ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಯಾವತ್ತೂ ವೈಯಕ್ತಿಕವಾಗಿ ಹೇಳಿಲ್ಲ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪದ್ಮನಾಭನಗರದ ದೇವೇಗೌಡರ ನಿವಾಸ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ. ಸಾಧಕ ಬಾಧಕ ನೋಡಿಕೊಂಡು ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಲು ಹೆಚ್.ಡಿ ಕುಮಾರಸ್ವಾಮಿ ನಾವು ಸ್ವಾತಂತ್ರವಾಗಿ ಇದ್ದಾಗಿಯೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ರಾಷ್ಟ್ರೀಯ ನಾಯಕರಿಗೆ ಗೌರವ ಕೊಡಲು ಅಭ್ಯರ್ಥಿಯನ್ನ ಘೋಷಣೆ ಮಾಡಿಲ್ಲ.
ಇದನ್ನೂ ಓದಿ: 64ನೇ ವಯಸ್ಸಿನಲ್ಲಿ 3ನೇ ಬಾರಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ ಸಪ್ತಪದಿ ತುಳಿದ ಸ್ಟಾರ್ ಹೀರೋಯಿನ್!
ಈ ಲೋಕಸಭೆಯಲ್ಲಿ ಮೈತ್ರಿಕೂಟದ ಭಾಗವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಹೊಂದಾಣಿಕೆ ಬೆಳೆದಿದೆ. ಒಬ್ಬ ವ್ಯಕ್ತಿಯ ನಡವಳಿಕೆಯಿಂದ ಯಾವುದೇ ತೀರ್ಮಾನ ಕೈಗೊಳ್ಳುವ ಉದ್ವೇಗಕ್ಕೆ ಒಳಗಾಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಅನ್ನುವ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ನಾನು ಎಂದು ಕೂಡ ಅಭ್ಯರ್ಥಿ ಆಗುತ್ತೇನೆ, ನಾನು ಆಕಾಂಕ್ಷಿ ಎಂದು ಇಲ್ಲಿಯವರೆಗೆ ವ್ಯಕ್ತಪಡಿಸಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿ ನನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದೇನೆ ಎಂದರು.
ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಕುಮಾರಣ್ಣ ಅವರು ಸ್ಪರ್ಧೆ ಮಾಡಿರುತ್ತಾರೆ. ಜನತಾದಳ ಪಕ್ಷದ ಪರವಾಗಿ ಚನ್ನಪಟ್ಟಣ ಮತದಾರರು ಆಶೀರ್ವಾದ ಮಾಡಿದ್ದಾರೆ. ಕುಮಾರಣ್ಣನ ಸ್ವಕ್ಷೇತ್ರ ಆಗಿರುವುದರಿಂದ ಮಾಧ್ಯಮಗಳಲ್ಲಿ ನಿರಂತರವಾಗಿ ನೋಡಿದ್ದೇವೆ.
ನಾನು ಸ್ಪರ್ಧಿಸುತ್ತೇನೆ ಅಂತ ಹೇಳಿಲ್ಲ:
ನಾನು ನಿಲ್ತೇನೆ ಅಂತ ಹೇಳಿಲ್ಲ. ಇದು ಕುಮಾರಣ್ಣ ಅವರ ಸ್ವಕ್ಷೇತ್ರ ದೆಹಲಿಯ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರಿಗೆ ಯಾವುದೇ ರೀತಿಯ ತೀರ್ಮಾನ ತಗೊಳ್ಳಿ ಅಂತ ಹೇಳಿದ್ದಾರೆ. ಆದರೂ ಮೈತ್ರಿಗೆ ತೊಂದರೆ ಆಗಬಾರದು ಅಂತ ನಾವಿದೀವಿ ಎಂದರು
ನಮ್ಮ ತೀರ್ಮಾನ ಏನೇ ಇದ್ರೂ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ತಗೋತೀವಿ.ನಮಗೆ ಸ್ವಾತಂತ್ರ್ಯ ಇದ್ದಾಗಿಯೂ ನಾವು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಇದಕ್ಕೆ ಕಾರಣ ರಾಷ್ಟ್ರೀಯ ನಾಯಕರಿಗೆ ಗೌರವ ಕೊಡಬೇಕು ಅಂತ.ಒಬ್ಬ ವ್ಯಕ್ತಿಯ ನಡವಳಿಕೆ ನೋಡಿ ನಾವು ಯಾವುದೇ ರೀತಿಯ ಆತುರದ ನಿರ್ಧಾರ ಮಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇವೇಗೌಡರು, ಕುಮಾರಣ್ಣ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀವಿ.ನಾನು ಅಭ್ಯರ್ಥಿ ಅಂತ ಎಂದೂ ವೈಯಕ್ತಿಕವಾಗಿ ಹೇಳಿಲ್ಲ. ನನ್ನ ಜವಾಬ್ದಾರಿ ನಿಭಾಯಿಸ್ತಿದ್ದೇನೆ ಕ್ಷೇತ್ರದಲ್ಲಿ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ಮಾಡ್ತೀವಿ.ಎರಡು ಮೂರು ದಿನಗಳ ಹಿಂದೆ ಯೋಗೀಶ್ವರ್ ಜತೆ ನಮ್ಮ ಹಿರಿಯ ಮುಖಂಡರು ಚರ್ಚೆ ಮಾಡಿದ್ರು. ಜೆಡಿಎಸ್ ಚಿನ್ಹೆಯಡಿಯೂ ಸ್ಪರ್ಧೆಗೆ ಆಫರ್ ಕೊಟ್ರು. ಈ ಆಫರ್ ಗೆ ಅವರು ಕುಮಾರಸ್ವಾಮಿ ಅವರನ್ನೂ ಕೇಳಿರಲಿಲ್ಲ. ಇದನ್ನು ನಮ್ಮ ಮುಖಂಡರೇ ನನಗೆ ಹೇಳಿದ್ದರು ಎಂದು ತಿಳಿಸಿದರು.
ಮೈತ್ರಿಗೆ ಕಪ್ಪು ಚುಕ್ಕೆ ಬರಬಾರದು:
ನಾವು ಯೋಗೀಶ್ವರ್ ವಿಚಾರದಲ್ಲಿ ದೊಡ್ಡ ಔದಾರ್ಯತೆ ತೋರಿದ್ದೇವೆ. ನಮ್ಮ ನಾಯಕರು ಯೋಗೀಶ್ವರ್ ಅವರಿಗೆ ಆಹ್ವಾನ ಕೊಟ್ಟಿದ್ದಾರೆ ಇನ್ನೇನು ಮಾಡಬೇಕು?ಯಾವುದೇ ತೀರ್ಮಾನ ಕೈಗೊಳ್ಳಲು ಬಿಜೆಪಿಯ ವರಿಷ್ಠರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಆದರೂ ಮೈತ್ರಿಗೆ ಯಾವುದೇ ರೀತಿಯ ಅಗೌರವ ತೋರಬಾರದು ಅದಕ್ಕಾಗಿ ನಮ್ಮ ನಡೆ ಏನೇ ಇದ್ದರೂ ಪಕ್ಷದ ಚೌಕಟ್ಟಿನ ಒಳಗೆ ಆಗಬೇಕು ಎಂದು ತಿಳಿಸಿದರು.
ಸಿಪಿ ಯೋಗೇಶ್ವರ್ ಅವರ ಕೆಲಸ ಮಾಡಲಿ:
ಸಿಪಿ ಯೋಗೇಶ್ವರ್ ಬಹಳ ಹಿರಿಯರು, ಅನುಭವಸ್ತರು ಇದ್ದಾರೆ ನಾನು ಈ MLA, ಎಂಪಿ ಆಗಬೇಕಿದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಏನು ನಡೆಯಿತು ಎಂದು ಸಾಕ್ಷಿ ಇದೆ.ಪಕ್ಷವನ್ನು ತಳ ಮಟ್ಟದಿಂದ ಕಟ್ಟಬೇಕು ಎಂದು ಕೆಲಸ ಮಾಡುತ್ತಿದ್ದೇನೆ.
ಸಿಪಿ ಯೋಗೇಶ್ವರ್ ಹೇಳಿಕೆಗೆ ಮಾತನಾಡಿದ ಅವರು,ಸುಮ್ನನೇ ಅನುಕಂಪ ಗಿಟ್ಟಿಸಿ ಕೊಳ್ಳಬೇಕೆಂದು ಕುಮಾರಸ್ವಾಮಿ ಅವರು ಅವರ ಮಗನನ್ನ ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನುವುದನ್ನ ಬಿಟ್ಟು ಅವರ ಕೆಲಸ ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ: ದಸರಾ ಕೊನೆಗೊಂಡ 21 ದಿನಗಳಲ್ಲೇ ದೀಪಾವಳಿ ಹಬ್ಬ ಆಚರಿಸೋದು ಏಕೆ?
ಸಿಪಿ ಯೋಗೇಶ್ವರ್ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರೆ ವಿಚಾರಕ್ಕೆ ಮಾತನಾಡಿದ ಅವರು. ಅವರ ನಡೆ ಅವರಿಗೆ ಜೆಡಿಎಸ್ ಅಂದರೆ NDA ನಡೆ.ಜೆಡಿಎಸ್ ಒಂದೇ ತೀರ್ಮಾನ ಮಾಡುವುದಕ್ಕೆ ಆಗಲ್ಲ ಜೆಡಿಎಸ್ ಬಿಜೆಪಿ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.