'ಎಚ್‌ಡಿಕೆಯವರನ್ನ ಸಿಎಂ ಮಾಡಿದ್ದು ಸಿದ್ದು ಅಲ್ಲ'

ಮೈತ್ರಿ ಸರ್ಕಾರ ಮಾಡಲು ಬೆಂಬಲ ನೀಡಿದ್ದು ಕಾಂಗ್ರೆಸ್ಸಿನ ಹೈಕಮಾಂಡ ಎನ್ನುವುದು ತಿಳಿದಿರಲಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೀತು ಎಂಬ ಭಯವಿತ್ತು. ಅದಕ್ಕಾಗಿ ಹೈಕಮಾಂಡ ಹೇಳಿದಂತೆ ಸಿದ್ದರಾಮ್ಯಯನವರು ಕುಮಾರಸ್ವಾಮಿ ಅವರನ್ನು ಸಿಎಂ ಕುರ್ಚಿಯಲ್ಲಿ ಕುಳ್ಳಿರಿಸಿದರೆ ಹೊರತು ಇದಕ್ಕಾಗಿ ಸಿದ್ದರಾಮಯ್ಯ ಬೆಂಬಲ ನೀಡಿಯೇ ಇಲ್ಲ

Last Updated : Dec 18, 2020, 09:53 PM IST
  • ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಸಿದ್ದರಾಮಯ್ಯನವರಲ್ಲ
  • ಮೈತ್ರಿ ಸರ್ಕಾರ ಮಾಡಲು ಬೆಂಬಲ ನೀಡಿದ್ದು ಕಾಂಗ್ರೆಸ್ಸಿನ ಹೈಕಮಾಂಡ ಎನ್ನುವುದು ತಿಳಿದಿರಲಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೀತು ಎಂಬ ಭಯವಿತ್ತು. ಅದಕ್ಕಾಗಿ ಹೈಕಮಾಂಡ ಹೇಳಿದಂತೆ ಸಿದ್ದರಾಮ್ಯಯನವರು ಕುಮಾರಸ್ವಾಮಿ ಅವರನ್ನು ಸಿಎಂ ಕುರ್ಚಿಯಲ್ಲಿ ಕುಳ್ಳಿರಿಸಿದರೆ ಹೊರತು ಇದಕ್ಕಾಗಿ ಸಿದ್ದರಾಮಯ್ಯ ಬೆಂಬಲ ನೀಡಿಯೇ ಇಲ್ಲ
  • ಕಾಂಗ್ರೆಸ್ ಯಾವತ್ತೂ ಯಾರ ಪರವೂ ಇಲ್ಲ. ಅದು ಅಹಂಕಾರ, ಭ್ರಷ್ಟಾಚಾರದ ಪರ. ಅದು ದಲ್ಲಾಳಿ, ತುಕ್ಡೇ ತುಕ್ಡೇ ಗ್ಯಾಂಗ್ ಪರವಾಗಿದೆ
'ಎಚ್‌ಡಿಕೆಯವರನ್ನ ಸಿಎಂ ಮಾಡಿದ್ದು ಸಿದ್ದು ಅಲ್ಲ' title=

ಧಾರವಾಡ: ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಸಿದ್ದರಾಮಯ್ಯನವರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಎಚ್‌ಡಿಕೆ ಸರ್ಕಾರ ಮಾಡಿದ್ದು ನಾನೇ ಎಂಬ ಸಿದ್ದರಾಮಯ್ಯ(Siddaramaiah) ಅವರ ಹೇಳಿಕೆ ಕುರಿತಂತೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಪ್ರಹ್ಲಾದ ಜೋಶಿ, ಕಾಂಗ್ರೆಸ್‌ನ ಹೈಕಮಾಂಡ್ ಹೇಳಿದ್ದನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆದರೆ, ನಾನೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಮೈತ್ರಿ ಸರ್ಕಾರ ಮಾಡಲು ಬೆಂಬಲ ನೀಡಿದ್ದು ಕಾಂಗ್ರೆಸ್ಸಿನ ಹೈಕಮಾಂಡ ಎನ್ನುವುದು ತಿಳಿದಿರಲಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೀತು ಎಂಬ ಭಯವಿತ್ತು. ಅದಕ್ಕಾಗಿ ಹೈಕಮಾಂಡ ಹೇಳಿದಂತೆ ಸಿದ್ದರಾಮ್ಯಯನವರು ಕುಮಾರಸ್ವಾಮಿ ಅವರನ್ನು ಸಿಎಂ ಕುರ್ಚಿಯಲ್ಲಿ ಕುಳ್ಳಿರಿಸಿದರೆ ಹೊರತು ಇದಕ್ಕಾಗಿ ಸಿದ್ದರಾಮಯ್ಯ ಬೆಂಬಲ ನೀಡಿಯೇ ಇಲ್ಲ ಎಂದರು.

ಗ್ರಾ. ಪಂ. ಚುನಾವಣೆ ಪ್ರಚಾರಕ್ಕಿಳಿದ 'ಪುಟ್ಟಗೌರಿ' ಖ್ಯಾತಿ ರಂಜನಿ ರಾಘವನ್..!

ಕಾಂಗ್ರೆಸ್ ಬಗ್ಗೆ ಸಿ.ಎಂ.ಇಬ್ರಾಹಿಂ ಅಸಮಾಧಾನ ವಿಚಾರವಾಗಿ ಮಾತನಾಡಿದ ಜೋಶಿ, ಕಾಂಗ್ರೆಸ್ ಯಾವತ್ತೂ ಯಾರ ಪರವೂ ಇಲ್ಲ. ಅದು ಅಹಂಕಾರ, ಭ್ರಷ್ಟಾಚಾರದ ಪರ. ಅದು ದಲ್ಲಾಳಿ, ತುಕ್ಡೇ ತುಕ್ಡೇ ಗ್ಯಾಂಗ್ ಪರವಾಗಿದೆ. ಕಾಂಗ್ರೆಸ್ ಪ್ರಜಾಪ್ರಭುತ್ವದ ಪರವೂ ಇಲ್ಲ. ಆದರೆ ಬಿಜೆಪಿಯಲ್ಲಿ ಹಾಗಿಲ್ಲ. ಇವತ್ತು ಜೆ.ಪಿ. ನಡ್ಡಾ ಅಧ್ಯಕ್ಷರಾಗಿದ್ದಾರೆ. ನಾಳೆ ಯಾರಾದರೂ ಆಧ್ಯಕ್ಷರಾಗಬಹುದು. ಸಾಮಾನ್ಯ ಕಾರ್ಯಕರ್ತನೂ ಆಗಬಹುದು ಎಂದರು.

ಗ್ರಾ.ಪಂ.ಚುನಾವಣೆ: 'ರಾಜ್ಯ ರಾಜಕೀಯ ನಾಯಕ'ರ ನಿದ್ದೆಗೆಡಿಸಿದ ಈ ಮಹತ್ವದ ಆದೇಶ..!

 

Trending News