ಕುಗ್ಗಿದ ಬಿಜೆಪಿ ಉತ್ಸಾಹ: ಪ್ರತಿಭಟನೆಗೆ ಬಾರದ ಬೆಂಗಳೂರು ಶಾಸಕರು

Bengaluru News: ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಕೆಂಡ ಕಾರಿದ ಬಿಜೆಪಿ, INDIA ಮಿತ್ರ ಪಕ್ಷ ಸಭೆ ನಡೆಸಿದ ಸಂದರ್ಭದಲ್ಲಿ IAS ಅಧಿಕಾರಿಗಳನ್ನ ಸಾಂವಿಧಾನಿಕ ಹುದ್ದೆ ಇಲ್ಲದೆ ಇರುವವರಿಗೆ ನಿಯೋಜಿಸಿ ಜನರ ದುಡ್ಡು ಪೋಲು ಮಾಡುತ್ತಿದೆ ಎಂದು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿತ್ತು.

Written by - Prashobh Devanahalli | Edited by - Bhavishya Shetty | Last Updated : Jul 22, 2023, 12:52 PM IST
    • ಅಶ್ವಥ್ ನಾರಾಯಣ ಬಿಟ್ಟರೆ ಇನ್ಯಾರು ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ
    • ವಿರೋಧ ಪಕ್ಷ ಬಿಜೆಪಿ ಇಂದು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ
    • ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಕೆಂಡ ಕಾರಿದ ಬಿಜೆಪಿ
ಕುಗ್ಗಿದ ಬಿಜೆಪಿ ಉತ್ಸಾಹ: ಪ್ರತಿಭಟನೆಗೆ ಬಾರದ ಬೆಂಗಳೂರು ಶಾಸಕರು title=

BJP Protest News: ಬೆಂಗಳೂರು: ವಿರೋಧ ಪಕ್ಷ ಬಿಜೆಪಿ ಇಂದು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರು ಜಿಲ್ಲಾ ಮಟ್ಟದ ಪ್ರತಿಭಟನೆಯನ್ನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದೆ. ಆದರೆ ಜಯನಗರದ ಶಾಸಕ ಸಿಕೆ ರಾಮಾಮೂರ್ತಿ, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ ಬಿಟ್ಟರೆ ಇನ್ಯಾರು ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ.

ಇದನ್ನೂ ಓದಿ:  ಶ್ರಾವಣದಲ್ಲಿ ಈ ರಾಶಿಯವರ ಮೇಲೆ ಕೃಪೆ ತೋರಲಿರುವ ಈಶ್ವರ ! ಕರುಣಿಸುವ ಕೈ ತುಂಬಾ ಹಣ

ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಕೆಂಡ ಕಾರಿದ ಬಿಜೆಪಿ, INDIA ಮಿತ್ರ ಪಕ್ಷ ಸಭೆ ನಡೆಸಿದ ಸಂದರ್ಭದಲ್ಲಿ IAS ಅಧಿಕಾರಿಗಳನ್ನ ಸಾಂವಿಧಾನಿಕ ಹುದ್ದೆ ಇಲ್ಲದೆ ಇರುವವರಿಗೆ ನಿಯೋಜಿಸಿ ಜನರ ದುಡ್ಡು ಪೋಲು ಮಾಡುತ್ತಿದೆ ಎಂದು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿತ್ತು. ವಿಧೇಯಕ ಪ್ರತಿಗಳನ್ನ ಹರೆದು ಸ್ಪೀಕರ್ ಪೀಠಕ್ಕೆ ಎಸೆಯಲಾಯಿತು. ಆಗ ಸ್ಪೀಕರ್ ಖಾದರ್ 10 ಸದಸ್ಯರನ್ನ ಅಮಾನತ್ತು ಮಾಡಿದ್ದರು. ಈ ಕಾರಣಕ್ಕೆ ಬಿಜೆಪಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಲು ತೀರ್ಮಾನ ಮಾಡಿ, ಈ ಭಾಗವಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು.

27 ವಿಧಾನಸಭೆ ಕ್ಷೇತ್ರದಲ್ಲಿ 17 ಕ್ಷೇತ್ರ ಬಿಜೆಪಿ ಶಾಸಕರು ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಇಂದಿನ ಪ್ರತಿಭಟನೆಗೆ ಕೇವಲ 17 ಶಾಸಕರ ಪೈಕಿ ಕೇವಲ 2 ಶಾಸಕರು ಪಾಲ್ಗೊಂಡಿದ್ದರು. ನಿನ್ನೆ ಬಿಜೆಪಿ ಪ್ರಕಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅಶೋಕ್ ಪಾಲ್ಗೊಂಳ್ಳಬೇಕಿತ್ತು. ಆದರೆ ಶಾಸಕರ ಅನುಪಸ್ಥಿತಿ ಪ್ರತಿಭಟನೆ ನೀರಸವಾಗಿತ್ತು.

“ಹೇಳೋದು ವೇದಾಂತ ತಿನ್ನೋದು ಬದನೇಕಾಯಿ”

ಪ್ರತಿಭಟನೆ ಭಾಷಣ ಮಾಡುವ ಸಂದರ್ಭದಲ್ಲಿ ಎಂಎಲ್ ಸಿ ಛಲವಾದಿ ನಾರಾಯಣ ಸ್ವಾಮಿ, “ನಾವು ಕೂಡಾ ಮೂರು ಮುಕ್ಕಾಲು ವರ್ಷ ಸರ್ಕಾರ‌ ಮಾಡಿದ್ವಿ. ಆಗ ಕಾಂಗ್ರೆಸ್ ನವರು ಹುಟುಕಾಟ ಮಾಡ್ತಿದ್ರು. ಪ್ರೊಟೆಸ್ಟ್ ಮಾಡೋಕೆ ಹುಡುಕಾಡ್ತಿದ್ರು. ಏನೂ ಸಿಗಲಿಲ್ಲ. ಆದ್ರೆ ಈ ಸರ್ಕಾರ ಬಂದು ಎರಡು ತಿಂಗಳಲ್ಲಿ 60 ಕಾರಣಗಳು ಸಿಕ್ಕಿವೆ. ಬೇಲ್ ಮೇಲೆ ಇದ್ದವರು, ತಲೆ ಮರೆಸಿಕೊಂಡಿದ್ದವರು ಸಭೆಗೆ‌ ಬಂದಿದ್ರು. ಕಾಂಗ್ರೆಸ್ ನವರು ಐಎಎಸ್ ಅಧಿಕಾರಿಗಳನ್ನ ಆಹ್ವಾನಿಸೋಕೆ ಕಳಿಸಿದ್ರು” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

“ಒಬ್ಬ ಪಾರ್ಲಿಮೆಂಟ್ ಸದಸ್ಯನೂ ಅಲ್ಲ. ಇತ್ತೀಚೆಗೆ ಅನರ್ಹಗೊಂಡಿದ್ದ ವ್ಯಕ್ತಿಯನ್ನು ಕರೆದುಕೊಂಡು ಬರಲು ನೂರು ಕಾರಿನಲ್ಲಿ ಹೋಗಿದ್ದರು” ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದರು. ಇನ್ನು ಇದೇ ಸಂದರ್ಭದಲ್ಲಿ “ಅವಿವೇಕಿ ಸ್ಪೀಕರ್.‌‌‌. ಈಗಷ್ಟೇ ಬಂದಿದ್ದಾರೆ, ಅವರಿಗಿನ್ನೂ ಇವರ ವಿಷಯ ಗೊತ್ತಿಲ್ಲ. ಮಂಗನ‌ ಕೈಗೆ ಮಾಣಿಕ್ಯ ಸಿಕ್ಕಂತೆ ಆಗಿದೆ” ಎಂದರು.

ಇದನ್ನೂ ಓದಿ: 30 ವರ್ಷಗಳ ಬಳಿಕ ಈ ರಾಶಿಯವರ ಬಾಳಲ್ಲಿ ಶ್ರೀಮಂತಿಕೆ ಪ್ರವೇಶ: ಹಣದ ಮಳೆ ಗ್ಯಾರಂಟಿ: ಹೆಜ್ಜೆಹೆಜ್ಜೆಗೂ ನೆರಳಾಗುವನು ಶನಿ

“ಹೇಳೋದು ವೇದಾಂತ ತಿನ್ನೋದು ಬದನೇಕಾಯಿ. ಇದು‌ ಬದನೇಕಾಯಿ ಸರ್ಕಾರ. ನಮ್ಮನ್ನೆಲ್ಲಾ ಬಿಟ್ಟು ಪಿಟಿಸಿಎಲ್ ತೀರ್ಮಾನಿಸಿದ್ದಾರೆ. ಮಾತೆತ್ತಿದ್ರೆ‌ ಸಾಕು ಏನೂ‌ ಕೆಲಸ ಮಾಡಿಲ್ಲ ಬಿಜೆಪಿ ಅವ್ರು ಅಂತಾರೆ. ಹಾಗಾದ್ರೆ ಬಿಜೆಪಿ ಅವಧಿಯ ‌ 17 ಕಾರ್ಯಕ್ರಮ ಯಾಕ್‌ ತೆಗೆದ್ರಿ? ಎಲ್ಲಿಂದ ಬಂದ್ವು ಆ‌ 17 ಕಾರ್ಯಕ್ರಮ ಗಳು?” ಎಂದು ಪ್ರಶ್ನಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News