Loksabha election 2024: ಎಷ್ಟು ಜನ ಸೇರಿ ಸ್ವಂತ ರಾಜಕೀಯ ಪಕ್ಷ ಕಟ್ಟಬಹುದು? ಚುನಾವಣಾ ಆಯೋಗದ ನಿಯಮ ಏನು ಹೇಳುತ್ತೆ?

Loksabha election: ದೇಶದಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಹಾಗಾದರೆ ಎಷ್ಟು ಜನ ಸೇರಿ ಸ್ವಂತ ರಾಜಕೀಯ ಪಕ್ಷ ಕಟ್ಟಬಹುದು? ಇದರ ಬಗ್ಗೆ ಚುನಾವಣಾ ಆಯೋಗದ ನಿಯಮ ಏನು ಹೇಳುತ್ತೆ? ಇದಲ್ಲವನ್ನು ಇಲ್ಲಿ ತಿಳಿಯಿರಿ.. 

Written by - Savita M B | Last Updated : Apr 4, 2024, 03:41 PM IST
  • 18 ನೇ ಲೋಕಸಭೆ ಚುನಾವಣೆಗೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಸಿದ್ಧವಾಗಿವೆ.
  • ಪಕ್ಷ ರಚನೆಗೆ ಇರುವ ಷರತ್ತುಗಳು
  • ಅಲ್ಲದೇ ಪಕ್ಷದ ಬ್ಯಾಂಕ್ ಖಾತೆಯ ವಿವರವನ್ನೂ ದಾಖಲೆಗಳಲ್ಲಿ ನೀಡಬೇಕು.
Loksabha election 2024: ಎಷ್ಟು ಜನ ಸೇರಿ ಸ್ವಂತ ರಾಜಕೀಯ ಪಕ್ಷ ಕಟ್ಟಬಹುದು? ಚುನಾವಣಾ ಆಯೋಗದ ನಿಯಮ ಏನು ಹೇಳುತ್ತೆ?  title=

Loksabha election 2024: 18 ನೇ ಲೋಕಸಭೆ ಚುನಾವಣೆಗೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಸಿದ್ಧವಾಗಿವೆ. ಆದರೆ ರಾಜಕೀಯ ಪಕ್ಷಗಳು ತಮ್ಮ ಪಕ್ಷಕ್ಕೆ ಹೇಗೆ ಹೆಸರಿಡುತ್ತಾರೆ? ಅವರು ತಮ್ಮ ಆಯ್ಕೆಯ ಯಾವುದೇ ಚುನಾವಣಾ ಚಿಹ್ನೆಯನ್ನು ಇಟ್ಟುಕೊಳ್ಳಬಹುದೇ? ಅಥವಾ ಇದಕ್ಕೆ ಚುನಾವಣಾ ಆಯೋಗದ ನಿಯಮಗಳಿವೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.. 

ರಾಜಕೀಯ ಪಕ್ಷ ಕಟ್ಟಿದರೆ ಹೇಗೆ ಮನ್ನಣೆ ಸಿಗುತ್ತದೆ?
ಭಾರತೀಯ ಪ್ರಜೆಯು ರಾಜಕೀಯ ಪಕ್ಷವನ್ನು ರಚಿಸಿದರೆ, ಅವನಿಗೆ ಹೇಗೆ ಮಾನ್ಯತೆ ಸಿಗುತ್ತದೆ.. ವಾಸ್ತವವಾಗಿ, ಪಕ್ಷವನ್ನು ರಚಿಸಿದ ನಂತರ, ನೀವು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದಕ್ಕಾಗಿ ಸಂವಿಧಾನದಲ್ಲಿ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ರಾಜಕೀಯ ಪಕ್ಷಗಳ ರಚನೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ-ರಾಜ್ಯದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಲಿ

ಈ ನಿಯಮಗಳ ಪ್ರಕಾರ, ರಾಜಕೀಯ ಪಕ್ಷವನ್ನು ರಚಿಸಲು, ಚುನಾವಣಾ ಆಯೋಗವು ನೀಡಿದ ನಮೂನೆಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು. ನಂತರ ಅದರ ಪ್ರಿಂಟ್‌ಔಟ್ ತೆಗೆದುಕೊಂಡು ಇತರ ಪ್ರಮುಖ ದಾಖಲೆಗಳೊಂದಿಗೆ 30 ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ಕಳುಹಿಸಬೇಕು. ಈ ಪ್ರಕ್ರಿಯೆಯಲ್ಲಿ, ಶುಲ್ಕವಾಗಿ 10,000 ರೂ. ನೀಡಬೇಕು.. 

ಪಕ್ಷ ರಚನೆಗೆ ಇರುವ ಷರತ್ತುಗಳು:
ಮಾಹಿತಿಯ ಪ್ರಕಾರ, ಪಕ್ಷದ ನೋಂದಣಿಯನ್ನು ಪ್ರಾರಂಭಿಸುವ ಮೊದಲು, ಅದರ ಸಂವಿಧಾನವನ್ನು ತಿಳಿದುಕೊಳ್ಳುವುದು ಅವಶ್ಯಕ. ಇದರಲ್ಲಿ ರಾಜಕೀಯ ಪಕ್ಷದ ಹೆಸರೇನು, ಅದರ ಕಾರ್ಯ ವಿಧಾನ ಏನು, ಪಕ್ಷದ ಅಧ್ಯಕ್ಷರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂದು ಬರೆಯಲಾಗಿದೆ. ಅಲ್ಲದೇ ಪಕ್ಷದಲ್ಲಿ ಪ್ರಮುಖ ಸ್ಥಾನದಲ್ಲಿರುವವರ ಬಗ್ಗೆ ಮಾಹಿತಿ ನೀಡವುದನ್ನು ಹೇಳಲಾಗಿದೆ.. 

ಪಕ್ಷದ ಸಂವಿಧಾನದ ಪ್ರತಿಯಲ್ಲಿ ಎಲ್ಲ ಸದಸ್ಯರ ಸಹಿ ಕಡ್ಡಾಯವಾಗಿರಬೇಕು. ಅಲ್ಲದೇ ಪಕ್ಷದ ಬ್ಯಾಂಕ್ ಖಾತೆಯ ವಿವರವನ್ನೂ ದಾಖಲೆಗಳಲ್ಲಿ ನೀಡಬೇಕು. ಪಕ್ಷದ ಹೆಸರು ಏನೆಂದು ಅಭ್ಯರ್ಥಿಗಳೇ ನಿರ್ಧರಿಸುತ್ತಾರೆ. ಆದರೆ ಆ ಹೆಸರು ಮಾನ್ಯವೋ ಅಲ್ಲವೋ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸುತ್ತದೆ... ಚುನಾವಣಾ ಆಯೋಗವು ಈಗಾಗಲೇ ಹೆಸರು ನೋಂದಾಯಿಸಲಾಗಿದೆಯೇ ಎಂದು ಪರಿಶೀಲಿಸುತ್ತದೆ. ಈಗಾಗಲೇ ಹೆಸರು ನೋಂದಾಯಿಸಿದ್ದರೆ ಆ ಹೆಸರಿನಲ್ಲಿ ಪಕ್ಷವನ್ನು ಮತ್ತೆ ನೋಂದಾಯಿಸಲು ಸಾಧ್ಯವಿಲ್ಲ.  

ಇದನ್ನೂ ಓದಿ-ಏಪ್ರಿಲ್ 6 ರಂದು ಜೆಡಿಎಸ್-ಬಿಜೆಪಿ ಸಮ್ಮಿಲನ ಸಮಾವೇಶ

ಇದಲ್ಲದೇ ರಾಜಕೀಯ ಪಕ್ಷ ಸ್ಥಾಪಿಸಲು ಕನಿಷ್ಠ 500 ಸದಸ್ಯರನ್ನು ಹೊಂದುವುದು ಅಗತ್ಯ. ಅಷ್ಟೇ ಅಲ್ಲ, ಆ ಸದಸ್ಯರು ಬೇರೆ ಯಾವುದೇ ಪಕ್ಷದ ಜತೆ ಒಡನಾಡಬಾರದು. ಇದಕ್ಕಾಗಿ ಅಫಿಡವಿಟ್ ಕೂಡ ನೀಡಬೇಕಾಗಿದ್ದು, ಸದಸ್ಯ ಬೇರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂಬುದನ್ನು ದೃಢಪಡಿಸಬೇಕು.. 

ಚುನಾವಣಾ ಚಿಹ್ನೆ: 
ಪಕ್ಷದ ನೋಂದಣಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ, ಚುನಾವಣಾ ಆಯೋಗವು ಪಕ್ಷಕ್ಕೆ ಚಿಹ್ನೆಯನ್ನು ನೀಡುತ್ತದೆ. ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968 ರ ಅಡಿಯಲ್ಲಿ, ಚುನಾವಣಾ ಆಯೋಗವು ಪಕ್ಷಗಳಿಗೆ ಚಿಹ್ನೆಗಳನ್ನು ನೀಡುತ್ತದೆ.. ಆದರೆ ಇದಕ್ಕೆ ಕೆಲವು ವಿಶೇಷ ನಿಯಮಗಳಿವೆ. ಉದಾಹರಣೆಗೆ, ಚುನಾವಣಾ ಆಯೋಗದಲ್ಲಿ 100 ಕ್ಕೂ ಹೆಚ್ಚು ಚುನಾವಣಾ ಚಿಹ್ನೆಗಳು ಮೀಸಲು ಉಳಿದಿವೆ, ಇದುವರೆಗೆ ಯಾವುದೇ ಪಕ್ಷಕ್ಕೆ ಹಂಚಿಕೆಯಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News