Aero India 2025: ಬಾನಂಗಳದಲ್ಲಿಂದು ಲೋಹದ ಹಕ್ಕಿಗಳ ಕಲರವ, ಇಂದಿನಿಂದ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ

ಬೆಂಗಳೂರಿನ ಯಲಹಂಕದಲ್ಲಿ ಇಂದಿನಿಂದ ಪ್ರಾರಂಭವಾಗುವ ಏಷ್ಯಾದ ಅತಿದೊಡ್ಡ ವಾಯು ಪ್ರದರ್ಶನ ಏರ್‌ ಶೋದಲ್ಲಿ ನವ ಭಾರತದ ಮಿಲಿಟರಿ ಶಕ್ತಿ ಮತ್ತು ಸ್ವಾವಲಂಬನೆಯ ಒಂದು ನೋಟವನ್ನು ಜಗತ್ತು ವೀಕ್ಷಿಸಲಿದೆ.

Written by - Chetana Devarmani | Last Updated : Feb 10, 2025, 08:14 AM IST
  • ಇಂದಿನಿಂದ ಏರೋ ಇಂಡಿಯಾ 2025
  • ಏರ್ ಶೋ ಸಕಲ ರೀತಿಯಲ್ಲಿ ಸಿದ್ಧತೆ
  • ಏರ್ ಶೋಗೆ 9.30ಕ್ಕೆ‌ ಅಧಿಕೃತ‌ ಚಾಲನೆ
Aero India 2025: ಬಾನಂಗಳದಲ್ಲಿಂದು ಲೋಹದ ಹಕ್ಕಿಗಳ ಕಲರವ, ಇಂದಿನಿಂದ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ title=

ಬೆಂಗಳೂರು: ಭಾರತವು ತನ್ನ ಅತ್ಯಾಧುನಿಕ ಮಿಲಿಟರಿ ಉಪಕರಣಗಳನ್ನು ಪ್ರದರ್ಶಿಸುವ ಮೂಲಕ ಇಡೀ ಜಗತ್ತಿಗೆ ತನ್ನ ಶಕ್ತಿಯನ್ನು ತೋರಿಸಲು ಸಿದ್ಧವಾಗಿದೆ. ಬೆಂಗಳೂರಿನ ಯಲಹಂಕದಲ್ಲಿ ಇಂದಿನಿಂದ ಪ್ರಾರಂಭವಾಗುವ ಏಷ್ಯಾದ ಅತಿದೊಡ್ಡ ವಾಯು ಪ್ರದರ್ಶನ ಏರ್‌ ಶೋದಲ್ಲಿ ನವ ಭಾರತದ ಮಿಲಿಟರಿ ಶಕ್ತಿ ಮತ್ತು ಸ್ವಾವಲಂಬನೆಯ ಒಂದು ನೋಟವನ್ನು ಜಗತ್ತು ವೀಕ್ಷಿಸಲಿದೆ. ಎರಡು ವರ್ಷಗಳ ಅಂತರದ ನಂತರ ನಡೆಯಲಿರುವ 15ನೇ ಏರ್‌ ಶೋಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಉದ್ಘಾಟಿಸಲಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೋಮವಾರ ಏರ್‌ ಶೋ 2025 ರಲ್ಲಿ 'ಇಂಡಿಯಾ ಪೆವಿಲಿಯನ್' ಅನ್ನು ಉದ್ಘಾಟಿಸಲಿದ್ದಾರೆ. ಏರ್‌ ಶೋ ಭಾರತದ ನಾವೀನ್ಯತೆ, ಕಾರ್ಯತಂತ್ರದ ಸಹಕಾರ ಮತ್ತು ಏರೋಸ್ಪೇಸ್ ಮತ್ತು ರಕ್ಷಣೆಯಲ್ಲಿನ ಶ್ರೇಷ್ಠತೆಗೆ ಸಾಕ್ಷಿಯಾಗಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. 42 ಸಾವಿರ ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಆಯೋಜಿಸಲಾಗಿದ್ದು, 150 ವಿದೇಶಿ ಕಂಪನಿಗಳು ಸೇರಿದಂತೆ 900 ಕ್ಕೂ ಹೆಚ್ಚು ಪ್ರದರ್ಶಕರ ಭಾಗವಹಿಸುವಿಕೆಯೊಂದಿಗೆ, ಇದು ಇದುವರೆಗಿನ ಅತಿದೊಡ್ಡ 'ಏರ್‌ ಶೋ' ಆಗಲಿದೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಬಿಗ್‌ ಶಾಕ್! Namma Metro ಪ್ರಯಾಣ ದರದಲ್ಲಿ ಭಾರೀ ಏರಿಕೆ, ನಾಳೆಯಿಂದಲೇ ಜಾರಿ!!

ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏರ್‌ ಶೋ ಪ್ರದರ್ಶನ ನಡೆಯಲಿದೆ. ಈ ಏರ್‌ ಶೋ ನವಭಾರತದ 'ಶಕ್ತಿ ಮತ್ತು ಸ್ವಾವಲಂಬನೆ'ಯನ್ನು ಪ್ರದರ್ಶಿಸುತ್ತದೆ. ಭಾನುವಾರ ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವೈಮಾನಿಕ ಪ್ರದರ್ಶನದಲ್ಲಿ 90 ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿರುವುದು ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಸಾಮರ್ಥ್ಯಗಳಲ್ಲಿ "ಬೆಳೆಯುತ್ತಿರುವ ಜಾಗತಿಕ ವಿಶ್ವಾಸಕ್ಕೆ ಪುರಾವೆಯಾಗಿದೆ" ಎಂದು ಹೇಳಿದರು.

ಏರ್‌ ಶೋಗೆ ಬಲಿಷ್ಠ, ಸಮರ್ಥ, ಸುರಕ್ಷಿತ ಮತ್ತು ಸ್ವಾವಲಂಬಿ ಭಾರತ ಎಂಬ ದೃಷ್ಟಿಕೋನವನ್ನು ಮುನ್ನಡೆಸುತ್ತದೆ. ಇದು ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಜಾಗತಿಕ ಪಾಲುದಾರಿಕೆಗಳನ್ನು ನಿರ್ಮಿಸುತ್ತದೆ. ಇದು ದೇಶದ ರಕ್ಷಣಾ ಸನ್ನದ್ಧತೆಗೆ ಮಾತ್ರವಲ್ಲದೆ, ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 'ಸುಮಾರು 30 ದೇಶಗಳ' ರಕ್ಷಣಾ ಮಂತ್ರಿಗಳು ಅಥವಾ ಪ್ರತಿನಿಧಿಗಳು ಬಂದಿದ್ದಾರೆ.

43 ದೇಶಗಳ ವಾಯುಪಡೆಯ ಮುಖ್ಯಸ್ಥರ ಉಪಸ್ಥಿತಿಯು ಈ ಕಾರ್ಯಕ್ರಮದ ಮಹತ್ವವನ್ನು ಎತ್ತಿ ತೋರಿಸುತ್ತದೆ. "ಸಾಮಾನ್ಯ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ನಮ್ಮ ಸ್ನೇಹಪರ ರಾಷ್ಟ್ರಗಳೊಂದಿಗೆ ಸಹಕಾರವನ್ನು ಹೆಚ್ಚಿಸುವುದು ಮತ್ತು ಹಂಚಿಕೆಯ ಪ್ರಗತಿಯನ್ನು ಉತ್ತೇಜಿಸುವುದು ನಮ್ಮ ಉದ್ದೇಶವಾಗಿದೆ" ಎಂದು ರಕ್ಷಣಾ ಸಚಿವರು ಹೇಳಿದರು. ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಏರ್‌ ಶೋದಲ್ಲಿ ಕೃತಕ ಬುದ್ಧಿಮತ್ತೆ (AI) ಚಾಲಿತ ಯುದ್ಧ ತಂತ್ರಜ್ಞಾನವನ್ನು ಪ್ರದರ್ಶಿಸಲಿದೆ. 

ಇದನ್ನೂ ಓದಿ: ಶ್ರೀಮಂತ ಉದ್ಯಮಿಯ 2ನೇ ಪತ್ನಿಯಾದ 57 ವರ್ಷದ ಸ್ಟಾರ್‌ ನಟಿ! ಮದುವೆ ವಿಚಾರ 6 ವರ್ಷ ಮುಚ್ಚಿಟ್ಟ ಈಕೆ 4600 ಕೋಟಿ ಸಾಮ್ರಾಜ್ಯಕ್ಕೆ ಒಡತಿ ಕನ್ನಡಿಗರ ಹೃದಯ ಕದ್ದ ಚೆಲುವೆ !

ಯುದ್ಧ ವಿಮಾನಗಳ ಕಸರತ್ತು ಕಣ್ತುಂಬಿಕೊಳ್ಳಲು ಜನರು ಕಾತುರರಾಗಿದ್ದಾರೆ. ಇಂದಿನಿಂದ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ. ಏರೋ ಇಂಡಿಯಾ 15ನೇ ಆವೃತ್ತಿಯ ಏರ್ ಶೋ ಇದಾಗಿದೆ. ಬೆಳಗ್ಗೆ 9.30ಕ್ಕೆ ಏರ್ ಶೋ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ. 

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಸಕಲ ಸಿದ್ಧತೆ ಆಗಿದೆ. ರಕ್ಷಣಾ ಇಲಾಖೆ, ಬಿಬಿಎಂಪಿ, ಬಿಎಂಟಿಸಿ, ಬೆಂಗಳೂರು ಸಂಚಾರ ಪೊಲೀಸರು, ಬೆಂಗಳೂರು ಜಿಲ್ಲಾಡಳಿತ ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಏರ್ ಶೋಗೆ ಆಗಮಿಸುವ ವೀಕ್ಷಕರಿಗೆ ಸುರಕ್ಷತೆ ಮತ್ತು ಮೂಲಸೌಕರ್ಯದ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ 42,438 ಸ್ಕ್ಯಾರ್ ಫೀಟ್ ನಲ್ಲಿ ಏರ್ ಶೋ ನಡೆಯಲಿದೆ. 

ಇದನ್ನೂ ಓದಿ: 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News