ಖರ್ಗೆ ಕೊಡುವ ಗ್ಯಾರೆಂಟಿಗೆ ಕಿಮ್ಮತ್ತಿಲ್ಲ, ಗ್ಯಾರೆಂಟಿ ಕಾರ್ಡ್’ಗಳನ್ಬು ಹರಿದು ಬಿಸಾಕಿ: ಬಸವರಾಜ ಬೊಮ್ಮಾಯಿ

ಹಾವೇರಿ: ಇಂದು ಹಾವೇರಿ ವಿಧಾನಸಭಾ ಕ್ಚೇತ್ರದ ಅಗಡಿ, ಕಾಟೇನಹಳ್ಳಿ, ಕಳ್ಳಿಹಾಳ, ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಹುಂಡೇನಹಳ್ಳಿ,ಮೋಟೆಬೆನ್ನೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು.

Written by - Bhavishya Shetty | Last Updated : Apr 22, 2024, 08:50 PM IST
    • ಮಲ್ಲಿಕಾರ್ಜುನ ಖರ್ಗೆಯವರು ಕೊಡುವ ಗ್ಯಾರೆಂಟಿಗೆ ಯಾವ ಕಿಮ್ಮತ್ತಿದೆ?
    • ಚುನಾವಣೆ ಮುಗಿದ ಮೇಲೆ ಅವರು ಮನೆಗೆ ಹೋಗುತ್ತಾರೆ
    • ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ
ಖರ್ಗೆ ಕೊಡುವ ಗ್ಯಾರೆಂಟಿಗೆ ಕಿಮ್ಮತ್ತಿಲ್ಲ, ಗ್ಯಾರೆಂಟಿ ಕಾರ್ಡ್’ಗಳನ್ಬು ಹರಿದು ಬಿಸಾಕಿ: ಬಸವರಾಜ ಬೊಮ್ಮಾಯಿ title=
File Photo

ಹಾವೇರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ನೀಡುವ ಗ್ಯಾರೆಂಟಿ ಕಾರ್ಡ್’ಗಳಿಗೆ ಯಾವುದೇ ಬೆಲೆ ಇಲ್ಲ. ಕಾಂಗ್ರೆಸ್’ಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಚುನಾವಣೆ ಮುಗಿದ ಮೇಲೆ ಅವರು ಮನೆಗೆ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಹಾವೇರಿ ವಿಧಾನಸಭಾ ಕ್ಚೇತ್ರದ ಅಗಡಿ, ಕಾಟೇನಹಳ್ಳಿ, ಕಳ್ಳಿಹಾಳ, ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಹುಂಡೇನಹಳ್ಳಿ,ಮೋಟೆಬೆನ್ನೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು.

ಇದನ್ನೂ ಓದಿ: ಮಲಗುವ ಮುನ್ನ ದಿಂಬಿನ ಕೆಳಗೆ ಈ ಮಸಾಲೆ ವಸ್ತು ಇಡಿ: ಕೇವಲ 5 ದಿನದಲ್ಲಿ ಬಿಳಿಕೂದಲು ಕಡುಕಪ್ಪಾಗುತ್ತೆ! ಮರಳಿ ಬರೋದೇ ಇಲ್ಲ

ಮಲ್ಲಿಕಾರ್ಜುನ ಖರ್ಗೆಯವರು ಕೊಡುವ ಗ್ಯಾರೆಂಟಿಗೆ ಯಾವ ಕಿಮ್ಮತ್ತಿದೆ? ಅವರು ಯಾರು ಗ್ಯಾರೆಂಟಿ ಕೊಡಲಿಕ್ಕೆ?  ಚುನಾವಣೆ ಆದ ಮೇಲೆ ಅವರು ಅಧಿಕಾರಕ್ಕೆ ಬರುವುದಿಲ್ಲ. ಅವರೂ ಮನೆಗೆ ಹೋಗುತ್ತಾರೆ. ಕಾಂಗ್ರೆಸ್’ನವರು ಸ್ಪರ್ಧೆ ಮಾಡಿರುವುದೇ 200 ಸ್ಥಾನಗಳಲ್ಲಿ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕು. ಹೀಗಾಗಿ ಕಾಂಗ್ರೆಸ್ ಕೊಡುವ ಗ್ಯಾರೆಂಟಿ ಕಾರ್ಡ್’ಗಳಿಗೆ ಕಿಮ್ಮತ್ತಿಲ್ಲ. ಅವುಗಳನ್ನು ಹರಿದು ಹಾಕಿ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಪಂಚಾಯತಿ ಮೇಂಬರ್, ಎಂಎಲ್ಎ ಆಯ್ಕೆ ಮಾಡುತ್ತಿಲ್ಲ. ದೇಶವನ್ನು ಯಾರು ಸುರಕ್ಷಿತವಾಗಿಡುತ್ತಾರೆ ಅವರನ್ನು ಆಯ್ಕೆ ಮಾಡುವ ಚುನಾವಣೆ ಇದೆ. ಹತ್ತು ವರ್ಷದಲ್ಲಿ ನರೇಂದ್ರ ಮೋದಿಯವರು ಭಯೋತ್ಪಾದನಾ ಮುಕ್ತ ದೇಶ ಮಾಡಿದ್ದಾರೆ. ಯುಪಿಎ ಅವಧಿಯಲ್ಲಿ ದೇಶದಲ್ಲಿ ಮುಂಬೈ, ದೆಹಲಿಗಳಲ್ಲಿ ಬಾಂಬ್ ಸ್ಪೋಟ ಆದರೆ, ಪಾಕಿಸ್ಥಾನಕ್ಕೆ ಪತ್ರ ಬರೆಯುತ್ತಿದ್ದರು. ಮೋದಿಯವರ ಅವರ ನೆಲಕ್ಕೆ ಹೋಗಿ ಭಯೋತ್ಪಾದಕರನ್ನು ಹೊಡೆದುರುಳಿಸಿದರು. ಮೋದಿಯವರು ಬಂದ ಮೇಲೆ ಮನೆ ಮನೆಗೆ ನೀರು ಕೊಟ್ಟಿದ್ದಾರೆ‌. ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ. ಸ್ವಾತಂತ್ರ್ಯ ಬಂದು ಎಪತ್ತು ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದರು. ನಮ್ಮ ಅವಧಿಯಲ್ಲಿ ಮೂರು ವರ್ಷದಲ್ಲಿ ಮೂವತ್ತು ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ‌ ಎಂದರು.

ರಾಜ್ಯದಲ್ಲಿ  ಕಾಂಗ್ರೆಸ್ ಸರ್ಕಾರ ಎಲ್ಲರಿಗೂ 200 ಯುನಿಟ್ ವಿದ್ಯುತ್ ಕೊಡುವುದಾಗಿ ಹೇಳುತ್ತಾರೆ. ಆದರೆ, ಯಾರಿಗೂ ಇನ್ನೂರು ಯುನಿಟ್ ವಿದ್ಯುತ್ ಕೊಟ್ಟಿಲ್ಲ. ಈ ಸರ್ಕಾರದಲ್ಲಿ ಯಾರೂ ಸುರಕ್ಷಿತ ಆಗಿಲ್ಲ‌. ಪೊಲೀಸ್ ಠಾಣೆಗಳು ಸೆಟಲ್ ಮೆಂಟ್ ಕೇಂದ್ರಗಳಾಗಿವೆ. ಬರ ಬಂದಿದ್ದು, ರೈತರಿಗೆ ಪರಿಹಾರ ಕೊಡದೇ ಇರುವ ದರಿದ್ರ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.

ನಾವು ಅಧಿಕಾರದಲ್ಲಿ ಇದ್ದಾಗ ಪ್ರವಾಹ ಬಂದಾಗ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ. ಕೊಟ್ಟಿದ್ದೆವು. ಬೆಳೆ ಪರಿಹಾರ ಎರಡು ಪಟ್ಟು ಕೊಟ್ಟಿದ್ದೆವು. ಇವರು ಬರಗಾಲದ ಪರಿಹಾರ ನೀಡದೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳ ಹಂಚಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಜೆಡಿಎಸ್

ಪ್ರಧಾನಿ ನರೇಂದ್ರ ಮೋದಿಯವರು ಕೊವಿಡ್ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಟ್ಟಿದ್ದರು. ಈಗಲೂ ರಾಜ್ಯದಲ್ಲಿ ಮೋದಿಯವರೇ ಐದು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೆ ಉಚಿತ ಲಸಿಕೆ ಕೊಡಿಸಿದ್ದಾರೆ. ಕಷ್ಟದಲ್ಲಿದ್ದಾಗ ಅನ್ನ, ನೀರು ಆರೋಗ್ಯ ಕೊಟ್ಟಿರುವ ನರೇಂದ್ರ ಮೋದಿಯವರ ಋಣ ತೀರಿಸುವ ಕೆಲಸ ಮಾಡಬೇಕು. ಮೋದಿಯವರಿಗೆ ಮತ ಹಾಕುವ ಮೂಲಕ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News