Shocking News: ಸಂಗಾತಿ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನಿಗೆ 7 ಬಾರಿ ಕಚ್ಚಿದ ನಾಗಿಣಿ! ಮುಂದೇನಾಯ್ತು?

Snake Bite 7 Times: ಪ್ರತಿ ಬಾರಿ ಹಾವು ಕಚ್ಚಿದಾಗ ಕುಟುಂಬ ಸದಸ್ಯರು ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಪ್ರತಿ ಸಲ ಹೇಗಾದರೂ ಮಾಡಿ ಸಾವಿನ ದವಡೆಯಿಂದ ಆತ ಪಾರಾಗುತ್ತಾನೆ, ಆದರೆ, ವ್ಯಕ್ತಿ ಇದೀಗ ಇಡೀ ಜೀವನ ಭಯದಲ್ಲಿ ಕಳೆಯುವ ಪರಿಸ್ಥಿತಿ ಎದುರಾಗಿದೆ.  

Written by - Nitin Tabib | Last Updated : Apr 16, 2022, 06:09 PM IST
  • ಜೋಡಿ ಹಾವುಗಳ ಮೇಲೆ ದೊಣ್ಣೆಯಿಂದ ದಾಳಿ ಮಾಡಿದ ವ್ಯಕ್ತಿ
  • ಸಂಗಾತಿ ಹಾವಿನ ಸಾವಿನ ಸೇಡು ತೀರಿಸಿಕೊಳ್ಳಲು ಮುಂದಾದ ನಾಗಿಣಿ.
  • ದಾಳಿ ನಡೆಸಿದ ವ್ಯಕ್ತಿಯ ಮೇಲೆ ಸತತ 7 ಬಾರಿ ದಾಳಿ ನಡೆಸಿದ ನಾಗಿಣಿ
Shocking News: ಸಂಗಾತಿ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನಿಗೆ 7 ಬಾರಿ ಕಚ್ಚಿದ ನಾಗಿಣಿ! ಮುಂದೇನಾಯ್ತು? title=
Snake Bite 7 Times

Snake Bite 7 Times: ಒಬ್ಬ ವ್ಯಕ್ತಿಯು ಹಾವನ್ನು ಕೊಂದರೆ, ಆ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳುವವರೆಗೆ ಸಂಗಾತಿ ಹಾವು ಶಾಂತವಾಗಿ ಕುಳಿತುಕೊಳ್ಳುವುದಿಲ್ಲ ಎಂಬುದನ್ನು ನೀವು ಚಲನಚಿತ್ರಗಳಲ್ಲಿ ಹೆಚ್ಚಾಗಿ ನೋಡಿರಬಹುದು. ಆದರೆ, ನಿಜ ಜೀವನದಲ್ಲಿ ಇಂತಹದೊಂದು ಅಚ್ಚರಿಯ ಘಟನೆ ನಡೆದ ಪ್ರಕರಣ ಉತ್ತರ ಪ್ರದೇಶದ ರಾಮಪುರ್  ಜಿಲ್ಲೆಯಿಂದ ವರದಿಯಾಗಿದೆ. ಜಿಲ್ಲೆಯ  ಸ್ವರ್ ಠಾಣಾ ಕ್ಷೇತ್ರದಲ್ಲಿ ವಾಸಿಸುವ ವ್ಯಕ್ತಿಯೊಬ್ಬ ತನ್ನ ಸಂಗಾತಿ ಸಾವಿನ ಸೇಡು ತೀರಿಸಿಕೊಳ್ಳಲು ಹಾವೊಂದು ತನಗೆ 7 ಬಾರಿ ಕಚ್ಚಿದೆ ಎಂದು ಹೇಳಿಕೊಂಡಿದ್ದಾನೆ.

ವ್ಯಕ್ತಿಯ ವಿಚಿತ್ರ ವಾದ
ವ್ಯಕ್ತಿಯ ಈ ಆಘಾತಕಾರಿ ಹೇಳಿಕೆಯು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿ ಬಾರಿ ಹಾವು ಕಚ್ಚಿದಾಗ, ಆತನ ಕುಟುಂಬ ಸದಸ್ಯರು ಪ್ರತಿ ಬಾರಿ ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎಂದು ವ್ಯಕ್ತಿ ಹೇಳಿದ್ದಾನೆ. ಪ್ರತಿ ಬಾರಿಯೂ ಸಾವಿನಿಂದ ಹೇಗೋ ಪಾರಾಗುತ್ತೇನೆ ಎಂದು ವ್ಯಕ್ತಿ ಹೇಳಿದ್ದಾನೆ, ಆದರೆ ಇದೀಗ ಆತ ಸಂಪೂರ್ಣ ಭೀತಿಯಲ್ಲಿಯೇ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದು ವ್ಯಕ್ತಿ ಹೇಳಿದ್ದಾನೆ. ಹಾವು ತನ್ನ ಮೇಲೆ ದಾಳಿ ಮಾಡುವ ಭೀತಿಯಿಂದ ಕೂಲಿ ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗಲು ಇದೀಗ ಭಯವಾಗುತ್ತಿದೆ ಎಂದು ವ್ಯಕ್ತಿ ಹೇಳಿದ್ದಾನೆ.

ಇದನ್ನೂ ಓದಿ-Shanghai Lockdown: ಕೊರೊನಾ ಲಾಕ್ಡೌನ್ ನಲ್ಲಿ ಮನೆಯಲ್ಲಿ ಬಂಧಿಯಾದ ಜನರ ಕಿರುಚಾಟ, Viral Video

ಸ್ವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ಮೊಹಬ್ಬತ್ ನಗರದ ಮಿರ್ಜಾಪುರ ಗ್ರಾಮದ ನಿವಾಸಿ ಎಹ್ಸಾನ್ ಅಲಿ ಅವರು ಏಳು ತಿಂಗಳ ಹಿಂದೆ ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದರು. ಈ ಸಮಯದಲ್ಲಿ ಅವರು ಜೋಡಿ ಹಾವುಗಳನ್ನು ನೋಡಿ, ದೊಣ್ಣೆಗಳಿಂದ ಅವುಗಳ ಮೇಲೆ ದಾಳಿ ನಡೆಸಿದ್ದರು, ಅವುಗಳಲ್ಲಿ ಒಂದು ಹಾವು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎರಡನೇ ಹಾವು ದಾಳಿಯಿಂದ ತಪ್ಪಿಸಿಕೊಂಡು ಹೋಗಿತ್ತು. ಬಳಿಕ ಅವರು ತಮ್ಮ ಮನೆಗೆ ಬಂದಿದ್ದರು. ಆದರೆ ಹಾವಿನ ಸಾವು ತನ್ನ ಜೀವನಕ್ಕೆ ಕುತ್ತು ತರಲಿದೆ ಎಂಬುದನ್ನು ಅವರು ಊಹಿಸಿರಲಿಲ್ಲ.

ಇದನ್ನೂ ಓದಿ-Viral Video: ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಬಾಯ್ ಫ್ರೆಂಡ್ ಗೆ ಕಿಸ್ ಮಾಡಲು ಮುಂದಾದ ಯುವತಿ

ಸತತ ಏಳು ಬಾರಿ ದಾಳಿ ನಡೆಸಿದ ನಾಗರ ಹಾವು
ಅಂದಿನಿಂದ ನಿರಂತರವಾಗಿ ಹಾವು ತನ್ನ ಮೇಲೆ ದಾಳಿ ನಡೆಸುತ್ತಿದೆ ಎಂದು ಎಹ್ಸಾನ್ ಹೇಳಿಕೊಂಡಿದ್ದಾರೆ. 6 ತಿಂಗಳ ಹಿಂದೆ ಮೊದಲ ದಾಳಿ ನಡೆದಿತ್ತು. ಹಾವಿನ ಸಾವಿನ ಬಳಿಕ ಅವರು ಹೊಲದಲ್ಲಿ ಕೆಲಸಕಕ್ಕೆಂದು ಹೋಗಿದ್ದರು. ಅಲ್ಲಿ ಅವರಿಗೆ ಹಾವು ಕಚ್ಚಿದ್ದು, ಅವರ ಸ್ಥಿತಿ ತುಂಬಾ ಹದಗೆಟ್ಟ ಕಾರಣ ಮನೆಯವರು ತರಾತುರಿಯಲ್ಲಿ ಅವರನ್ನು ರಾಮಪುರ್ ಸಮೀಪದ ಬಂಜೀರ್ ಗ್ರಾಮಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ನಂತರ ಅವರ ಜೀವ ಉಳಿಸಲಾಗಿದೆ. ಬುಧವಾರ ಬೆಳಗ್ಗೆ ತನ್ನ ಹೊಲದಲ್ಲಿ ಎಮ್ಮೆಗೆ ಮೇವು ಹಾಕಲು ಹೋಗುತ್ತಿದ್ದಾಗ ಹಾವು ಏಳನೇ ಬಾರಿಗೆ ಕಚ್ಚಿದೆ ಎಂದು ಎಹ್ಸಾನ್ ತಿಳಿಸಿದ್ದಾನೆ. ಹಾವು ಆತನ ಕೈಯ ಹೆಬ್ಬೆರಳನ್ನು ಕಚ್ಚಿ ಮಾಯವಾಗಿದೆ. ಎಹ್ಸಾನ್ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿರುವ ಜನರು ಮತ್ತೆ ಅವರನ್ನು ಬೆನಜೀರ್ ಗ್ರಾಮಕ್ಕೆ ಕರೆದೊಯ್ದು ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News