ರಾಂಪುರ್ (ಉತ್ತರ ಪ್ರದೇಶ): ರಾಂಪುರದ ಹಾಜಿಪುರ ಮೊಹಲ್ಲಾದಲ್ಲಿ ವರದಕ್ಷಿಣೆಗಾಗಿ ಮಹಿಳೆ ಮತ್ತು ಆಕೆಯ ಮೂರು ತಿಂಗಳ ಮಗಳಿಗೆ ಅತ್ತೆ-ಮಾವನೆ ಜೀವಂತವಾಗಿ ಬೆಂಕಿ ಹಚ್ಚಿರುವ ಮನಕಲಕುವ ಘಟನೆ ನಡೆದಿದೆ.
ತನ್ನ ಸಹೋದರಿ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದಳು ಎಂದು ಸಂತ್ರಸ್ತೆಯ ಸಹೋದರ ಮೊಹಮ್ಮದ್ ಜಾವೇದ್ ಹೇಳಿದ್ದಾರೆ. "ಅವಳು 3 ವರ್ಷದ ಮಗ ಮತ್ತು ಮಗಳು 3 ತಿಂಗಳ ಮಗಳನ್ನು ಹೊಂದಿದ್ದಳು. ಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ ತೀವ್ರ ಹಿಂಸೆ ನೀಡುತ್ತಿದ್ದರಿಂದ ಆಕೆ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದಳು. ಆದರೆ ಇತ್ತೀಚಿಗೆ ಅವರು ಆಕೆಯನ್ನು ಮನೆಗೆ ಕರೆದೊಯ್ದಿದ್ದರು. ಆಕೆಗೆ ಚಿತ್ರ ಹಿಂಸೆ ನೀಡುತ್ತಿದ್ದ ಗಂಡನ ಮನೆಯವರು ಬುಧವಾರ ಬೆಳಿಗ್ಗೆ ಆಕೆ ಮತ್ತು ಆಕೆಯ 3 ತಿಂಗಳ ಮಗಳನ್ನು ಸಜೀವ ದಹನ ಮಾಡಿದ್ದಾರೆ" ಎಂದು ಜಾವೇದ್ ಆರೋಪಿಸಿದ್ದಾರೆ.
ಮೃತ ದುರ್ದೈವಿ ಶಬ್ನಮ್ ಮತ್ತು ಅವಳ ಮಗಳು ಇರುವ ಸ್ಥಳದ ಬಗ್ಗೆ ಆಕೆಯ ತಂದೆ ಮನೆಯವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ನೆರೆಹೊರೆಯವರಿಂದ ಈ ಬಗ್ಗೆ ತಿಳಿದು ಬಂದಿದೆ ಎಂದು ಮೊಹಮ್ಮದ್ ಜಾವೇದ್ ಹೇಳಿದ್ದಾರೆ. ಜಾವೇದ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ಬಗ್ಗೆ ವರದಕ್ಷಿಣೆ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಶರ್ಮಾ ಹೇಳಿದರು.