ರಾಹುಲ್ ಗಾಂಧಿಯವರ ದೇವಸ್ತಾನಗಳ ಭೇಟಿ ಬಿಜೆಪಿಯಲ್ಲಿ ನಡುಕ ಹುಟ್ಟಿಸಿದೆ -ಶಿವಸೇನಾ

    

Last Updated : Feb 15, 2018, 04:00 PM IST
ರಾಹುಲ್ ಗಾಂಧಿಯವರ ದೇವಸ್ತಾನಗಳ ಭೇಟಿ ಬಿಜೆಪಿಯಲ್ಲಿ ನಡುಕ ಹುಟ್ಟಿಸಿದೆ -ಶಿವಸೇನಾ title=

ಮುಂಬೈ: ಇತ್ತೀಚಿಗೆ ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರು ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುವುದು ಬಿಜೆಪಿಯಲ್ಲಿ ನಡುಕ ಹುಟ್ಟಿಸಿದೆ ಎಂದು ಶಿವಸೇನಾ ಅಭಿಪ್ರಾಯಪಟ್ಟಿದೆ.ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಪ್ರಸ್ತಾಪಿಸಿರುವ ಶಿವಸೇನಾ, ಕಾಂಗ್ರೆಸ್ ಪಕ್ಷವು  ಹಿಂದುಧರ್ಮವನ್ನು ಸ್ವೀಕರಿಸಿ ಪ್ರತಿಪಾದಿಸಿದ್ದಲ್ಲಿ ಬಿಜೆಪಿಯವರಿಗೆ ಪ್ರತಿ ಉತ್ತರ ನೀಡಲು ಯಾವುದೇ ವಿಷಯಗಳು ಉಳಿಯುವುದಿಲ್ಲ ಎಂದು ಹೇಳಿದೆ.

ಬಿ.ಎಸ್.ಯಡಿಯೂರಪ್ಪನವರು ಇತ್ತೀಚಿಗೆ ರಾಹುಲ್ ಗಾಂಧಿಯವರು ಮಾಂಸಾಹಾರವನ್ನು ಸೇವಿಸಿ ದೇವಸ್ತಾನ ಹೋಗಿದ್ದರು ಎನ್ನುವ ಆಪಾದನೆಗೆ ಪ್ರತಿಕ್ರಯಿಸಿರುವ ಶಿವಸೇನಾ ಎರಡು ಪಕ್ಷಗಳು ಮಣ್ಣು ಎರೆಚುವ ಕೆಲಸ ಮಾಡುತ್ತಿವೆ. ಆ ಮೂಲಕ ಜನರ ಭಾವನೆಗಳ ಜೊತೆಗೆ ಆಟವಾಡುತ್ತಿವೆ ಎಂದು  ಆರೋಪಿಸಿದೆ.ಆಹಾರದಲ್ಲಿ ರಾಜಕೀಯ ಮಾಡುವುದರ ಬದಲಾಗಿ ಪಕ್ಷಗಳು ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದು ಅದು ಸಲಹೆ ನೀಡಿದೆ.

ಅಲ್ಲದೆ ಕರ್ನಾಟಕದಲ್ಲಿ ಯಡಿಯೂರಪ್ಪನವರ ಅಧಿಕಾರವಧಿಯಲ್ಲಿ  ಮರಾಠ ಸಮುದಾಯಗಳ ಮೇಲಾದ ಹಲ್ಲೆಗಳ ಬಗ್ಗೆ ಶಿವಸೇನಾ ಖಾರವಾಗಿ ಪ್ರತಿಕ್ರಯಿಸಿದೆ. 

Trending News