ಮುಂಬೈ : ಇಂದು (ಮೇ 31) ಅಂಬಾನಿ ಕುಟುಂಬಕ್ಕೆ ಸಂತಸದ ಕ್ಷಣ. ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಅಂಬಾನಿ ಜೊಡಿಗೆ ಹೆಣ್ಣು ಮಗು ಜನಿಸಿರುವುದಾಗಿ ಕುಟುಂಬ ತಿಳಿಸಿದೆ. ಅಂಬಾನಿ ಕಲ್ಚರಲ್ ಸೆಂಟರ್ನ ಗ್ರ್ಯಾಂಡ್ ಲಾಂಚ್ ಸಂದರ್ಭದಲ್ಲಿ ಶ್ಲೋಕಾ ಅವರು ಗರ್ಭಿಣಿಯಾದ ಸಿಹಿ ಸುದ್ದಿಯನ್ನು ಅಂಬಾನಿ ಕುಟುಂಬ ಹಂಚಿಕೊಂಡಿತ್ತು.
ಈಗಾಗಲೇ ಎರಡು ವರ್ಷದ ಮಗನನ್ನು ಹೊಂದಿರುವ ಶ್ಲೋಕಾ ಮತ್ತು ಆಕಾಶ್ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಒಂದು ಪರಿಪೂರ್ಣ ಕುಟುಂಬಕ್ಕೆ ಸಾಕ್ಷಿಯಾಗಿದ್ದಾರೆ. ಆಕಾಶ್ ಅಂಬಾನಿ ತಮ್ಮ ಮೊದಲ ಮಗನಿಗೆ ಪೃಥ್ವಿ ಆಕಾಶ್ ಅಂಬಾನಿ ಎಂದು ನಾಮಕರಣ ಮಾಡಿದ್ದಾರೆ. ಕಳೆದ ವರ್ಷ ಪೃಥ್ವಿ ಹುಟ್ಟು ಹಬ್ಬವನ್ನು ಕುಟುಂಬ ಅದ್ಧೂರಿಯಾಗಿ ಆಚರಣೆ ಮಾಡಿತ್ತು.
ಇದನ್ನೂ ಓದಿ: Rahul Gandhi: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ರಾಹುಲ್ ಗಾಂಧಿ ಗೆಲುವಿನ ಸೂತ್ರ!
ಸದ್ಯ ಮನೆಗೆ ಹೆಣ್ಣು ಮಗುವಿನ ಆಗಮನದಿಂದಾಗಿ ಅಂಬಾನಿ ಕುಟುಂಬ ಸಂತೋಷದಲ್ಲಿದೆ. ಈ ಸಿಹಿ ಸುದ್ದಿ ತಿಳಿಯುತ್ತಲೇ ದಂಪತಿಗಳಿಗೆ ಕುಟುಂಬಸ್ಥರು, ಸ್ನೇಹಿತರು ಮತ್ತು ಹಿತೈಷಿಗಳು ಶುಭ ಕೋರುತ್ತಿದ್ದಾರೆ ಅಲ್ಲದೆ, ಆಶೀರ್ವಾದ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪಾಪರಾಜಿಗಳು ಇನ್ಸ್ಟಾಗ್ರಾಮ್ನಲ್ಲಿ ಶ್ಲೋಕಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಸುದ್ದಿಯನ್ನು ಹಂಚಿಕೊಂಡಾಗಿನಿಂದ ದಂಪತಿಗಳಿಗೆ ಅಭಿನಂದನೆಗಳ ಮಹಾಪೂರವೆ ಹರಿದು ಬಂದಿತ್ತು.
ಶ್ಲೋಕಾ ಮೆಹ್ತಾ, ಪ್ರತಿಭಾವಂತೆ, ಪ್ರಮುಖ ವ್ಯಾಪಾರ ಕುಟುಂಬದಿಂದ ಬಂದವರು. ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಹಿರಿಯ ಮಗ ಆಕಾಶ್ ಅಂಬಾನಿ ಅವರ ವಿವಾಹವು ರಾಷ್ಟ್ರದ ಗಮನವನ್ನು ಸೆಳೆದಿತ್ತು. ಅದ್ಧೂರಿ ವಿವಾಹ ಮಹೋತ್ಸವದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಎರಡು ಪ್ರಭಾವಿ ಕುಟುಂಬಗಳ ಮದುವೆ ಅಂದ್ರೆ ಯಾವ ರೀತಿ ಇರುತ್ತೆ ಅನ್ನೋದನ್ನ ನೀವೇ ಊಹಿಸಿಕೊಳ್ಳಿ. ಸದ್ಯ ಅಂಬಾನಿ ಕುಟುಂಬಕ್ಕೆ ಮಹಾಲಕ್ಷ್ಮಿಆಗಮನವಾಗಿದ್ದು, ಸಂತಸ ಹೆಚ್ಚಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ