ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದ್ದು, ಭಾರತವನ್ನು ಶೇ. 100ರಷ್ಟು ಭ್ರಷ್ಟಾಚಾರ ಮುಕ್ತ ಮಾಡಬೇಕೆಂದರೆ ಶೇ. 100ರಷ್ಟು ಪ್ರಮಾಣಿಕರಾಗಿರುವವರು ನಮ್ಮನ್ನು ಪ್ರತಿನಿಧಿಸಬೇಕು ಎಂದು ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.
ನಮ್ಮ ಸಮಾಜದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಮಾಣಿಕರಿದ್ದರೂ ಅವರು ರಾಜಕೀಯ ಪ್ರವೇಶಿಸಲಿಲ್ಲ ಹಾಗೂ ಚುನಾವಣೆಗೆ ನಿಲ್ಲಲಿಲ್ಲ. ಇಂತಹವರು ಚುನಾವಣೆಗೆ ಸ್ಪರ್ಧಿಸುವುದು, ಸಾಂಪ್ರದಾಯಿಕ ಪಕ್ಷಗಳ ಹಣಬಲಕ್ಕೆ ತೀವ್ರ ಪೈಪೋಟಿ ನೀಡುವುದು ಇಲ್ಲಿಯವರೆಗೂ ಕಷ್ಟಕರವಾಗಿತ್ತು ಎಂದರು.
ಇದನ್ನೂ ಓದಿ: ಮಾರ್ಚ್ ನಲ್ಲಿ "ನಮ್ಮ ಬೆಂಗಳೂರು ಹಬ್ಬ 2023": ಕಲೆ, ಸಿನಿಮಾ, ಆಹಾರ ಮೇಳ ಆಯೋಜನೆ, ಎಲ್ಲಿ ಏನು?
ಈಗ ಎಎಪಿ ಎಲ್ಲವನ್ನೂ ಬದಲಾಯಿಸಿದೆ. ಸಾಮಾನ್ಯ ಹಿನ್ನೆಲೆಯ ಪ್ರಾಮಾಣಿಕ ಜನರನ್ನು ನಾವು ರಾಜಕೀಯಕ್ಕೆ ಕರೆತಂದಿದ್ದೇವೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದೇವೆ. ಜಯಗಳಿಸದ ನಂತರ ಶೇ. 100ರಷ್ಟು ಭ್ರಷ್ಟಾಚಾರರಹಿತ ಆಡಳಿತ ನೀಡುವುದು ಮಾತ್ರವಲ್ಲದೇ, ಪ್ರತಿಯೊಬ್ಬ ನಾಗರಿಕನಿಗಿರುವ ಕನಸು ಕಾಣುವ ಹಾಗೂ ಬೆಳೆಯುವ ಹಕ್ಕುಗಳನ್ನು ಕಾಪಾಡುವುದಾಗಿ ಇವರು ಖಚಿತ ಪಡಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯು ಇಂದು ದೇಶದ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದ್ದು, ಅನೇಕ ರಾಜ್ಯಗಳಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲು ಮತ್ತು ಗೆಲ್ಲಲು ಸಮರ್ಥವಾಗಿದೆ ಎಂದು ತಿಳಿಸಿದರು.
20-ತೇರದಾಳ - ಅರ್ಜುನ ಹಲಗಿಗೌಡರ
23-ಬಾದಾಮಿ - ಶಿವರಾಯಪ್ಪ ಜೋಗಿನ
24-ಬಾಗಲಕೋಟೆ - ರಮೇಶ ಬದ್ನೂರ
3-ಅಥಣಿ - ಸಂಪತ್ ಕುಮಾರ ಶೆಟ್ಟಿ
16-ಬೈಲಹೊಂಗಲ - ಬಿ. ಎಂ. ಚಿಕ್ಕನಗೌಡರ
18-ರಾಮದುರ್ಗ - ಮಲ್ಲಿಕಜಾನ್ ನದಾಫ
72-ಹುಬ್ಬಳ್ಳಿ-ದಾರವಾಡ ಪೂರ್ವ - ಬಸವರಾಜ ಎಸ್ ತೇರದಾಳ
73-ಹುಬ್ಬಳ್ಳಿ-ದಾರವಾಡ ಕೇಂದ್ರ - ವಿಕಾಸ ಸೊಪ್ಪಿನ
75-ಕಲಘಟಗಿ - ಮಂಜುನಾಥ ಜಕ್ಕಣ್ಣವರ
67-ರೋಣ - ಆನೇಕಲ್ ದೊಡ್ಡಯ್ಯ
85-ಬ್ಯಾಡಗಿ - ಎಂ. ಎನ್. ನಾಯಕ
87-ರಾಣೆಬೆನ್ನೂರು - ಹನುಮಂತಪ್ಪ ಕಬ್ಬಾರ
47-ಬಸವಕಲ್ಯಾಣ - ದೀಪಕ ಮಲಗಾರ
48-ಹುಮನಾಬಾದ - ಬ್ಯಾಂಕ್ ರೆಡ್ಡಿ
49-ಬೀದರ ದಕ್ಷಿಣ - ನಸೀಮುದ್ದಿನ್ ಪಟೇಲ
51-ಭಾಲ್ಕಿ - ತುಕಾರಾಮ ನಾರಾಯಣರಾವ್ ಹಜಾರೆ
52-ಔರಾದ - ಬಾಬುರಾವ ಅಡ್ಕೆ
43-ಗುಲ್ಬರ್ಗ ಗ್ರಾಮೀಣ - ಡಾ. ರಾಘವೇಂದ್ರ ಚಿಂಚನಸೂರ
44-ಗುಲ್ಬರ್ಗ ದಕ್ಷಿಣ - ಸಿದ್ದರಾಮ ಅಪ್ಪಾರಾವ ಪಾಟೀಲ
45-ಗುಲ್ಬರ್ಗ ಉತ್ತರ - ಸಯ್ಯದ್ ಸಜ್ಜಾದ್ ಅಲಿ
32-ಇಂಡಿ - ಗೋಪಾಲ ಆರ್ ಪಾಟೀಲ
62-ಗಂಗಾವತಿ - ಶರಣಪ್ಪ ಸಜ್ಜಿಹೊಲ
53-ರಾಯಚೂರು - ಗ್ರಾಮೀಣ ಡಾ. ಸುಭಾಶಚಂದ್ರ ಸಾಂಭಾಜಿ
54-ರಾಯಚೂರು - ಡಿ. ವೀರೇಶ ಕುಮಾರ ಯಾದವ
55-ಮಾನ್ವಿ - ರಾಜಾ ಶಾಮಸುಂದರ ನಾಯಕ
57-ಲಿಂಗಸುಗೂರು - ಶಿವಪುತ್ರ ಗಾಣದಾಳ
58-ಸಿಂಧನೂರು - ಸಂಗ್ರಾಮ ನಾರಾಯಣ ಕಿಲ್ಲೇದ
90-ವಿಜಯನಗರ - ಡಿ. ಶಂಕರದಾಸ
96-ಕೂಡ್ಲಿಗಿ - ಶ್ರೀನಿವಾಸ ಎನ್
104-ಹರಪನಹಳ್ಳಿ - ನಾಗರಾಜ ಎಚ್
99-ಚಿತ್ರಗುರ್ಗ - ಜಗದೀಶ ಬಿ. ಇ
103-ಜಗಳೂರು - ಗೋವಿಂದರಾಜು
105-ಹರಿಹರ - ಗಣೇಶಪ್ಪ ದುರ್ಗದ
106-ದಾವಣಗೆರೆ ಉತ್ತರ - ಶ್ರೀಧರ ಪಾಟೀಲ
130-ತುರುವೇಕೆರೆ - ಟೆನ್ನಿಸ್ ಕೃಷ್ಣ
131-ಕುಣಿಗಲ್ - ಜಯರಾಮಯ್ಯ
135-ಗುಬ್ಬಿ - ಪ್ರಭುಸ್ವಾಮಿ
136-ಸಿರಾ - ಶಶಿಕುಮಾರ್
137-ಪಾವಗಡ - ರಾಮಾಂಜನಪ್ಪ ಎನ್
123-ಶೃಂಗೇರಿ - ರಾಜನ್ ಗೌಡ ಎಚ್.ಎಸ್
196-ಹಾಸನ - ಅಗಿಲೆ ಯೋಗೀಶ್
112-ಭದ್ರಾವತಿ - ಆನಂದ
113-ಶಿವಮೊಗ್ಗ - ನೇತ್ರಾವತಿ ಟಿ
117-ಸಾಗರ - ಕೆ. ದಿವಾಕರ
201-ಮೂಡಬಿದ್ರಿ - ವಿಜಯನಾಥ ವಿಠಲ ಶೆಟ್ಟಿ
203-ಮಂಗಳೂರು ನಗರ ದಕ್ಷಿಣ - ಸಂತೋಷ್ ಕಾಮತ
207-ಸುಳ್ಯ - ಸುಮನಾ
122-ಕಾರ್ಕಳ - ಡ್ಯಾನಿಯಲ್
80-ಶಿರಸಿ - ಹಿತೇಂದ್ರ ನಾಯಕ
186-ಮಳವಳ್ಳಿ - ಬಿಸಿ ಮಹದೇವಸ್ವಾಮಿ
189-ಮಂಡ್ಯ - ಬೊಮ್ಮಯ್ಯ
210-ಪಿರಿಯಾಪಟ್ಟಣ - ರಾಜಶೇಖರ್ ದೊಡ್ಡಣ್ಣ
217-ಚಾಮರಾಜ - ಮಾಲವಿಕಾ ಗುಬ್ಬಿವಾಣಿ
218-ನರಹಿಂಹರಾಜ - ಧರ್ಮಶ್ರೀ
220-ಟಿ. ನರಸಿಪುರ - ಸಿದ್ದರಾಜು
182-ಮಾಗಡಿ - ರವಿಕಿರಣ್ ಎಂ.ಎನ್
183-ರಾಮನಗರ - ನಂಜಪ್ಪ ಕಾಳೇಗೌಡ
184-ಕನಕಪುರ - ಪುಟ್ಟರಾಜು ಗೌಡ
185-ಚನ್ನಪಟ್ಟಣ - ಶರತ್ ಚಂದ್ರ
179-ದೇವನಹಳ್ಳಿ - ಶಿವಪ್ಪ ಬಿ.ಕೆ
180-ದೊಡ್ಡಬಳ್ಳಾಪುರ - ಪುರುಷೋತ್ತಮ
181-ನೆಲಮಂಗಲ - ಗಂಗಬೈಲಪ್ಪ ಬಿ.ಎಂ
140-ಬಾಗೇಪಲ್ಲಿ - ಮಧುಸೀತಪ್ಪ
143-ಚಿಂತಾಮಣಿ - ಸಿ. ಬೈರೆಡ್ಡಿ
146-ಕೊಲಾರ್ ಗೋಲ್ಡ್ ಫೀಲ್ಡ್ - ಆರ್. ಗಗನ ಸುಕನ್ಯ
149-ಮಾಲೂರು - ರವಿಶಂಕರ್ ಎಂ
155-ದಾಸರಹಳ್ಳಿ - ಕೀರ್ತನ್ ಕುಮಾರ
156-ಮಹಾಲಕ್ಷ್ಮಿ ಬಡಾವಣೆ - ಶಾಂತಲಾ ದಾಮ್ಲೆ
157-ಮಲ್ಲೇಶ್ವರ - ಸುಮನ್ ಪ್ರಶಾಂತ್
158-ಹೆಬ್ಬಾಳ - ಮಂಜುನಾಥ ನಾಯ್ಡು
159-ಪುಲಕೇಶಿನಗರ - ಸುರೇಶ್ ರಾಥೋಡ್
161-ಸಿ.ವಿ. ರಾಮನ್ ನಗರ - ಮೋಹನ ದಾಸರಿ
162-ಶಿವಾಜಿನಗರ - ಪ್ರಕಾಶ್ ನೆಡುಂಗಡಿ
163-ಶಾಂತಿನಗರ - ಕೆ ಮಥಾಯ್
165-ರಾಜಾಜಿನಗರ - ಬಿಟಿ ನಾಗಣ್ಣ
167-ವಿಜಯನಗರ - ಡಾ ರಮೇಶ್ ಬೆಲ್ಲಂಕೊಂಡ
169-ಚಿಕ್ಕಪೇಟೆ - ಬ್ರಿಜೇಶ್ ಕಾಳಪ್ಪ
171-ಪದ್ಮನಾಭನಗರ - ಅಜಯ್ ಗೌಡ
172-ಬಿ.ಟಿ.ಎಂ ಬಡಾವಣೆ - ಶ್ರೀನಿವಾಸ್ ರೆಡ್ಡಿ
175-ಬೊಮ್ಮನಹಳ್ಳಿ - ಸೀತಾರಾಮ್ ಗುಂಡಪ್ಪ
ಇದನ್ನೂ ಓದಿ: Uri Gowda Nanje Gowda Movie : 'ಉರಿಗೌಡ ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವಿಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.