ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳಲು ನೀವೂ ಒಂದು ದಿನ ಬಿಳಿಯ ಮೇಲಂಗಿ ಧರಿಸಿ- ಮೋದಿಗೆ ಏಮ್ಸ್ ವೈದ್ಯರ ಪತ್ರ

     

Last Updated : Dec 24, 2017, 04:19 PM IST
ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳಲು ನೀವೂ ಒಂದು ದಿನ ಬಿಳಿಯ ಮೇಲಂಗಿ ಧರಿಸಿ- ಮೋದಿಗೆ ಏಮ್ಸ್ ವೈದ್ಯರ ಪತ್ರ title=

ನವದೆಹಲಿ:ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳಲು ನೀವೂ ಒಂದು ದಿನ ಬಿಳಿಯ ಮೇಲಂಗಿ ಧರಿಸಿ ವೈದ್ಯರಾಗಿ  ಎಂದು ಏಮ್ಸ್ ವೈದ್ಯರ ಸಂಘದ  ಅಧ್ಯಕ್ಷ ಹರ್ಜಿತ್ ಸಿಂಗ್ ಭಟ್ಟಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಇತ್ತೀಚಿಗೆ ರಾಜಸ್ಥಾನದಲ್ಲಿ ವೈದ್ಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ  ಹಮ್ಮಿಕೊಂಡಿದ್ದ  ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರಧಾನಿಗಳಿಗೆ ಪತ್ರ ಬರೆದಿರುವ ವೈದ್ಯರು "ನಿಮ್ಮಂತ ಕ್ರಿಯಾಶೀಲ ಪ್ರಧಾನಿಯನ್ನು ಪಡೆದಿರುವುದಕ್ಕೆ ನಾವು ಅದೃಷ್ಟವಂತರು ಆದ್ದರಿಂದ ನೀವು ನಮ್ಮ (ವೈದ್ಯರ) ರೀತಿ ಒಂದು ದಿನ ಬಿಳಿ ಮೇಲಂಗಿ ಧರಿಸಿ ವೈದ್ಯರಂತೆ ಆಸ್ಪತ್ರೆಯಲ್ಲಿ ಸಮಯವನ್ನು ಕಳೆಯಿರಿ ಆಗ ಸರ್ಕಾರಿ ವೈದ್ಯರು ಅನುಭವಿಸುವ ಕಷ್ಟಗಳು ನಿಮಗೆ ಅರ್ಥವಾಗುತ್ತವೆ ಅಲ್ಲದೆ ಆರೋಗ್ಯ ವಲಯ ಮೂಲಭೂತ ಸೌಕರ್ಯಗಳಿಲ್ಲದೆ ಪಡುವ ಯಾತನೆಯನ್ನು ನೀವು ತಿಳಿಯಬಹುದು" ಎಂದು ಪತ್ರದಲ್ಲ್ಲಿ ವೈದ್ಯರು ತಿಳಿಸಿದ್ದಾರೆ.

ಇನ್ನು ಮುಂದುವರೆದು "ಒಂದು ದಿನ ನೀವು ಸರ್ಕಾರಿ ವೈದ್ಯರಾಗಿ ಆಸ್ಪತ್ರೆಯಲ್ಲಿ ಕಳೆದರೆ ಅದು ಖಂಡಿತವಾಗಿ ಆರೋಗ್ಯವಲಯದ ಬದಲಾವಣೆಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ."

ವೈದ್ಯರು ಡಿಸೆಂಬರ್ 16 ರಂದು ವಿವಿಧ ಬೇಡಿಕೆಗಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ  ರೇಷ್ಮಾ ಕಾಯಿದೆ ಮೂಲಕ ಸುಮಾರು 86 ಸರ್ಕಾರಿ ವೈದ್ಯರನ್ನು ರಾಜಸ್ತಾನ ಸರ್ಕಾರ ಬಂಧಿಸಿತ್ತು ಈ ಹಿನ್ನಲೆಯಲ್ಲಿ   ಈ ಪ್ರತಿಭಟನೆ ನ್ಯಾಯಯುತವಾದದ್ದು ಎಂದು ಬೆಂಬಲಿಸಿ ಏಮ್ಸ್ ನ ವೈದ್ಯರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ.   

Trending News