರೆ.

ಹಗರಣಗಳಿಂದ ರಾಜ್ಯಕ್ಕೆ ಅಪಕೀರ್ತಿ:
ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳಿಂದ  ನಾಡಿಗೆ ಅಪಕೀರ್ತಿ ತಂದಿದ್ದೀರಿ. ಹಾಲು, ಪೆಟ್ರೋಲ್, ಡೀಸೆಲ್, ವಿದ್ಯುತ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿದ್ದೀರಿ. ಇದರ ಜೊತೆ ಕಾನೂನು ವ್ಯವಸ್ಥೆಯೂ ಕುಸಿದಿದೆ. ಇದು ನಿಮ್ಮ ಅದಕ್ಷ ಆಡಳಿತಕ್ಕೆ ನಿದರ್ಶನಗಳು ಎಂದು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News