ಮಕ್ಕಳ ಹೆಸರು ಬದಲಾವಣೆ, ತಿದ್ದುಪಡಿ ಕುರಿತು ರಾಜ್ಯ ಹೈಕೋರ್ಟಿನಿಂದ ಮಹತ್ವದ ಆದೇಶ ಪ್ರಕಟ!

High Court: 1969ರಲ್ಲಿ ರೂಪಿಸಲಾಗಿರುವ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆ ಮತ್ತು ತಿದ್ದುಪಡಿ ಬಗ್ಗೆ ಇರುವ ಸಮಸ್ಯೆಗಳಿಗೆ ಇತಿಶ್ರೀ ಹಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. 

Written by - Yashaswini V | Last Updated : Feb 15, 2025, 03:45 PM IST
  • ಎರಡು ವರ್ಷದ ಮಗು ಅಧ್ರಿತ್ ಭಟ್ ಅವರ ಹೆಸರನ್ನು ಶ್ರೀಜಿತ್ ಭಟ್ ಎಂದು ಬದಲಾಯಿಸುವಂತೆ ಮಗುವಿನ ತಾಯಿ ಮನವಿ ಮಾಡಿದ್ದರು.
  • ಜನನ ನೋಂದಣಾಧಿಕಾರಿ ಮನವಿಯನ್ನು ನಿರಾಕರಿಸಿದ ಬಳಿಕ ಮಗುವಿನ ತಾಯಿ ಕೋರ್ಟ್ ಮೆಟ್ಟಿಲೇರಿದ್ದರು.
  • ಅರ್ಜಿ ಆಲಿಸಿದ ನ್ಯಾ. ಎನ್.ಎಸ್. ಸಂಜಯ್ ಗೌಡ ಅವರ ಹೈಕೋರ್ಟ್ ಪೀಠ ಈ ಬಗ್ಗೆ ಶಾಸಕಾಂಗಕ್ಕೆ ಸೂಚಿಸಿ ಆದೇಶ ಹೊರಡಿಸಿದೆ.
ಮಕ್ಕಳ ಹೆಸರು ಬದಲಾವಣೆ, ತಿದ್ದುಪಡಿ ಕುರಿತು ರಾಜ್ಯ ಹೈಕೋರ್ಟಿನಿಂದ ಮಹತ್ವದ ಆದೇಶ ಪ್ರಕಟ! title=

High Court Of Karnataka: ಮಕ್ಕಳ ಹೆಸರು ನಮೂದಿಸುವಾಗ ಆಗುವ ತಪ್ಪು, ಹೆಸರು ಬದಲಾವಣೆ, ಇನ್ಷಿಲ್ ಬದಲಾವಣೆ, ತಿದ್ದುಪಡಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪೋಷಕರು ಅಥವಾ ಪಾಲಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯ ಹೈಕೋರ್ಟ್ ಪರಿಹಾರೋಪಾಯವನ್ನು ಸೂಚಿಸಿದೆ. ಜನನ ಮತ್ತು ಮರಣ ನೋಂದಣಿ ಕಾಯ್ದೆ ಅಥವಾ ತಿದ್ದುಪಡಿ ಮಾಡುವವರೆಗೆ ಏನು ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿ ಕಾರ್ಯವಿಧಾನವನ್ನು ಸೂಚಿಸಿದೆ.

1969ರಲ್ಲಿ ರೂಪಿಸಲಾಗಿರುವ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆ ಮತ್ತು ತಿದ್ದುಪಡಿ ಬಗ್ಗೆ ಇರುವ ಸಮಸ್ಯೆಗಳಿಗೆ ಇತಿಶ್ರೀ ಹಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಇದರಿಂದ ಮಕ್ಕಳ ಹೆಸರು ನಮೂದಿಸುವಾಗ ಆಗುವ ತಪ್ಪು, ಹೆಸರು ಬದಲಾವಣೆ, ಇನ್ಷಿಲ್ ಬದಲಾವಣೆ, ತಿದ್ದುಪಡಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪೋಷಕರು ಅಥವಾ ಪಾಲಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ- Gruha Lakshmi Scheme: ಎರಡು ತಿಂಗಳಿನಿಂದ 'ಗೃಹಲಕ್ಷ್ಮಿ' ಹಣಕ್ಕಾಗಿ ಕಾದಿದ್ದವರಿಗೆ ಗುಡ್​​ನ್ಯೂಸ್

ಉಡುಪಿ ಜಿಲ್ಲೆಯ ಅಂಬಲವಾಡಿಯ ಎರಡು ವರ್ಷದ ಮಗು ಅಧ್ರಿತ್ ಭಟ್ ಅವರ ಹೆಸರನ್ನು ಶ್ರೀಜಿತ್ ಭಟ್ ಎಂದು ಬದಲಾವಣೆ ಮಾಡಬೇಕೆಂದು ಮಗುವಿನ ತಾಯಿ ದೀಪಿಕಾ ಭಟ್ ಮನವಿ ಮಾಡಿದ್ದರು. ಆದರೆ ಉಡುಪಿಯ ಜನನ ನೋಂದಣಾಧಿಕಾರಿ ಮನವಿಯನ್ನು ನಿರಾಕರಿಸಿದರು. ನಂತರ ವಿಷಯ ಕೋರ್ಟ್ ಮೆಟ್ಟಿಲೇರಿತು. ಅರ್ಜಿ ಆಲಿಸಿದ ನ್ಯಾ. ಎನ್.ಎಸ್. ಸಂಜಯ್ ಗೌಡ ಅವರ ಹೈಕೋರ್ಟ್ ಪೀಠ ಈ ಬಗ್ಗೆ ಶಾಸಕಾಂಗಕ್ಕೆ ಸೂಚಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ- ಬಾಡಿಗೆಗೆ ಸಿಗುತ್ತಾರೆ ಬಾಯ್ ಫ್ರೆಂಡ್ಸ್… ಆದರೆ...!

ಮಕ್ಕಳು ಮಾತ್ರವಲ್ಲ, ವಯಸ್ಕರ ಹೆಸರು ತಿದ್ದುಪಡಿ ಮತ್ತು ಬದಲಾವಣೆ ಬಗ್ಗೆ ಕೂಡ ಇದೇ ಪದ್ದತಿಯನ್ನು ಅನುಸರಿಸಬಹುದು. ಸರ್ಕಾರ ಕಾಯಿದೆ ಬದಲಾವಣೆ ಮಾಡುವವರೆಗೆ ಈ ನಿರ್ದೇಶನವನ್ನು ಪಾಲಿಸಿ ಎಂದು ಕೋರ್ಟ್ ತಿಳಿಸಿದೆ. ನಮ್ಮ ದೇಶದಲ್ಲಿ ಕೆಲವರಿಗೆ ಎರಡೆರಡು ಹೆಸರುಗಳಿವೆ. ಇವು ಕೆಲವೊಮ್ಮೆ ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News