ನವದೆಹಲಿ : ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು (Privatization) ವಿರೋಧಿಸಿ ದೇಶಾದ್ಯಂತ ವಿದ್ಯುತ್ ವಲಯದ ನೌಕರರು ಮಾರ್ಚ್ 28 ಮತ್ತು 29 ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ (Power Sector Employees). ಬುಧವಾರ ನಡೆದ ವಿದ್ಯುತ್ ನೌಕರರು ಮತ್ತು ಎಂಜಿನಿಯರ್ಗಳ ರಾಷ್ಟ್ರೀಯ ಸಮನ್ವಯ ಸಮಿತಿ (NCCOEEE) ಸಭೆಯಲ್ಲಿ ಈ ರಾಷ್ಟ್ರವ್ಯಾಪಿ ಮುಷ್ಕರದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿಯೇ ಈ ಎರಡು ದಿನಗಳಲ್ಲಿ ದೇಶಾದ್ಯಂತ ವಿದ್ಯುತ್ ಸಮಸ್ಯೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ.
ವಿದ್ಯುತ್ ನೌಕರರೊಂದಿಗೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಕಾರ್ಮಿಕರು ಕೂಡ ಎರಡು ದಿನಗಳ ಕಾಲ ಮುಷ್ಕರ ನಡೆಸಲಿದ್ದಾರೆ (Power Sector Employees Strike). ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಎಲ್ಲಾ ರಾಜ್ಯಗಳ ವಿದ್ಯುತ್ ನೌಕರರು ಕೂಡ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಲ್ ಇಂಡಿಯಾ ಪವರ್ ಎಂಜಿನಿಯರ್ಸ್ ಫೆಡರೇಶನ್ ಅಧ್ಯಕ್ಷ ಶೈಲೇಂದ್ರ ದುಬೆ ತಿಳಿಸಿದ್ದಾರೆ (Privatization).
ಇದನ್ನೂ ಓದಿ : Supreme Court : ಕೊರೋನಾದಿಂದ ಮೃತ ಪಟ್ಟವರಿಗೆ ಪರಿಹಾರದ ಕುರಿತು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್
ಮುಖ್ಯ ಬೇಡಿಕೆಗಳು ಯಾವುವು ?
ಕೇಂದ್ರದ ಖಾಸಗೀಕರಣ ನೀತಿಯಿಂದ ನೌಕರರಲ್ಲಿ ನಿರಾಸೆ ಉಂಟಾಗಿದೆ ಎಂದು ಶೈಲೇಂದ್ರ ದುಬೆ ಹೇಳಿದ್ದಾರೆ. ವಿದ್ಯುತ್ (ತಿದ್ದುಪಡಿ) ಮಸೂದೆ 2021 ಹಿಂಪಡೆಯಬೇಕು ಮತ್ತು ಎಲ್ಲಾ ರೀತಿಯ ಖಾಸಗೀಕರಣ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂಬುದು ವಿದ್ಯುತ್ ನೌಕರರು ಮತ್ತು ಎಂಜಿನಿಯರ್ಗಳ ಪ್ರಮುಖ ಬೇಡಿಕೆಗಳಾಗಿವೆ. ಇದಲ್ಲದೇ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅದರಲ್ಲೂ ಲಾಭ ಗಳಿಸುತ್ತಿರುವ ಚಂಡೀಗಢ, ದಾದ್ರಾ ನಗರ, ಹವೇಲಿ, ದಮನ್ ದಿಯು ಮತ್ತು ಪುದುಚೇರಿಯಲ್ಲಿ ವಿದ್ಯುತ್ ಖಾಸಗೀಕರಣ ಮಾಡುವ ನಿರ್ಧಾರವನ್ನು ತಕ್ಷಣವೇ ರದ್ದುಗೊಳಿಸಬೇಕು. ವಿದ್ಯುತ್ ಮಂಡಳಿಗಳ ವಿಸರ್ಜನೆಯ ನಂತರ ನೇಮಕಗೊಂಡ ಎಲ್ಲಾ ವಿದ್ಯುತ್ ನೌಕರರಿಗೆ ಹಳೆಯ ಪಿಂಚಣಿ (Pension) ಯೋಜನೆಯ ಲಾಭ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿತ್ತು ಕೊಂದು ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ಬ್ಯಾಂಕ್ ನೌಕರರೂ ನಡೆಸಲಿದ್ದಾರೆ ಮುಷ್ಕರ :
ಮತ್ತೊಂದೆಡೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೌಕರರು ಖಾಸಗೀಕರಣವನ್ನು ವಿರೋಧಿಸಿ ಮಾರ್ಚ್ 28-29 ರ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ವಿವಿಧ ಬ್ಯಾಂಕ್ಗಳ ನೌಕರರ ಸಂಘಟನೆಗಳು ಮಾರ್ಚ್ 28-29 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಇದು ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಎಸ್ಬಿಐ (State Bank of India) ಗ್ರಾಹಕರು ಮತ್ತು ಷೇರು ಮಾರುಕಟ್ಟೆ ಹೂಡಿಕೆದಾರರನ್ನು ಈಗಾಗಲೇ ಮುಷ್ಕರದ ಬಗ್ಗೆ ಎಚ್ಚರಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣ ಮತ್ತು ಬ್ಯಾಂಕ್ ಕಾನೂನು ತಿದ್ದುಪಡಿ ಮಸೂದೆ 2021 ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಇದನ್ನೂ ಓದಿ : Vultures Emergency Meeting: ರಣಹದ್ದುಗಳು ತುರ್ತು ಸಭೆ; ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.