ಶಿಕ್ಷಕರಿಗೆ ಶಾಕ್ ನೀಡಿದ ಸರ್ಕಾರದ ಹೊಸ ಆದೇಶ : ಜ.31 ರೊಳಗೆ ಈ ಕೆಲಸ ಮಾಡದೇ ಹೋದಲ್ಲಿ ವೇತನಕ್ಕೆ ಬ್ರೇಕ್, ಬಡ್ತಿ ತಡೆ, ವರ್ಗಾವಣೆಯ ಎಚ್ಚರಿಕೆ

ಇದೀಗ ರಾಜ್ಯದ ಮೂಲ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಶಿಕ್ಷಕರ ಆಸ್ತಿ ವಿವರ ಬಹಿರಂಗಪಡಿಸಲು ಸರ್ಕಾರ ಗಡುವು ನೀಡಿದೆ.  ಒಂದು ವೇಳೆ ನಿಗದಿತ ದಿನಾಂಕದ ಒಳಗೆ ಈ ಮಾಹಿತಿಯನ್ನು ನೀಡದೆ ಹೋದಲ್ಲಿ ಅಂಥಹ ಶಿಕ್ಷಕರಿಗೆ ವೇತನ ನೀಡಲಾಗುವುದಿಲ್ಲ.

Written by - Ranjitha R K | Last Updated : Jan 15, 2025, 12:24 PM IST
  • ಆಸ್ತಿ ಘೋಷಣೆಗೆ ಸಂಬಂಧಿಸಿದಂತೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ
  • ಆದಾಯ ಮೀರಿದ ಗಳಿಕೆಯ ಮೇಲೆ ಸರ್ಕಾರದ ಕಣ್ಣು
  • ಶಿಕ್ಷಕರ ಆದಾಯದ ಮೇಲೂ ಸರ್ಕಾರ ದೃಷ್ಟಿ
ಶಿಕ್ಷಕರಿಗೆ ಶಾಕ್ ನೀಡಿದ ಸರ್ಕಾರದ ಹೊಸ ಆದೇಶ : ಜ.31 ರೊಳಗೆ ಈ ಕೆಲಸ ಮಾಡದೇ ಹೋದಲ್ಲಿ ವೇತನಕ್ಕೆ ಬ್ರೇಕ್, ಬಡ್ತಿ ತಡೆ, ವರ್ಗಾವಣೆಯ ಎಚ್ಚರಿಕೆ  title=

ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಆಸ್ತಿ ಘೋಷಣೆಗೆ ಸಂಬಂಧಿಸಿದಂತೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರಗಿಸುತ್ತಿದೆ. ಆದಾಯ ಮೀರಿದ ಗಳಿಕೆಯ ಮೇಲೆ ಸರ್ಕಾರ ಕಣ್ಣಿಟ್ಟಿದೆ. ಈ ಮೂಲಕ ಭ್ರಷ್ಟಾಚಾರಿಗಳ ಆದಾಯದ ಮೇಲೆ ತೀವ್ರ ನಿಗಾ ಇಟ್ಟಿದೆ. ಸರ್ಕಾರಿ ನೌಕರರು ಅಧಿಕಾರಿಗಳ ರೀತಿಯೇ ಶಿಕ್ಷಕರ ಆದಾಯದ ಮೇಲೂ ಸರ್ಕಾರ ದೃಷ್ಟಿ ನೆಟ್ಟಿದೆ. 

ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಮೂಲ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಶಿಕ್ಷಕರ ಆಸ್ತಿ ವಿವರ ಬಹಿರಂಗಪಡಿಸಲು ಉತ್ತರ ಪ್ರದೇಶ ಸರ್ಕಾರ ಗಡುವು ನೀಡಿದೆ.  ಶಿಕ್ಷಕರು ಜನವರಿ 31 ರೊಳಗೆ ಮಾನವ ಸಂಪದ ಪೋರ್ಟಲ್‌ನಲ್ಲಿ ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಅಪ್‌ಲೋಡ್ ಮಾಡಬೇಕಾಗಿದೆ. ಒಂದು ವೇಳೆ ನಿಗದಿತ ದಿನಾಂಕದ ಒಳಗೆ ಈ ಮಾಹಿತಿಯನ್ನು ನೀಡದೆ ಹೋದಲ್ಲಿ ಅಂಥಹ ಶಿಕ್ಷಕರಿಗೆ ವೇತನ ನೀಡಲಾಗುವುದಿಲ್ಲ. ಅಷ್ಟೇ ಅಲ್ಲ, ಅವರ ಬಡ್ತಿಯನ್ನು ಕೂಡಾ ತಡೆಹಿಡಿಯಲಾಗುವುದು. ಈ ಕುರಿತು ಮೂಲ ಶಿಕ್ಷಣ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಮಹಾಕುಂಭ ಮೇಳದಿಂದ ಯುಪಿ ಸರ್ಕಾರಕ್ಕೆ ಬರುವ ಆದಾಯವೆಷ್ಟು?

ಆಸ್ತಿ ವಿವರ: 
ಪ್ರಾಥಮಿಕ ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಹೆಸರಿನಲ್ಲಿ ಕಳೆದ ಸೋಮವಾರವೇ ಈ ಆದೇಶ ಹೊರಡಿಸಲಾಗಿದೆ. ಉತ್ತರ ಪ್ರದೇಶದ ಉದ್ಯೋಗಿ ನಡವಳಿಕೆ ನಿಯಮಗಳು-1956 ರ ನಿಯಮ 24 ರ ಪ್ರಕಾರ ಮಾನವ ಸಂಪದ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಆ ಆದೇಶದಲ್ಲಿ ತಿಳಿಸಲಾಗಿದೆ. ವರದಿಗಳ ಪ್ರಕಾರ, ಇಲಾಖೆಯು ಈ ವಿಷಯದಲ್ಲಿ 17 ಡಿಸೆಂಬರ್ 2024 ರಂದು ಸುತ್ತೋಲೆ ಹೊರಡಿಸಿದೆ. ಇದರಲ್ಲಿ 4ನೇ ಶ್ರೇಣಿಯ ಇಲಾಖಾ ನೌಕರರನ್ನು ಹೊರತುಪಡಿಸಿ, ಎಲ್ಲಾ ಅಧಿಕಾರಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ಸಂಪೂರ್ಣ ವಿವರಗಳನ್ನು ನೀಡುವಂತೆ ತಿಳಿಸಲಾಗಿದೆ.

ಕೊನೆಯ ದಿನಾಂಕ ಯಾವಾಗ?
ಜನವರಿ 31, 2025 ರೊಳಗೆ ಅದನ್ನು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಲು ಸೂಚನೆಗಳನ್ನು ನೀಡಲಾಗಿದೆ. ಈ ಆದೇಶದ 27 ದಿನಗಳ ನಂತರವೂ ಕೇವಲ 18 ರಿಂದ 19 ರಷ್ಟು ಇಲಾಖೆ ನೌಕರರು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಂಕಿಅಂಶಗಳ ಪ್ರಕಾರ, ಜನವರಿ 12 ರವರೆಗೆ 1,67,265 ಶಿಕ್ಷಕರಲ್ಲಿ 6,466 ಶಿಕ್ಷಕರು ಮಾತ್ರ ತಮ್ಮ ಆಸ್ತಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಿದ್ದಾರೆ.

ಇದನ್ನೂ ಓದಿ : ಕೊಹಿನೂರ್‌ ವಜ್ರದ ಮೊದಲ ಮಾಲೀಕ ಯಾರು ಗೊತ್ತಾ? ಇದರ ಇಂದಿನ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತಿರಿ..!!!

ಆಸ್ತಿ ಘೋಷಣೆ:
ವರದಿಗಳನ್ನು ನಂಬುವುದಾದರೆ, ಇಲಾಖೆ ಸಿಬ್ಬಂದಿ ಆಸ್ತಿ ಘೋಷಣೆ ಬಗ್ಗೆ ಸರ್ಕಾರ ಗಂಭೀರವಾಗಿದೆ. ಜನವರಿ 31ರೊಳಗೆ ಆಸ್ತಿ ವಿವರ ನೀಡುವಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಮೂಲ ಶಿಕ್ಷಣ ನಿರ್ದೇಶಕರು ಮತ್ತೊಮ್ಮೆ ಆದೇಶ ಹೊರಡಿಸಿದ್ದು, ಚರ ಮತ್ತು ಸ್ಥಿರಾಸ್ತಿಗಳ ಮಾಹಿತಿ ಅಪ್‌ಲೋಡ್ ಮಾಡದ ಶಿಕ್ಷಕರ ವಿರುದ್ಧ ಬಡ್ತಿ ತಡೆ, ವರ್ಗಾವಣೆ, ವೇತನ ಪಾವತಿ ಸೇರಿದಂತೆ ಇತರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News