ನವದೆಹಲಿ: ಅಲಹಾಬಾದ್ ಹೈಕೋರ್ಟ್ ಉನ್ನಾವೋ ಅತ್ಯಾಚಾರ ಘಟನೆಯಲ್ಲಿ ಇಂದು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರನ್ನು ಬಂಧಿಸಲು ಪ್ರಸ್ತಾಪಿಸಿದೆಯೇ ಎಂದು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಬಿ.ಬೊಸೇಲ್ ಮತ್ತು ನ್ಯಾಯಮೂರ್ತಿ ಸುನೀತ್ ಕುಮಾರ್ರವರ ಪೀಠವು ಹಿರಿಯ ವಕೀಲ ಗೋಪಾಲ್ ಸ್ವರೂಪ್ ಚತುರ್ವೇದಿ ಅವರ ನ್ಯಾಯಾಲಯಕ್ಕೆ ಸಲ್ಲಿಸಿದ ಸಾಮೂಹಿಕ ಅತ್ಯಾಚಾರದ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ನಾಳೆ ವಿವರವಾಗಿ ವಿಚಾರಣೆಯನ್ನು ನಡೆಸಲಿದೆ ಎಂದು ಹೇಳಿದೆ.
ಈ ಪ್ರಕರಣದಲ್ಲಿ ನ್ಯಾಯಾಲಯವು ಪೊಲೀಸ್ ಕ್ರಮವನ್ನು ಸಹ ಪ್ರಶ್ನಿಸಿದೆ, ನ್ಯಾಯಾಲಯದ ನಿರ್ದೇಶನದ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ರಾಘವೇಂದ್ರ ಸಿಂಗ್ ಉಪಸ್ಥಿತರಿದ್ದು, ಆಗಸ್ಟ್ 17, 2017 ರಂದು, ಎಂಎಲ್ಎ ವಿರುದ್ಧ ಇರುವ ಅತ್ಯಾಚಾರ ಆರೋಪಗಳಿಗೆ ಸಂಬಂಧಪಟ್ಟ ವಿಚಾರಗಳ ಅರ್ಜಿಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಲು ಉನ್ನಾವೊದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಆದರೆ ಇದಕ್ಕೆ ಉತ್ತರವಾಗಿ ನ್ಯಾಯಪೀಠವು ಕೇಸಗೆ ಸಂಬಂಧಿಸಿದ ಹಾಗೆ ಯಾರಾದರನ್ನು ಬಂಧಿಸಲ್ಪಟ್ಟಿದೆಯೇ ಎಂದು ಕೋರ್ಟ್ ಪ್ರಶ್ನಿಸಿದೆ.ಇದಕ್ಕೆ ಅವರು ಎಂಎಲ್ಎ ಸಹೋದರ ಸೇರಿದಂತೆ ಮೂರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರಿಸಿದರು. ಆಗ ಮದ್ಯಪ್ರವೆಶಿಸಿದ ಪೀಠವು ಸರ್ಕಾರವು ಸೆಂಗಾರ್ನನ್ನು ಬಂಧಿಸಲು ಇವರೆಗೂ ಪ್ರಸ್ತಾಪಿಸಿದೆಯೇ ಎಂದು ಅಡ್ವೊಕೇಟ್ ಜನರಲ್ ರನ್ನು ಪ್ರಶ್ನಿಸಿದೆ.ಆಗ ಅಡ್ವೊಕೇಟ್ ಜನರಲ್ ಈ ನಿಟ್ಟಿನಲ್ಲಿ ಯಾವುದೇ ಹೇಳಿಕೆ ನೀಡಲು ಅವರು ಸ್ಥಾನವಿಲ್ಲ ಎಂದರು.ಅಲ್ಲದೆ ಈ ಕುರಿತಾಗಿ ದೂರುದಾರರು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ ನಂತರ ಪೊಲೀಸರು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ.