ನವದೆಹಲಿ: ಹೌದು,ಇಂತಹದ್ದೊಂದು ನಿಯಮವನ್ನು ಪುಣೆ ಮಹಾನಗರ ಪಾಲಿಕೆ ಸ್ವಚ್ಛ ನಗರಿಯ ಭಾಗವಾಗಿ ಜಾರಿಗೊಳಿಸಲು ಹೊರಟಿದೆ.
ಈ ನೂತನ ಪುಣೆ ಮಹಾನಗರ ಪಾಲಿಕೆ ನಿಯಮದ ಪ್ರಕಾರ ಒಂದು ವೇಳೆ ನೀವು ರಸ್ತೆಯಲ್ಲಿ ಉಗುಳಿದ್ದೆ ಆದಲ್ಲಿ ಅದನ್ನು ಸ್ವಚ್ಛ ಮಾಡಲು ನೀವು ಸಿದ್ದರಾಗಬೇಕು ಇಂತಹ ನಿಯಮದ ಮೂಲಕ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಗೊಳಿಸು ಪಾಲಿಕೆ ಯೋಜನೆ ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿರ್ಧಾರವನ್ನು ಕೇವಲ ದಂಡ ಪಾವತಿ ಮಾಡುವುದರ ಮೂಲಕವಷ್ಟೇ ಸ್ವಚ್ಚತೆಯನ್ನು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲಾಗಿದೆ ಎಂದು ಪುಣೆ ಮಹಾನಗರ ಪಾಲಿಕೆ ಅಧಿಕಾರಿ ಜ್ನ್ಯಾನೆಶ್ವರ್ ಮೊಲಕ ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಈ ಯೋಜನೆಯನ್ನು ಬಿಬ್ವೆವಾಡಿ, ಆವುಂದ್, ಯರವಾಡ, ಕಸ್ಬಾ, ಘೋಲೆ ರಸ್ತೆ, ಹೀಗೆ ಐದು ವಾರ್ಡ್ ಗಳಲ್ಲಿ ಜಾರಿಗೆ ತರಲಾಗಿತ್ತು. ಮೊಲಕ್ ಅವರು ಹೇಳುವಂತೆ " ಕಳೆದ ಎಂಟು ದಿನಗಳಲ್ಲಿ ಪಾಲಿಕೆ ಅಧಿಕಾರಿಗಳು ಒಟ್ಟು 156 ಜನರನ್ನು ಹಿಡಿದು ಅವರಿಗೆ 150 ರೂ ದಂಡವಿಧಿಸಿದ್ದು ಮಾತ್ರವಲ್ಲದೆ ಅವರನ್ನು ಉಗುಳಿರುವ ಭಾಗವನ್ನು ಸ್ವಚ್ಛಗೊಳಿಸುವಂತೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ. ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ 2019ಕ್ಕೂ ಮುನ್ನ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಪುಣೆ ಮಹಾನಗರ ಪಾಲಿಕೆಯು ರಸ್ತೆ ಮೇಲೆ ಉಗುಳುವುದನ್ನು ವಿರೋಧಿಸುವ ದಿನವನ್ನು ಪ್ರತಿ ಬುಧುವಾರದಂದು ಹಮ್ಮಿಕೊಳ್ಳುತ್ತಿತ್ತು, ಆದರೆ ಅದು ಕಾಲಾಂತರದಲ್ಲಿ ಸ್ಥಗೀತಗೊಂಡಿತು.