ಬೆಂಗಳೂರು : ಕರ್ನಾಟಕದಲ್ಲಿ ಜಾರಿಗೊಳಿಸಲಾಗಿರುವ ಶಕ್ತಿ ಯೋಜನೆಯ ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವುದು ಸಕಾರಾತ್ಮಕ ಕ್ರಮವೇ ಆದರೂ ಅಗತ್ಯವಿರುವ ಪ್ರದೇಶಗಳಿಗೆ ಸಂಪರ್ಕದ ಕೊರತೆಯನ್ನು ನೀಗಿಸಿಲ್ಲ. ಈಗ “ಅಲ್ಲಿ ಸೇರೋಣ” ಮಹಿಳಾ ಉಪಕ್ರಮದ ಅಡಿಯಲ್ಲಿ ಮೊದಲ ಚಲಿಸುವ ಬಸ್ ನಿಲ್ದಾಣ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರಿನ ಮೊದಲ ಮೊಬೈಲ್ ಬಸ್ ನಿಲ್ದಾಣದಲ್ಲಿ ಈ ಮೊಬಿಲಿಟಿಯ ಅಂತರವನ್ನು ನಿವಾರಿಸುವ ಉದ್ದೇಶ ಹೊಂದಿದ್ದು ಅಸಂಘಟಿತ ವಲಯದ ಅಗತ್ಯಗಳನ್ನು ಹೇಗೆ ಪೂರೈಸಬಹುದು ಎಂದು ತೋರಿಸುತ್ತಿದೆ. ಈ ಮೊಬೈಲ್ ಬಸ್ ನಿಲ್ದಾಣವು ಬೆಂಗಳೂರಿನ ಹೊಸ ನಗರ, ಸೀಗೆಹಳ್ಳಿ ಮತ್ತು ಬೈರಸಂದ್ರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸಂಚರಿಸಲಿದೆ.
ಇದನ್ನೂ ಓದಿ: ಸನಾತನ ಧರ್ಮ ವಿರೋಧಿಸುವವರು ಈ ನೆಲದಲ್ಲಿ ಬೇರೂರಿದ್ದಾರೆ : ಖರ್ಗೆ ವಿರುದ್ಧ ಗುಡುಗಿದ ಸೂಲಿಬೆಲೆ
ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ಹಿಂಬದಿಯ ಹೊಸನಗರದಲ್ಲಿ ಸ್ಥಾಪನೆಯಾಗಿದ್ದು, ಅಲ್ಲಿಂದ ಅಕ್ಟೋಬರ್ 9 ರಿಂದ 10ರಂದು ಸೀಗೆಹಳ್ಳಿ ಮತ್ತು ಪ್ರಿಯಾಂಕ ನಗರ, ಅಕ್ಟೋಬರ್ 16 ರಿಂದ 18 ರಂದು ಗುರುವಾರ ಸಂತೆ ಪ್ರದೇಶ ಮತ್ತು ಅಕ್ಟೋಬರ್ 20 ರಿಂದ 21 ರಂದು ಬೈರಸಂದ್ರದಲ್ಲಿ ಇರಲಿದೆ. ಸಾಮಾನ್ಯ ಬಸ್ ನಿಲ್ದಾಣದಂತೆಯೇ ಇರುವ ಈ ಅನುಸ್ಥಾಪನೆಯಲ್ಲಿ ಟಿಕೆಟ್ ಕೌಂಟರ್, ಸೀಟುಗಳು ಮತ್ತು ಕಾಯುವ ಸ್ಥಳ ಮತ್ತು ನ್ಯೂಸ್ ಸ್ಟಾಂಡ್ ಇದೆ.
ಈ ಉಪಕ್ರಮದ ಮೂಲಕ ನಗರದ ಅಸಂಘಟಿತ ಉದ್ಯೋಗಿಗಳಿಗೆ ಪ್ಲಾಟ್ ಫಾರಂ ಸೃಷ್ಟಿಸುತ್ತಿದ್ದವೆ. ಎಲ್ಲರಿಗೂ ಸುಧಾರಿತ ಸಾರಿಗೆ ಸೇವೆಗಳನ್ನು ಮತ್ತು ಇದರಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಿಸಲಿದೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಸಮುದಾಯ ಸಂಯೋಜಕಿ ಬಿ ಸುರೇಶಾ ಕಾಂತಾ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದಲ್ಲಿ ಕ್ಯಾಂಟೀನ್‌ಗೆ ಕೆಟ್ಟ ಹೆಸರು ತಂದಿದ್ದರು: ಸಚಿವ ಬೈರತಿ ಸುರೇಶ್
ವಿಜಯನಗರ, ವೈಟ್ ಫೀಲ್ಡ್ ನ ಮಹಿಳೆಯರ ಪರ ಹೋರಾಟಗಾರ್ತಿ ಮತ್ತು ಟೈಲರ್ ಆಗಿರುವ ಸುಜಾತ ಮಾತನಾಡಿ ನಮ್ಮದು ನಾಲ್ವರ ಕುಟುಂಬ. ನನ್ನ ಪತಿ, ಮಾವ ಮತ್ತು ನಾನು ದ್ವಿಚಕ್ರ ವಾಹನ ಬಳಸುತ್ತೇವೆ. ಪ್ರತಿಯೊಬ್ಬರೂ ವಾಹನ ಬಳಸುವುದು ಇಂಗಾಲದ ಹೊರಹೊಮ್ಮುವಿಕೆಯನ್ನು ಹೆಚ್ಚಿಸುತ್ತದೆ. 50 ರಿಂದ 60 ಜನರನ್ನು ಹೊತ್ತೊಯ್ಯುವ ಬಸ್ ಗಳು ಇಂಗಾಲದ ಹೊರಹೊಮ್ಮುವಿಕೆ ಗಮನಾರ್ಹವಾಗಿ ಕಡಿಮೆ ಮಾಡುವುದಲ್ಲದೆ ಟ್ರಾಫಿಕ್ ಕಡಿಮೆ ಮಾಡುತ್ತದೆ. ಇದು ಪರಿಸರಕ್ಕೆ ಕೂಡ ಸಕಾರಾತ್ಮಕ ಪರಿಣಾಮ ಬೀರುತ್ತದೆ, ಉತ್ತಮ ಮಳೆ, ಹಸಿರು, ಸುಧಾರಿತ ಗಾಳಿಯ ಗುಣಮಟ್ಟ ದೊರೆಯುತ್ತದೆ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.